ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ಬಿಪ್ಲಬ್‌ ಕುಮಾರ್‌ ದೇವ್‌ ರಾಜೀನಾಮೆ

ಅಗರ್ತಲಾ : ತ್ರಿಪುರಾದ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್‌ ದೇವ್‌ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಒಂದು ದಿನದ ಬಳಿಕ ರಾಜೀನಾಮೆ ನೀಡಿದ್ದಾರೆ. ಬಿಪ್ಲಬ್‌  ಕುಮಾರ್‌ ತಮ್ಮ ರಾಜೀನಾಮೆಯನ್ನು ಗವರ್ನರ್‌ ಗೆ ಇಂದು ನೀಡಿದ್ದಾರೆ. ಮುಖ್ಯಮಂತ್ರಿ  ಬದಲಾವಣೆಯ  ವಿಚಾರ ಬಿಜೆಪಿ ವರಿಷ್ಠರ ನಿರ್ಧಾರವಾಗಿದೆಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು.