ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರಿಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಪತ್ರಕರ್ತರಾದ ತರುಣ್ ತೇಜ್‌ಪಾಲ್, ಅನಿರುದ್ಧ್ ಬೆಹ್ಲ್, ಮ್ಯಾಥ್ಯೂ ಸ್ಯಾಮ್ಯುಯೆಲ್ ಮತ್ತು ತೆಹೆಲ್ಕಾ ಡಾಟ್ ಕಾಮ್‌ಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.
2001ರಲ್ಲಿ ತೆಹಲ್ಕಾ ಕುಟುಕು ಕಾರ್ಯಾಚರಣೆ ನಡೆದಿತ್ತು. ಈ ವೇಳೆ ಅಹ್ಲುವಾಲಿಯಾ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಭ್ರಷ್ಟಾಚಾರದ ಗಂಭೀರ ಆರೋಪಗಳಿಂದ ಸಾರ್ವಜನಿಕರ ದೃಷ್ಟಿಯಲ್ಲಿ ತನ್ನ ಘನತೆ ಕಳೆದುಕೊಂಡಿರುವುದು ಮಾತ್ರವಲ್ಲದೆ ಅವರ ಚಾರಿತ್ರ್ಯಕ್ಕೂ ಕಳಂಕ ಉಂಟಾಗಿದ್ದು ಫಿರ್ಯಾದಿಯ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಹೇಳಿ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ಪೀಠ ಈ ಆದೇಶ ನೀಡಿದೆ.
ಮೇಜರ್ ಜನರಲ್ ಎಂಎಸ್ ಅಹ್ಲುವಾಲಿಯಾ ಅವರು ಸಲ್ಲಿಸಿದ್ದ ಮೊಕದ್ದಮೆಯನ್ನು ಪುರಸ್ಕರಿಸಿದ್ದ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ನೀನಾ ಬನ್ಸಲ್ ಕೃಷ್ಣ ಅವರು, ಭಾರತೀಯ ಸೇನಾ ಅಧಿಕಾರಿಗೆ ಮಾನಹಾನಿ ಮಾಡಿದ್ದಕ್ಕಾಗಿ ತರುಣ್ ತೇಜ್ಪಾಲ್ ಮತ್ತು ಇಬ್ಬರು ಪತ್ರಕರ್ತರಾದ ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು 2 ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಆದೇಶಿಸಿದೆ.
ಈ ಮೊತ್ತವನ್ನು ಸುದ್ದಿ ಪೋರ್ಟಲ್ Tehelka.com, ಅದರ ಮಾಲೀಕ ಕಂಪನಿ M/s ಬಫಲೋ ಕಮ್ಯುನಿಕೇಷನ್ಸ್, ಅದರ ಮಾಲೀಕರಾದ ತರುಣ್ ತೇಜ್ಪಾಲ್ ಮತ್ತು ಅನಿರುದ್ಧ್ ಬೆಹ್ಲ್ ಮತ್ತು ಮ್ಯಾಥ್ಯೂ ಸ್ಯಾಮ್ಯುಯೆಲ್ ಪಾವತಿಸಬೇಕಿದೆ.
ಪ್ರಾಮಾಣಿಕ ಸೇನಾಧಿಕಾರಿಯ ಪ್ರತಿಷ್ಠೆಗೆ ಧಕ್ಕೆ ಉಂಡು ಮಾಡಿರುವ ಮತ್ತೊಂದು ದೊಡ್ಡ ಪ್ರಕರಣ ಇಲ್ಲ. ಇನ್ನು ಘಟನೆ ನಡೆದು 23 ವರ್ಷಗಳ ನಂತರ ಕ್ಷಮೆಯಾಚಿಸುವುದು ಅಸಮರ್ಪಕ ಮಾತ್ರವಲ್ಲದೆ ಅಸಂಬದ್ಧವಾಗಿದೆ ಎಂದು ನ್ಯಾಯಾಲಯ ಹೇಳಿದೆ.
2001ರಲ್ಲಿ ನ್ಯೂಸ್ ಪೋರ್ಟಲ್‌ನಿಂದ ಉದ್ದೇಶಿತ ಕುಟುಕು ಕಾರ್ಯಾಚರಣೆ ಬಿಡುಗಡೆ ಮಾಡಲಾಗಿತ್ತು. ಆದಾಗ್ಯೂ, ನ್ಯೂಸ್ ಪೋರ್ಟಲ್‌ನೊಂದಿಗೆ ಒಪ್ಪಂದ ಮಾಡಿಕೊಂಡ ನಂತರ ಪ್ರಶ್ನಾರ್ಹ ಸುದ್ದಿಯನ್ನು ಪ್ರಸಾರ ಮಾಡಿದ ಝೀ ಟೆಲಿಫಿಲ್ಮ್ ಲಿಮಿಟೆಡ್ ಮತ್ತು ಅದರ ಅಧಿಕಾರಿಗಳ ಕಡೆಯಿಂದ ಫಿರ್ಯಾದುದಾರರು ಯಾವುದೇ ಮಾನನಷ್ಟ ಕೃತ್ಯವನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ನ್ಯೂಸ್ ಪೋರ್ಟಲ್ 2001ರ ಮಾರ್ಚ್ 13ರಂದು ಹೊಸ ರಕ್ಷಣಾ ಸಾಧನಗಳ ಆಮದುಗೆ ಸಂಬಂಧಿಸಿದ ರಕ್ಷಣಾ ವ್ಯವಹಾರಗಳಲ್ಲಿ ಭ್ರಷ್ಟಾಚಾರವನ್ನು ಆರೋಪಿಸುವ ಕುಟುಕು ಕಾರ್ಯಾಚರಣೆ ಕಾರ್ಯಕ್ರಮವನ್ನು ಪ್ರಕಟಿಸಿತು. ‘ಆಪರೇಷನ್ ವೆಸ್ಟ್ ಎಂಡ್’ ಸುದ್ದಿಯಲ್ಲಿ ತನಗೆ ಮಾನಹಾನಿ ಮಾಡಲಾಗಿದೆ ಎಂದು ವಕೀಲ ಚೇತನ್ ಆನಂದ್ ಮೂಲಕ ಫಿರ್ಯಾದಿ ಹೇಳಿಕೊಂಡಿದ್ದರು. ಅದನ್ನು ತಪ್ಪಾಗಿ ಪ್ರಸಾರ ಮಾಡಲಾಗಿದ್ದು, ಲಂಚ ಪಡೆದಿದ್ದಾರೆ ಎಂದು ವರದಿಯಾಗಿತ್ತು.
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…
ನ್ಯೂ ಇಯರ್ ಸೆಲಬ್ರೇಷನ್‌ಗೆ ದಿನಗಣನೆ ಬೆಂಗಳೂರು: 2024ನ್ನು ಮುಗಿಸಿ 2025ನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿಯೇ ತುದಿಗಾಲಲ್ಲಿ ಕಾತರದಿಂದ ಕಾಯುತ್ತಿದೆ. ಸದ್ಯ…