ಅಥ್ಲೆಟಿಕ್‌ : ದಾಖಲೆ ನಿರ್ಮಿಸಿದ ಮೈಸೂರಿನ ವಿ. ಅಂಬಿಕಾ

ಮೈಸೂರು : ರಾಜ್ಯ U- 20  ಮತ್ತು ಸೀನಿಯರ್‌ ಅಥ್ಲೆಟಿಕ್‌ ಚಾಂಪಿಯನ್‌ಶಿಪ್ 2022 ರಲ್ಲಿ ಭಾಗವಹಿಸಿದ್ದ ಮೈಸೂರಿನ ಅಂಬಿಕಾರವರು ಇಂದು ಬೆಳಿಗ್ಗೆ 14.09 ಮೀ. ಆರ್ಯನ್‌ U-20 ಬಾಲಕರ 400 ಮೀಟರ್‌ ಹರ್ಡಲ್ಸ್‌ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ.

ಉಡುಪಿಯಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಮತ್ತು ನೆನ್ನೆ ನಡೆದ ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ವಿ.ಅಂಬಿಕಾರವರು ಮೈಸೂರು ಜಿಲ್ಲಾ ಅಥ್ಲೆಟಿಕ್‌ ಅಸೋಸೀಯೇಷನ್‌ (MDAA) ನಿಂದ ಪ್ರತಿನಿಧಿಸಿದ್ದು ಚಿನ್ನ ಗೆಲ್ಲುವ ಮೂಲಕ ಮೈಸೂರಿಗೆ ಕೀರ್ತಿ ತಂದಿದ್ದಾರೆ.

20 ವರ್ಷದೊಳಗಿನವರ ಬಾಲಕರ 1500 ಮೀ ಓಟದಲ್ಲಿ ರಾಹುಲ್ ಬೆಳ್ಳಿ ಗೆದ್ದರು. 20 ವರ್ಷದೊಳಗಿನ ಬಾಲಕಿಯರ ಶಾಟ್‌ಪುಟ್ ಸ್ಪರ್ಧೆಯಲ್ಲಿ ರಿಯಾ ಬೆಳ್ಳಿ ಪದಕ ಗೆದ್ದಿದ್ದಾರೆ. ಎರಡು ದಿನಗಳ ಕಾಲ ನಡೆದ ಈ ಕ್ರೀಡಾಕೂಟದಲ್ಲಿ ಒಟ್ಟು 80 ಸ್ಪರ್ಧೆಗಳು ನಡೆದವು.