ಬಂಡೀಪುರ: ಪ್ರವಾಸಿಗರಿಗೆ ಅರಣ್ಯ ಇಲಾಖೆ ಬಿಗ್‌ ಶಾಕ್‌… ಸಫಾರಿ ಶುಲ್ಕ ದಿಢೀರ್ ಹೆಚ್ಚಳ!

ಮೈಸೂರು: ಬಂಡೀಪುರ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಅರಣ್ಯ ಇಲಾಖೆ ಬಿಗ್ ಶಾಕ್ ನೀಡಿದೆ. ದಿಢೀರ್ ಸಫಾರಿ ದರವನ್ನು ಏರಿಕೆ ಮಾಡಿದ್ದು, ಸಫಾರಿ ಪ್ರಿಯರಿಗೆ ಆಘಾತವಾಗಿದೆ.

ಹೌದು.. ಬಂಡೀಪುರ ಉದ್ಯಾನಕ್ಕೆ ಬರುವ ಪ್ರವಾಸಿಗರಿಗೆ ಬೆಲೆ ಏರಿಕೆಯ ಬಿಸಿಯನ್ನು ಕೊರೊನಾ ಸಂಕಷ್ಟದ ನಡುವೆಯೇ ಮುಟ್ಟಿಸಿದೆ. ಉದ್ಯಾನಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರವೇಶ ಶುಲ್ಕ ಹಾಗೂ ಸಫಾರಿ ದರವನ್ನು ಏರಿಕೆ ಮಾಡಿದೆ.

ಈ ಹಿಂದೆ ಪ್ರವೇಶ ಶುಲ್ಕ ರೂ. 250, ರೂ. 100 ಸಫಾರಿ ಶುಲ್ಕವಿತ್ತು. ಆದರೆ ಇಂತಹ ದರವನ್ನು ದಿಢೀರ್ ರೂ. 300 ಹಾಗೂ ರೂ. 300 ಸಫಾರಿ ದರವನ್ನು ಏರಿಕೆ ಮಾಡಿದೆ. ಅಲ್ಲದೇ ವನ್ಯ ಸಂಪತ್ತು ನೋಡುಗರು ರೂ. 250 ಇದ್ದ ದರವನ್ನು 600ಕ್ಕೆ ಏರಿಕೆ ಮಾಡಿದೆ.

ಇನ್ನು ವಿದೇಶಿಗರಿಗೆ ಈ ಮೊದಲು ರೂ. 500 ಪ್ರವೇಶ ಶುಲ್ಕ, 500 ಸಫಾರಿ ಶುಲ್ಕವನ್ನು 1,000ಕ್ಕೆ ಏರಿಕೆ ಮಾಡಲಾಗಿದೆ. ಇದಲ್ಲದೇ 3 ಸಾವಿರ ಇದ್ದಂತ ಸಫಾರಿ ಜಿಪ್ಸಿ ಬಾಡಿಗೆ ದರವನ್ನು ರೂ. 3,500ಕ್ಕೆ, 9 ಸೀಟಿನ ಕ್ಯಾಂಟರ್ 5 ಸಾವಿರದಿಂದ 7 ಸಾವಿರಕ್ಕೆ ಏರಿಕೆ ಮಾಡಿದೆ. ವಿದೇಶಿಗರಿಗೆ ಜಿಪ್ಸಿಗೆ 5 ಸಾವಿರ ಹಾಗೂ ಕ್ಯಾಂಪರ್‌ಗೆ 7 ಸಾವಿರ ರೂ.ಗೆ ಏರಿಕೆ ಮಾಡಿದೆ. ಇದಲ್ಲದೇ ಪಾರ್ಕಿಂಗ್ ಶುಲ್ಕ ಕೂಡ ಏರಿಕೆ ಮಾಡಿದೆ.

ವರ್ಗ                                   ಹಳೇ ದರ                ಹೊಸ ದರ

ಪ್ರವೇಶ                                250 ರೂ.                   300 ರೂ.
ಸಫಾರಿ                                 100 ರೂ.                   300 ರೂ.
ವಿದೇಶಿಗರಿಗೆ                        500 ರೂ.                   1,000 ರೂ.
ವನ್ಯ ವೀಕ್ಷಣೆ                       350 ರೂ.                   600 ರೂ.
ಜಿಪ್ಸಿ ಬಾಡಿಗೆ                       3,000 ರೂ.               3,500 ರೂ.
ಕ್ಯಾಂಟರ್                            5,000 ರೂ.               7,000 ರೂ.