ಸೆಲ್ಫೀಗಾಗಿ ಕೆರೆ ಏರಿ ಮೇಲೆ ನಿಂತಿದ್ದ ಇಬ್ಬರು ಯುವಕರು ನೀರು ಪಾಲು

ಮೈಸೂರು: ಸೆಲ್ಫಿ ತೆಗೆದುಕೊಳ್ಳಲು ಕೆರೆ ಏರಿ ಮೇಲೆ ನಿಂತಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಹೊಸಕೋಟೆ ಬಳಿ ಕೆಂಚನ ಕೆರೆಯಲ್ಲಿ ಸಂಭವಿಸಿದೆ. ಮೂವರು ಸ್ನೇಹಿತರು ಸೇರಿ ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಲುಜಾರಿ ಇಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಅಬ್ದುಲ್ಲಾ(21) ಹಾಗೂ ತನ್ವೀರ್(20) ಮೃತ ವಿದ್ಯಾರ್ಥಿಗಳು.

ಈ ಪ್ರಕರಣ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪೊಲೀಸರು ಮೃತ ದೇಹಗಳನ್ನು ಹುಣಸೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

× Chat with us