ಚಾಮರಾಜನಗರ: ಹತ್ತು ಕುರಿಗಳ ಕೊಂದು ಹಾಕಿದ ಚಿರತೆ!

ಚಾಮರಾಜನಗರ: ರೈತರೊಬ್ಬರು ಜಮೀನಿನಲ್ಲಿ ನಿರ್ಮಿಸಿದ್ದ ಕುರಿ ಕೊಟ್ಟಿಗೆಗೆ ನುಗ್ಗಿರುವ ಚಿರತೆ 10 ಕುರಿಗಳನ್ನು ರಕ್ತ ಹೀರಿ ಕೊಂದು ಹಾಕಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಅಮಚವಾಡಿ ಗ್ರಾಮದ ಹೊರವಲಯದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಗ್ರಾಮದ ಮಾದೇಗೌಡ ಅವರು ಕುರಿಗಳನ್ನು ಕಳೆದುಕೊಂಡವರು. ಕೊಟ್ಟಿಗೆ ಹಾಕಿದ್ದ ಬಿದಿರಿನ ತಡಿಕೆಯನ್ನು ಹಾರಿ ಕುರಿ ಹಿಂಡಿನ ಮೇಲೆ ದಾಳಿ ಮಾಡಿರುವ ಚಿರತೆ, ಒಂದಾದ ನಂತರ ಒಂದರಂತೆ 10 ಕುರಿಗಳ ರಕ್ತ ಹೀರಿದೆ‌‌. ಒಂದೇ ಸಮನೆ ಕುರಿಗಳ ಕಿರುಚಾಟ ಕೇಳಿದ ಮನೆಮಂದಿ ಕೊಟ್ಟಿಗೆಗೆ ಬಂದ ವೇಳೆಗೆ ಚಿರತೆ ಪರಾರಿಯಾಗಿದೆ.

25 ಕುರಿಗಳಲ್ಲಿ 15 ಕುರಿ ಬದುಕುಳಿದಿವೆ. ಅದರಲ್ಲೂ ಮೂರು ಕುರಿಗಳಿಗೆ ಗಾಯವಾಗಿದ್ದು ಚಿರತೆ ಬರೀ ರಕ್ತ ಹೀರಿ 10 ಕುರಿಗಳನ್ನು ಸಾಯಿಸಿದೆ. ಅಂದಾಜು 1 ಲಕ್ಷದಷ್ಟು ರೂ ಮೌಲ್ಯದ ನಷ್ಟ ಉಂಟಾಗಿದ್ದು, ತಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

× Chat with us