ಮನೆಯ ಹಿತ್ತಲಲ್ಲೇ ಬೆಳೆದಿದ್ದ 20 ಕೆ.ಜಿ.ಯಷ್ಟು ಗಾಂಜಾ!; ಮುಂದೇನಾಯ್ತು ನೋಡಿ…..

ಸರಗೂರು: ಮನೆಯ ಹಿಂಭಾಗದಲ್ಲಿ ಬೆಳೆದಿದ್ದಸುಮಾರು 20 ಕೆ.ಜಿ ತೂಕದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಳೆಹೆಗ್ಗುಡಿಲು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರಾಮನಾಯಕ (28) ಬಂಧಿತ ಆರೋಪಿ. ಈತ ತನ್ನ ಮನೆಯ ಹಿತ್ತಲಿನಲ್ಲಿ ಸುಮಾರು 20 ಕೆ.ಜಿ. ತೂಕದ 3-4 ಅಡಿ ಎತ್ತರದ 16 ಗಾಂಜಾ ಗಿಡಗಳನ್ನು ಬೆಳೆದಿದ್ದ ಎನ್ನಲಾಗಿ, ಖಚಿತ ಮಾಹಿತಿಯ ಮೇರೆಗೆ ಸರಗೂರು ಠಾಣಾ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ವೃತ್ತ ನಿರೀಕ್ಷಕ ಆನಂದ್, ಪಿಎಸ್‍ಐ ಶ್ರವಣ್ ದಾಸ್ ರೆಡ್ಡಿ ನೇತೃತ್ವದಲ್ಲಿ ಮಂಗಳವಾರ ಗ್ರಾಮಕ್ಕೆ ತೆರಳಿ ದಾಳಿ ನಡೆಸಿದ ವೇಳೆ ರಾಮನಾಯಕ ತನ್ನ ಮನೆಯ ಹಿಂಭಾಗದಲ್ಲಿ ಅಕ್ರಮ ಗಾಂಜಾ ಗಿಡಗಳನ್ನು ಬೆಳೆದಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಆರೋಪಿಯನ್ನು ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.

× Chat with us