ಬೆಂಗಳೂರು : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ನೀಡಲಾಗುವ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಆರ್.ವಿ.ಎಸ್ ಸುಂದರಂ ಸೇರಿದಂತೆ ಐವರು 2022ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಅಜ್ಜಕಳ ಗಿರೀಶ ಅವರು ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಧಾರವಾಡ ಕರ್ನಾಟಕ ವಿಶ್ವವಿಧ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಸಿ.ಆರ್.ಯರವಿನತೆಲಿಮಠ, ಲೇಖಕಿ ವಿಜಯಾ ಗುತ್ತಲ, ಭಾಷಾಂತರಕಾರ ಕೆ.ನಲ್ಲತಂಬಿ ಹಾಗೂ ಅನುವಾದಕರಾದ ವಿ,ಕೃಷ್ಣ ಅವರು ಪ್ರಸಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಭಾಷೆ ಸೇರಿದಂತೆ ಇತರ ಭಾಷೆಗಳಲ್ಲಿ ಸಾಧನೆ ಮಾಡಿದವರನ್ನು ಪರಿಗಣಿಸಿ ನೀಡಲಾಗುವ ಈ ಪ್ರಶಸ್ತಿಯು ತಲಾ 50 ಸಾವಿರ ನಗದನ್ನು ಒಳಗೊಂಡಿರುತ್ತದೆ.
ಇದರ ಜೊತೆಗೆ 2021 ರಲ್ಲಿ ಪ್ರಕಟಿಸಲಾದ ಅನುವಾದಿತ ಕೃತಿಗಳಿಗೆ ಪುಸ್ತಕ ಬಹುಮಾನವನ್ನು ಪ್ರಾಧಿಕಾರ ಪ್ರಕಟಿಸಿದೆ. ಅವುಗಳೆಂದರೆ ದ ಎಸೆನ್ಶಿಯಲ್ ಮಹಾಭಾರತ ಕೃತಿಗೆ ಅರ್ಜುನ ಭಾರದ್ವಾಜ ಮತ್ತು ಹರಿ ರವಿಕುಮಾರ್ (ಕನ್ನಡದಿಂದ ಇಂಗ್ಲೀಷ್), ಪರ್ದಾ ಮತ್ತು ಪಾಲಿಗಮಿ ಕೃತಿಗೆ ದಾದಾಪೀರ್ ಜೈಮನ್ (ಇಂಗ್ಲೀಷಿನಿಂದ ಕನ್ನಡಕ್ಕೆ), ಕಳ್ಳಗಾಡಿನ ಇತಿಹಾಸ ಮಲರ್ವಿಳಿ ಕೆ (ಇಂಗ್ಲೀಷ್ ಹೊರತಾಗಿ ಬೇರೆ ಭಾರತೀಯ ಭಾಷೆಗಳಿಂದ ಕನ್ನಡಕ್ಕೆ). ಪ್ರೇಮ ಪತ್ರ ಕೃತಿಗೆ ಮೋಹನ್ ಕುಂಟಾರ್ ಹಾಗೂ ಉತ್ತರಕಾಂಡಾಂ ಕೃತಿಗೆ ಎಚ್.ಆರ್.ವಿಶ್ವಾಸ್ (ಕನ್ನಡದಿಂದ ಬೇರೆ ಭಾರತೀಯ ಭಾಚೆಗಳಿಗೆ) ಆಯ್ಕೆಯಾಗಿದ್ದಾರೆ.
ಪುಸ್ತಕದ ಬಹುಮಾನವು ತಲಾ 25 ಸಾವಿರ ಗಳನ್ನು ಒಳಗೊಂಡಿದೆ.