ಬೋರ್‌ವೆಲ್‌ ವಿಚಾರದಲ್ಲಿ ಕೈ ಕೈ ಮಿಲಾಯಿಸಿದ ಜೆಡಿಎಸ್‌- ಕಾಂಗ್ರೆಸ್‌ ಕಾರ್ಯಕರ್ತರು

ಮಂಡ್ಯ : ಬೋರ್​ವೆಲ್ ವಿಚಾರದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್ ಕಾರ್ಯಕರ್ತರು ಹೊಡೆದಾಡಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಗ್ರಾಮದಲ್ಲಿ ‌ನಡೆದಿದೆ.
ಕಾಳಿಂಗನಹಳ್ಳಿ ಗ್ರಾಮದಲ್ಲಿ ಬೋರ್​ವೆಲ್​ಗೆ ಮೋಟರ್ ಅಳವಡಿಸುವ ವಿಚಾರದಲ್ಲಿ ಅಕ್ರಮ ಮಾಡಿದ್ದಾರೆಂದು ಗಲಾಟೆ ನಡೆದಿದೆ.
ಕಾಳಿಂಗನಹಳ್ಳಿ ಗ್ರಾಮದ ಮಾಜಿ ಶಾಸಕ ಚಲುವರಾಯಸ್ವಾಮಿ ಮತ್ತು ಹಾಲಿ ಶಾಸಕ ಸುರೇಶ್ ಗೌಡ ಬೆಂಬಲಿಗರ ನಡುವೆ ಹೊಡೆದಾಟ ನಡೆದಿದೆ.ಇಬ್ಬರಿಗೆ ಗಂಭೀರ ಸೇರಿ ಎರಡೂ ಕಡೆಯ ಬೆಂಗಲಿಗರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ 15 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
× Chat with us