ಅಮೆಜಾನ್‌ ಕಾಡಿನಲ್ಲಿ ಬೊಲಿವಿಯನ್‌ ವಾಯುಪಡೆ ಪತನ: 6 ಮಂದಿ ದುರ್ಮರಣ

ಅಮೆಜಾನ್‌: ಕಾಡಿನ ಈಶಾನ್ಯ ಬೊಲಿವಿಯಾ ಬಳಿ ಬಿಲಿವಿಯಾನ್‌ ವಾಯುಪಡೆ ವಿಮಾನ ಪತನಗೊಂಡಿದ್ದು, ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಇಬ್ಬರು ಮಿಲಿಟರಿ ಪೈಲಟ್‌ಗಳು ಹಾಗೂ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಬೆನಿ ಪ್ರದೇಶದ ಪೊಲೀಸರ ವರದಿ ತಿಳಿಸಿದೆ.

ಕಾಡಿನಲ್ಲಿ ದಟ್ಟವಾಗಿ ಬೆಳೆದಿರುವ ಸಸ್ಯವರ್ಗಕ್ಕೆ ವಿಮಾನ ಅಪ್ಪಳಿಸಿ ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಸ್ಥಳೀಯ ಅಗುವಾ ಡಲ್ಸೆ ನಿವಾಸಿಗಳು ಬೆಂಕಿ ನಂದಿಸಲು ಸಹಾಯ ಮಾಡಿದರು.

ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.