ಕರ್ನಾಟಕದಲ್ಲಿ ಕೊನೆಯ 24 ಗಂಟೆಗಳಲ್ಲಿ ಒಟ್ಟು 328 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಹಂಚಿಕೊಂಡಿದೆ. 409 ಜನ ಡಿಸ್‌ಚಾರ್ಜ್ ಆಗಿದ್ದು, ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1159 ಇದೆ. ಕೊನೆಯ 24 ಗಂಟೆಗಳಲ್ಲಿ 7205 ಟೆಸ್ಟ್‌ಗಳು ನಡೆದಿವೆ, 6418 ಆರ್‌ಟಿಪಿಸಿಆರ್ ಟೆಸ್ಟ್‌ಗಳು ನಡೆದಿವೆ ಹಾಗೂ 787 ರ್ಯಾಟ್ ಟೆಸ್ಟ್‌ಗಳು ನಡೆದಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 4.55% ಇದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ.
ಒಟ್ಟು 1159 ಸಕ್ರಿಯ ಪ್ರಕರಣಗಳ ಪೈಕಿ 1087 ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡಲಾಗಿದ್ದು, 72 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ 51 ಸೋಂಕಿತರು ಜನರಲ್ ಬೆಡ್‌ನಲ್ಲಿದ್ದು, 9 ಸೋಂಕಿತರು ಆಮ್ಲಜನಕ ಸಪೋರ್ಟ್ ಐಸೋಲೇಷನ್ ಬೆಡ್‌ನಲ್ಲಿದ್ದಾರೆ, 9 ಮಂದಿ ಐಸಿಯುನಲ್ಲಿದ್ದಾರೆ ಹಾಗೂ 3 ಸೋಂಕಿತರು ವೆಂಟಿಲೇಟರ್ ಸೌಲಭ್ಯವಿರುವ ಐಸಿಯು ವಾರ್ಡ್‌ನಲ್ಲಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಮೈಸೂರಿನಲ್ಲಿ 26, ಮಂಡ್ಯದಲ್ಲಿ 7, ಹಾಗೂ ಚಾಮರಾಜನಗರದಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿ ಒಟ್ಟು 76, ಮಂಡ್ಯದಲ್ಲಿ 26, ಕೊಡಗಿನಲ್ಲಿ 2 ಹಾಗೂ ಚಾಮರಾಜನಗರದಲ್ಲಿ 17 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು: ರಾಜ್ಯದಲ್ಲಿ ರಣ ಬಿಸಿಲ ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗುತ್ತಿದ್ದು, ಜನರು ಬಿಸಿಲ…
ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಳೆದ ೪೦ ದಿನಗಳಿಂದಲೂ ಯುದ್ಧ ನಡೆಯುತ್ತಿರುವುದರಿಂದ ವಿವಿಧ ದೇಶಗಳು ಸಂಕಷ್ಟಕ್ಕೆ ಸಿಲುಕಿವೆ. ಪೋಪ್ ೧೪ನೇ ಲಿಯೋರವರು…
ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಸರ್ಕಾರ ನೀಡುವ ಸ್ಕಾಲರ್‌ಶಿಪ್ ದೊಡ್ಡ ಸಹಾಯವಾಗಿದೆ. ಆದರೆ ವಸತಿ ವೆಚ್ಚ,ಪುಸ್ತಕಗಳು ಹಾಗೂ…
ಕೊಲ್ಲಿಯಲ್ಲಿ ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿದ್ದ ಯುದ್ಧದ ನಿಲುಗಡೆಗಾಗಿ ಕರೆಯಲಾಗಿದ್ದ ಪಾಕಿಸ್ತಾನ ನೇತೃತ್ವದ ಸಂಧಾನ ಸಭೆ ವಿಫಲವಾಗುವುದರೊಂದಿಗೆ ಕೊಲ್ಲಿಯಲ್ಲಿ…
ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ರಸ್ತೆ ಹಾಳಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹರ ಸಾಹಸ ಮಾಡಬೇಕಾಗಿದೆ. ರಸ್ತೆಯ…
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿ ಜ್ಯೂಸ್ ಸೆಂಟರ್, ಕಾಫಿ, ಟೀ ಅಂಗಡಿಗಳು ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿ, ಪ್ಲಾಸ್ಟಿಕ್ ಕಪ್‌ಗಳನ್ನು…