ಪಿ.ಎಸ್.ಟಿ ವಿಭಾಗದ ಮುಖ್ಯಸ್ಥರಾಗಿ ಹೆಚ್.ವೈ.ಸರಸ್ವತಿ ನೇಮಕ

ಕೆ.ಆರ್.ಪೇಟೆ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕಿಯರ ಸಂಘದ ಪಿ.ಎಸ್.ಟಿ ವಿಭಾಗದ ಮುಖ್ಯಸ್ಥರಾಗಿ ಹೆಚ್.ವೈ.ಸರಸ್ವತಿ ಅವರು ನೇಮಕಗೊಂಡಿದ್ದಾರೆ.

ಮಂಡ್ಯ ಜಿಲ್ಲಾ ಸಾವಿತ್ರಿಬಾಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾಗಿರುವ ಸರಸ್ವತಿ ಅವರ ಸಂಘಟನಾ ಕ್ರಿಯಾಶೀಲ ಶಕ್ತಿಯನ್ನು ಗುರುತಿಸಿ, ಸಾವಿತ್ರಿಬಾಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷ ಸ್ಥಾನ ಜೊತೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕಿಯರ ಪಿ.ಎಸ್.ಟಿ ವಿಭಾಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿ ಬಾಯಿಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಲತಾ ಮಳ್ಳೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಜ್ಯೋತಿ ಅವರು ತಿಳಿಸಿದ್ದಾರೆ.

ಪಿಇಟಿ ಶಿಕ್ಷಕಿಯರ ಸಂಘದ ನೂತನ ರಾಜ್ಯ ಘಟಕದ ಮುಖ್ಯಸ್ಥೆ ಹೆಚ್.ವೈ.ಸರಸ್ವತಿ ಅವರನ್ನು ಮಂಡ್ಯ ಜಿಲ್ಲಾ ಸಾವಿತ್ರಿಬಾಫುಲೆ ಶಿಕ್ಷಕಿಯರ ಸಂಘದ ಪ್ರಧಾನ ಕಾರ್ಯದರ್ಶಿ ಕುಸ್ತರ್ ಭಾನು, ಗೌರವಾಧ್ಯಕ್ಷೆ ಪಾರ್ವತಿ, ಸಹ ಕಾರ್ಯದರ್ಶಿಗಳಾದ ರೂಪಾ, ಕುಮಾರಿ, ಸಂಘಟನಾ ಕಾರ್ಯದರ್ಶಿಗಳಾದ ಮಂಜುಳಾ, ಕಿಕ್ಕೇರಿ ಬಾಯ್ಸ್ ಶಾಲೆಯ ಪುಷ್ಪ, ಚಟ್ಟಂಗೆರೆ ಶಾಲೆಯ ಲೀಲಾವತಿ, ಜಿಲ್ಲಾ ಉಪಾಧ್ಯಕ್ಷರುಗಳಾದ ಶಿರೀನ್ ತಾಜ್, ಡಿ.ಪಿ.ಸಾವಿತ್ರಿ, ಕುಮಾರಿ, ಮಂಜುಳಾ, ಪ್ರಭಾವತಿ, ಲೀಲಾವತಿ, ಜಿಲ್ಲಾ ನಿರ್ದೇಶಕರಾದ ರೇಣುಕಾ, ಭಾರತಿ, ಸೇರಿದಂತೆ ಜಿಲ್ಲಾ ಸಮಿತಿ ಹಾಗೂ ತಾಲ್ಲೂಕು ಸಮಿತಿಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ನೂತನ ಕರ್ನಾಟಕ ರಾಜ್ಯ ಪಿ.ಎಸ್.ಟಿ. ಶಿಕ್ಷಕಿಯರ ಸಂಘದ ರಾಜ್ಯ ಮುಖ್ಯಸ್ಥೆ ಹೆಚ್.ವೈ.ಸರಸ್ವತಿ ಅವರು ಮಾತನಾಡಿ ಸರ್ಕಾರವು ಟಿಸಿಎಚ್ ಅಥವಾ ಡಿಎಡ್ ವಿದ್ಯಾರ್ಹತೆ ಹೊಂದಿರುವವರು 1ರಿಂದ 5ತರಗತಿಗೆ ಮಾತ್ರ ಬೋಧಿಸಬೇಕು ಇವರನ್ನು ಪಿ.ಎಸ್.ಟಿ ಶಿಕ್ಷಕರೆಂದು ಪರಿಗಣಿಸಿದೆ. 6 ರಿಂದ ಎಂಟನೇ ತರಗತಿಗೆ ಬೋದಿಸುವವರು ಬಿ.ಎ.ಬಿಇಡಿ ವಿದ್ಯಾರ್ಹತೆ ಇರುವವರು ಜಿ.ಪಿ.ಟಿ. ಶಿಕ್ಷಕರೆಂದು ವಿಂಗಡಸಿ ಮಕ್ಕಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಲು ಕಾರಣವಾಗಿದೆ. ಕೂಡಲೇ ಪಿ.ಎಸ್.ಟಿ ಶಿಕ್ಷಕರಿಗೆ ಹಿಂಬಡ್ತಿ ನೀಡಿರುವುದನ್ನು ವಾಪಸ್ ಪಡೆಯಬೇಕು. ಈ ಬಗ್ಗೆ ಸುಮಾರು 80ಸಾವಿರ ಶಿಕ್ಷಕರು ರಾಜ್ಯಾದ್ಯಂತ ಹಲವು ಹಂತಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದರೂ ಸಹ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕರ್ನಾಟಕ ರಾಜ್ಯ ಪಿ.ಎಸ್.ಟಿ ಶಿಕ್ಷಕಿಯರ ಸಂಘವು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ನೂತನ ಮುಖ್ಯಸ್ಥೆ ಎಚ್.ವೈ.ಸರಸ್ವತಿ ಅವರು ತಿಳಿಸಿದ್ದಾರೆ.