ಖತರ್‌ನಾಕ್ ಬೈಕ್ ಕಳ್ಳ ಅಂದರ್!

ಬೆಂಗಳೂರು: ಕೆಂಗೇರಿ ಠಾಣೆ ಪೊಲೀಸರ ಕಾರ್ಯಾಚರಣೆ ಚಾಕು ತೋರಿಸಿ ಮೊಬೈಲ್ ಹಾಗೂ ಬೈಕ್ ಕದ್ದೊಯ್ಯುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.

ಮನೋಜ್ (೨೩) ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ೪ ಲಕ್ಷ ಮೌಲ್ಯದ ೬ ದ್ವಿ ಚಕ್ರ ವಾಹನಗಳು ವಶಕ್ಕೆ ಪಡೆದಿದ್ದಾರೆ.

 

ಬಂಧಿತ ಆರ್.ಆರ್ ನಗರ, ಅನ್ನಪೂರ್ಣೇಶ್ವರಿ ನಗರ ಚನ್ನಪಟ್ಟಣ ಹಾಗೂ ಬಿಡದಿಯ ನಾಲ್ಕು ಪ್ರಕರಣಗಳಲ್ಲಿ ಕಳವು ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

× Chat with us