ಮೈಸೂರು: ರಾಜ್ಯಸಭಾ ಚುನಾವಣೆಯ ಗುಂಗಿನಿಂದ ಹೊರಬಂದಿರುವ ಸಿದ್ದರಾಮಯ್ಯ ತವರು ಜಿಲ್ಲೆಗೆ ಆಗಮಿಸಿ ಕುರುಕ್ಷೇತ್ರದ ನಾಟಕವನ್ನು ವೀಕ್ಷಿಸಿದರು.
ಬೆಂಗಳೂರಿನಿಂದ ನೇರವಾಗಿ ಕಲಾಮಂದಿರಕ್ಕೆ ಆಗಮಿಸಿದ ಸಿದ್ದರಾಮಯ್ಯ ವಕೀಲರ ಸಂಘದವರು ಏರ್ಪಡಿಸಿದ್ದ ಕುರುಕ್ಷೇತ್ರದ ನಾಟಕವನ್ನು ವೀಕ್ಷಿಸಿದರು. ಮುಖಂಡರು, ವಕೀಲರೊಂದಿಗೆ ಸಂತೋಷದಿಂದ ಕುಳಿತುಕೊಂಡು ಕುರುಕ್ಷೇತ್ರದ ಅರ್ಜುನ, ಭೀಮ, ದ್ರೌಪದಿ ಅಭಿನಯಸಿದ ನಾಟಕದ ತುಣುಕಗಳನ್ನು ವೀಕ್ಷಿಸಿದರು. ನಂತರ, ವಕೀಲರ ಸಂಘದವರ ಸನ್ಮಾನ ಸ್ವೀಕರಿಸಿದ ಬಳಿಕವೂ ಒಂದಿಷ್ಟು ಹೊತ್ತು ಕುಳಿತು ವೀಕ್ಷಣೆ ಮಾಡಿ ಸಂಭ್ರಮಿಸಿದರು.
ಸಂಘದವರು ಹಲವು ಬಾರಿ ಮನವಿ ಮಾಡಿದರೂ ಭಾಷಣ ಮಾಡದೆ ಖುಷಿಯಾಗಿ ನಾಟಕ ನೋಡುವ ಕಡೆಗೆ ಗಮನಹರಿಸಿದ್ದು ಕಂಡುಬಂದಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಕೀಲರ ಸಂಘದವರು ಆಹ್ವಾನ ಕೊಟ್ಟಿದ್ದರು. ಹಾಗಾಗಿ, ಕುರುಕ್ಷೇತ್ರ ನಾಟಕ ವೀಕ್ಷಿಸಿದೇನೆ. ಬಹಳ ಖುಷಿಯಾಯಿತು. ಹಿಂದೆ ಲಾಯರ್ ಆಗಿದ್ದಾಗ ಎಲ್ಲಾ ಕಡೆ ಹೋಗಿ ನಾಟಕ ನೋಡುತ್ತಿದ್ದೆ. ನಾನು ಲಾ ಕಾಲೇಜಿನಲ್ಲಿ ಸಾಮಾಜಿಕ ನಾಟಕ ಮಾಡಿದ್ದೆ. ಯಮಧರ್ಮರಾಯನ ಸನ್ನಿಧಿ ಎಂಬ ನಾಟಕದಲ್ಲಿ ವೈದ್ಯನ ಪಾತ್ರ ಮಾಡಿದ್ದೆ. ಅದಕ್ಕೆ ನಾನು ಡಾಕ್ಟರ್ ಆಗಲಿಲ್ಲ ಎಂದರು. ಪೌರಾಣಿಕ ನಾಟಕಗಳಿಂದಲೇ ಡಾ.ರಾಜ್ಕುಮಾರ್, ಎನ್.ಟಿ.ರಾಮರಾವ್ ಅವರಂತಹವರು ದೊಡ್ಡ ದೊಡ್ಡ ಕಲಾವಿದರಾದರು. ಇತ್ತೀಚೆಗೆ ಪೌರಾಣಿಕ ನಾಟಕಗಳನ್ನು ಅಭಿನಯಿಸುವುದು ಮತ್ತು ನೋಡುವ ಆಸಕ್ತಿ ಕಡಿಮೆಯಾಗಿದೆ. ಆಸಕ್ತಿ ಬರುವ ಹಾಗೆ ಮಾಡಬೇಕು. ಈಗ ವಕೀಲರ ಸಂಘದವರು ಪ್ರಾಕ್ಟೀಸ್ಮಾಡಿ ನಾಟಕಮಾಡಿದ್ದಾರೆ. ಅದೇ ರೀತಿ ಎಲ್ಲರೂ ನಾಟಕ ಮಾಡುವ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
Next Article ಖ್ಯಾತ ಫ್ಯಾಷನ್ ಡಿಸೖೆನರ್ ಪ್ರತ್ಯುಷಾ ಅನುಮಾನಾಸ್ಪದ ಸಾವು