4,690 ಜನರ ಬಂಧನ; 149 ಅಪರಾಧಿಗಳು; ಇಷ್ಟಕ್ಕೂ ಕಾರಣವೇನು ಗೊತ್ತೇ?

ಹೊಸದಿಲ್ಲಿ: ಕಳೆದ ಮೂರು ವರ್ಷಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ 4,690 ಜನರನ್ನು ಬಂಧಿಸಲಾಗಿದೆ. ಈ ಪೈಕಿ 149 ಜನರು ಅಪರಾಧಿಗಳು ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಮಾತನಾಡಿ, ʻ1,421 ಜನರನ್ನು 2018ರಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಲಾಗಿದೆ. 2019ರಲ್ಲಿ 1948 ಮತ್ತು 2020 ರಲ್ಲಿ 1321 ಜನರನ್ನು ಬಂಧಿಸಲಾಗಿದೆ. ಇದರಲ್ಲಿ 2018 ರಲ್ಲಿ 35 ಜನರು ಅಪರಾಧಿಗಳಾಗಿದ್ದು, 2019ರಲ್ಲಿ 34 ಮತ್ತು 2020ರಲ್ಲಿ 80 ಜನರು ಅಪರಾಧಿಗಳಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ʻಕಾನೂನಿನ ದುರುಪಯೋಗವನ್ನು ತಡೆಗಟ್ಟಲು ಯುಎಪಿಎ ಅಡಿಯಲ್ಲಿಯೇ ಅಂತರ್ಗತ ಸುರಕ್ಷತೆಗಳು ಸೇರಿದಂತೆ ಸಾಕಷ್ಟು ಸಾಂವಿಧಾನಿಕ, ಸಾಂಸ್ಥಿಕ ಮತ್ತು ಶಾಸನಬದ್ಧ ಕ್ರಮಗಳು ಸೇರಿವೆ’ ಎಂದು ಅವರು ಹೇಳಿದರು.

× Chat with us