ಆನೆಕೆರೆಯಲ್ಲಿ ಮೂರು ಹುಲಿಗಳು ಏಕಕಾಲಕ್ಕೆ ಪ್ರತ್ಯಕ್ಷ; ಮುಂದೇನಾಯ್ತು..?

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ(ಬಿಆರ್‌ಟಿ) ಅರಣ್ಯ ಪ್ರದೇಶದದಲ್ಲಿ ಹುಲಿಗಳ ದರ್ಶನ ಕಂಡು ಪ್ರವಾಸಿಗರು ಫಿದಾ ಆಗಿದ್ದಾರೆ.

ಹೌದು.. ದಟ್ಟ ಕಾಡಿನಲ್ಲಿ ಹುಲಿಗಳು ಕಾಣುವುದೇ ಅಪರೂಪ. ಅದಕ್ಕೆ ಅಪವಾದ ಎಂಬಂತೆ 3 ಹುಲಿಗಳು ಪ್ರವಾಸಿಗರಿಗೆ ಒಮ್ಮೆಲೇ ದರ್ಶನ ನೀಡಿ, ಖುಷಿ ಕೊಟ್ಟಿವೆ.

ಬಿಆರ್‌ಟಿಗೆ ಸಫಾರಿಗೆ ತೆರಳಿದ್ದ ವೇಳೆ ಕೆ.ಗುಡಿ ಭಾಗದ ಆನೆಕೆರೆಯಲ್ಲಿ ಮೂರು ಹುಲಿಗಳು ಒಟ್ಟಿಗೆ ಹೆಜ್ಜೆಹಾಕುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ಅರಣ್ಯಾಧಿಕಾರಿಗಳು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್‌ ವೈರಲ್‌ಆಗಿದೆ.3 tigers

× Chat with us