ಬೆಂಗಳೂರು : ಕನ್ನಡ ಹಲವು ಚಿತ್ರಗಳಿಗೆ ಇಂದು ನವದೆಹಲಿಯಲ್ಲಿ ನಡೆದ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದೆ. ಸಾಗರ್ ಪುರಾಣಿಕ್ ನಿರ್ದೇಶನದ, ಪವನ್ ಒಡೆಯರ್ ನಿರ್ಮಾಣದ ಡೊಳ್ಳು ಚಿತ್ರಕ್ಕೆ ಎರಡು ಪ್ರಶಸ್ತಿಗಳು ಸಂದಿದ್ದು, ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಸಿನಿಮಾಗೂ ರಾಷ್ಟ್ರ ಪ್ರಶಸ್ತಿ ಸಂದಿದೆ.
ವಾರ್ತಾ ಇಲಾಖೆ ನಿರ್ಮಿಸಿರುವ ಡಾ.ಪಿ.ಟಿ ವೆಂಕೇಶ್ ಕುಮಾರ್ ಬದುಕಿನ ‘ನಾದದ ನವನೀತ’ ಚಿತ್ರಕ್ಕೂ ರಾಷ್ಟ್ರೀಯ ಪ್ರಶಸ್ತಿ ಸಂದಿದೆ.
ಅತ್ಯುತ್ತಮ ಪರಿಸರ ಕಾಳಜಿ ಚಿತ್ರಕ್ಕಾಗಿ ತಲೆದಂಡ ಸಿನಿಮಾಗೆ, ಅತ್ಯುತ್ತಮ ಲೋಕೆಷನ್ ಸೌಂಡ್ ಡಿಸೈನ್ ಚಿತ್ರಕ್ಕಾಗಿ ಡೊಳ್ಳು, ಸಿನಿಮಾ ಮತ್ತು ಅತ್ಯುತ್ತಮ ಕಲೆ ಮತ್ತು ಸಾಂಸ್ಕೃತಿಕ ಚಿತ್ರ ಕ್ಕಾಗಿ ನಾದದ ನವನೀತ ಹಾಗೂ ಅತ್ಯುತ್ತಮ ಪ್ರಾದೇಶಿಕ ಸಿನಿಮಾ ಎಂದು ಡೊಳ್ಳು, ಅತ್ಯುತ್ತಮ ಪ್ರಾದೇಶಿಕ ತುಳು ಸಿನಿಮಾ ಎಂದು ಜೀಟಿಯು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿವೆ.