1,610 ಕೋಟಿ ಪ್ಯಾಕೇಜ್‌ ಘೋಷಿಸಿದ ಸಿಎಂ

ಕೊರೊನಾ, ಲಾಕ್‌ಡೌನ್‌ನಿಂದಾಗಿ ಕಂಗೆಟ್ಟಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಕೈಗಾರಿಕೆಗಳನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಹಣಕಾಸಿನ ಸ್ಥಿತಿಗತಿ ಸರಿಯಿಲ್ಲದಿದ್ದರೂ 1,610 ಕೋಟಿ ಪ್ಯಾಕೇಜ್‌ ನೀಡಲಾಗುತ್ತಿದೆ ಎಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ಕಾರ್ಮಿಕರನ್ನು ಅವರ ಊರುಗಳಿಗೆ ಸುಮಾರು 3,000 ಬಸ್‌, ರೈಲುಗಳಲ್ಲಿ ಕಳುಹಿಸಲಾಗಿದೆ. ಗುರುವಾರ ಬಸ್‌ಗಳಲ್ಲಿ ವಲಸೆ ಕಾರ್ಮಿಕರನ್ನು ಊರಿಗೆ ಕಳುಹಿಸುವ ಪ್ರಕ್ರಿಯೆ ನಿಲ್ಲಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸ್ಪಷ್ಟಪಡಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಮಂದಿರಗಳು, ಕಲ್ಯಾಣ ಮಂಟಪಗಳು ಸೇರಿದಂತೆ ವಿವಿಧೆಡೆ ನಡೆಯಬೇಕಿದ್ದ ಕಾರ್ಯಕ್ರಮಗಳು ಸ್ಥಗಿತಗೊಂಡಿದ್ದರಿಂದ ಬೇಡಿಕೆ ಇಲ್ಲದೇ ಹೂವು ಬೆಳೆಗಾರರಿಗೆ ನಷ್ಟ ಉಂಟಾಗಿದೆ. 11,687 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬೆಳೆದಿದ್ದ ಹೂ ಮಾರಾಟವಾಗದೇ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲು ಗರಿಷ್ಠ 1 ಹೆಕ್ಟೇರ್‌ಗೆ ಸೀಮಿತವಾಗಿ 25,000 ರೂ. ಪರಿಹಾರ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಆಗ ನಕ್ಸಲೆ, ಈಗ ಆದಿವಾಸಿಗಳ ಪಾಲಿನ ಅನ್ನಪೂರ್ಣೆ

ಯಾರಿಗೆ ಎಷ್ಟು ಪರಿಹಾರ?

* 60,000 ಮಂದಿ ಅಗಸರು, 2.30 ಲಕ್ಷ ಜನ ಕ್ಷೌರಿಕರು- 5,000 ರೂ. ಒಂದು ಬಾರಿಯ ಪರಿಹಾರ.

* 7.5 ಲಕ್ಷ ಮಂದಿ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ- 5,000 ರೂ.

* ನಷ್ಟದಲ್ಲಿರುವ ಸಣ್ಣ, ಅತಿ ಸಣ್ಣ ಉದ್ದಿಮೆಗಳ ಎರಡು ತಿಂಗಳ ವಿದ್ಯುತ್‌ ಫಿಕ್ಸಡ್‌ ಶುಲ್ಕ ಮನ್ನ.

* ಸೂಕ್ತ ರೀತಿಯಲ್ಲಿ ವಿದ್ಯುತ್‌ ಬಿಲ್‌ ಪಾವತಿಸುವವರಿಗೆ ಪ್ರೋತ್ಸಾಹಕವಾಗಿ ಶೇ. 1ರಷ್ಟು ರಿಯಾಯಿತಿ. ವಿಳಂಬ ಪಾವತಿಗಾಗಿ ಬಡ್ಡಿ ದರ ಶೇ. 50 ಹಾಗೂ ಶೇ. 75ರಷ್ಟು ಕಡಿತಗೊಳಿಸಲಾಗುತ್ತದೆ. ಮುಂಗಡವಾಗಿ ವಿದ್ಯುತ್‌ ಬಿಲ್‌ ಪಾವತಿಗೆ ವಾರ್ಷಿಕ ಶೇ. 6 ರಿಯಾಯಿತಿ.

ಆಂದೋಲನ ಈ-ಪೇಪರ್ ಓದಲು ಇಲ್ಲಿ ಕ್ಲಿಕ್ ಮಾಡಿ

* ಬೃಹತ್‌ ಕೈಗಾರಿಕೆಗಳು 2 ತಿಂಗಳ ವಿದ್ಯುತ್‌ ಪಾವತಿಯಾಗದಿದ್ದರೂ ದಂಡ ವಸೂಲಿ ಇಲ್ಲ.

* ‘ನೇಕಾರ ಸಮ್ಮಾನ್‌ ಯೋಜನೆ’ ಹೊಸ ಯೋಜನೆ– 50 ಸಾವಿರ ಕೈಮೊಗ್ಗ ನೇಕಾರರಿಗೆ 2,000 ರೂ. ಪರಿಹಾರ.

* ಕಟ್ಟಡ ಕಾರ್ಮಿಕರಿಗೆ 3,000 ರೂ. ಹೆಚ್ಚುವರಿಯಾಗಿ ಪರಿಹಾರ ನೀಡಲು ಕ್ರಮ. ರಾಜ್ಯ ಬಿಟ್ಟು ಹೊರಹೋದಂತೆ ಉಳಿಸಿಕೊಳ್ಳಲು ಕ್ರಮ. ಈ ಹಿಂದೆ 2,000 ರೂ. ಪರಿಹಾರ ನೀಡಲಾಗಿದೆ. ಒಟ್ಟು 5,000 ರೂ. ಪರಿಹಾರ.

× Chat with us