ಯುವ ಡಾಟ್ ಕಾಂ

ಯೌವನದ ಭ್ರಮೆಗಳ ಬಿಡಿಸುವ ವಿವೇಕಾನಂದರು!

ಡಾ. ನೀ. ಗೂ. ರಮೇಶ್

“ನೀನು ಏನನ್ನು ಚಿಂತಿಸುತ್ತೀಯೋ ಹಾಗೆಯೇ ಆಗುತ್ತೀಯೆ…… ನಿನ್ನನ್ನು ನೀನು ದುರ್ಬಲನೆಂದು ತಿಳಿದುಕೊಂಡರೆ ನೀನು ದುರ್ಬಲನೇ ಆಗುತ್ತೀಯೆ. ನಿನ್ನನ್ನು ನೀನು ಸಶಕ್ತನೆಂದು ಭಾವಿಸಿಕೊಂಡರೆ ನೀನು ಸಶಕ್ತನೇ ಆಗುತ್ತೀಯ. ಎಲ್ಲ ಶಕ್ತಿಯು ನಿನ್ನಲ್ಲೆ ಅಡಗಿದೆ, ಅದನ್ನು ನಂಬು. ನೀನು ದುರ್ಬಲನೆಂದು ನಂಬಬೇಡ. ಒಬ್ಬ ವ್ಯಕ್ತಿ ತಾನು ಕೀಳು ಮತ್ತು ಕ್ಷುಲ್ಲಕ ಎಂದು ಭಾವಿಸುವುದೇ ಪಾಪ ಮತ್ತು ಅಜ್ಞಾನ” ಇಂತಹ ಮನೋವೈಜ್ಞಾನಿಕ ಅಭಿಪ್ರಾಯವನ್ನು ಬಗೆ ಬಗೆಯಾಗಿ ಹೇಳಿ ಯುವ ಪೀಳಿಗೆಯನ್ನು ಪ್ರಭಾವಿಸಿದ್ದ ವಿಚಾರಶೀಲರು ಸ್ವಾಮಿ ವಿವೇಕಾನಂದ. ಇವರು ಜಗತ್ತು ಕಂಡ ಶ್ರೇಷ್ಠ ಪ್ರೇರಣಾತ್ಮಕ ಉಪನ್ಯಾಸಕರಲ್ಲಿ ಅಗ್ರಗಣ್ಯರು. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಮ್ಮ ವಿವೇಕಶೀಲತೆಯಿಂದಾಗಿ ದೇಶ ಮಾತ್ರವಲ್ಲದೆ ಜಗತ್ತಿಗೇ ಪರಿಚಿತರಾದವರು ಸ್ವಾಮಿ ವಿವೇಕಾನಂದರು. ‘ಯುವಕರೇ ಈ ದೇಶದ ಭವಿಷ್ಯ’ ಎಂದು ಬಲವಾಗಿ ಪ್ರತಿಪಾದಿಸಿದ ಅವರ ಬಹುತೇಕ ಮಾತುಗಳು ವಿದ್ಯಾರ್ಥಿಗಳನ್ನು, ಯುವಪೀಳಿಗೆಯನ್ನೇ ಉದ್ದೇಶಿಸಿದಂತಹವು.

‘ನನ್ನ ನಂಬಿಕೆಯೆಲ್ಲವೂ ಯುವಪೀಳಿಗೆಯ ಮೇಲೆ ಇದೆ’ ಎಂದು ಪದೇ ಪದೇ ಹೇಳುವ ಮೂಲಕ ಯುವಕರೇ ದೇಶದ ಭವಿಷ್ಯ ಎಂದು ನಂಬಿದ್ದರು. ಯುವಕರು ದೈಹಿಕವಾಗಿ, ಮಾನಸಿಕವಾಗಿ ಶಕ್ತಿವಂತರಾಗಬೇಕು ಎಂಬುದು ಅವರ ಆಶಯವಾಗಿತ್ತು. ಅವರ ಮಾತುಗಳಲ್ಲೇ ಹೇಳಬೇಕೆಂದರೆ ‘ನಮ್ಮ ಯುವಜನರು ಎಲ್ಲಕ್ಕಿಂತ ಮೊದಲು ಶಕ್ತಿಶಾಲಿಗಳಾಗಬೇಕು. ಓ ನನ್ನ ಯುವ ಸ್ನೇಹಿತರೇ, ಮೊದಲು ಬಲಶಾಲಿಗಳಾಗಿ, ನಿಮಗೆ ನಾನು ನೀಡುವ ಬುದ್ಧಿವಾದವೇ ಇದು. ನಿಮ್ಮ ನರಗಳನ್ನು ಬಲಾಢ್ಯವನ್ನಾಗಿ ಮಾಡಿಕೊಳ್ಳಿ. ನಮಗಿಂದು ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡಗಳು ಮತ್ತು ಉಕ್ಕಿನಂತಹ ನರಗಳನ್ನು ಹೊಂದಿದ ಯುವಕರು. ನಾವೀಗಾಗಲೇ ಬಹಳಷ್ಟು ಅತ್ತು ಕರೆದಿದ್ದೇವೆ. ಇನ್ನು ಗೋಳಾಡುವುದು ಬೇಡ. ನಿಮ್ಮ ಕಾಲ ಮೇಲೆ ನಿಂತು ನಿಜವಾದ ಮನುಷ್ಯರಾಗಿರಿ’ ಹೀಗೆ ಯುವಕರಿಂದಲೇ ಈ ದೇಶದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ವಿವೇಕಾನಂದರು ಹೇಳಿರುವುದು ತುಂಬಾ ಆಸಕ್ತಿ ಕೆರಳಿಸುತ್ತದೆ. ಹಾಗಾಗಿಯೇ ಯುವಜನರನ್ನು ಎಚ್ಚರಿಸಿ ಒಗ್ಗೂಡಿಸುವ ಕುರಿತು ವಿವೇಕಾನಂದರ ಈ ಮುಂದಿನ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು.

‘ಏಳಿ ಎದ್ದೇಳಿ, ನಿಮ್ಮನ್ನು ನೀವು ಎಚ್ಚರಿಸಿಕೊಳ್ಳಿ ಮತ್ತು ಇತರರನ್ನೂ ಎಚ್ಚರಿಸಿ. ಗುರಿಮುಟ್ಟುವ ತನಕ ನಿಲ್ಲದಿರಿ. ಏಳಿ ಎದ್ದೇಳಿ, ಇನ್ನು ನಿದ್ರಿಸದಿರಿ; ನಿಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಎಲ್ಲ ಬಯಕೆಗಳನ್ನು ಪೂರೈಸುವ ಮತ್ತು ಎಲ್ಲ ಕಷ್ಟಗಳನ್ನು ನಿವಾರಿಸುವ ಶಕ್ತಿ ಇದೆ. ಇದನ್ನು ನಂಬಿರಿ’. ಇಂತಹ ಮಾತುಗಳು ಇಂದಿಗೂ ಯುವಜನತೆಗೆ ಸ್ಛೂರ್ತಿಯ ಚಿಲುಮೆಯಾಗಿವೆ. ವಿವೇಕಾನಂದರು ಪ್ರತಿಯೊಬ್ಬರಲ್ಲೂ ಒಂದೊಂದು ಶಕ್ತಿ ಇರುತ್ತದೆ ಎಂದು ನಂಬಿದವರು. ಆದರೆ, ಭಯ ಎಲ್ಲರನ್ನೂ ಹೇಡಿಗಳನ್ನಾಗಿ ಮಾಡುತ್ತಿದೆ. ‘ನೀವು ಹೆದರಿದ ಕ್ಷಣ, ಏನೂ ಇಲ್ಲವಾಗಿ ಬಿಡುತ್ತೀರಿ. ಜಗತ್ತಿನಲ್ಲಿ ಭಯವೇ ಎಲ್ಲ ಸಂಕಷ್ಟಕ್ಕೆ ಕಾರಣ’ ಎಂಬುದು ಅವರ ಬಲವಾದ ನಂಬಿಕೆ.

‘ಶಿಕ್ಷಣವೆಂದರೆ ನಿಮ್ಮ ಮಿದುಳಿನಲ್ಲಿ ತುಂಬಿಕೊಂಡಿರುವ ಮಾಹಿತಿಯ ಮೊತ್ತವಲ್ಲ; ಅದು ನಿಮ್ಮ ಜೀವನದುದ್ದಕ್ಕೂ ಅಜೀರ್ಣವಾಗಿ ಅಲ್ಲಿದ್ದುಕೊಂಡು ಕೊಳೆಯುತ್ತಿರುತ್ತವೆ. ನಮಗೆ ಬೇಕಾದದ್ದು ಜೀವನ-ನಿರ್ಮಾಣ, ಮನುಷ್ಯ-ನಿರ್ಮಾಣ, ಚಾರಿತ್ರ್ಯ-ನಿರ್ಮಾಣ. ಇವುಗಳ ಮೂಲಕ ಉದಾತ್ತ ಭಾವನೆಗಳನ್ನು ಕರಗತ ಮಾಡಿಕೊಳ್ಳಲು ಶಿಕ್ಷಣ ಮಾತ್ರ ಶ್ರೇಷ್ಠವಾದುದು’ ಎಂದು ಸಾರಿದ ವಿವೇಕಾನಂದರು ಶಿಕ್ಷಣದ ಮುಖ್ಯ ಉದ್ದೇಶವನ್ನು ಮನವರಿಕೆ ಮಾಡಿಕೊಡುತ್ತಾರೆ. ಆದರೆ, ಇಂದಿನ ಶಿಕ್ಷಣಕ್ಕೂ ವಿವೇಕಾನಂದರು ಹೇಳಿದ ಶಿಕ್ಷಣ ವ್ಯವಸ್ಥೆಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಲು ಅವರ ಈ ಮಾತುಗಳು ಸಹಾಯಕವಾಗಿವೆ. ಯುವಕರಿಗೆ ಮತ್ತೊಂದು ಸಂದೇಶ ನೀಡುವ ವಿವೇಕಾನಂದರು ‘ಸೋಮಾರಿತನವಿರಕೂಡದು. ನಿಮ್ಮ ಅಸೂಯೆ ಮತ್ತು ಅಹಂಕಾರದ ಭಾವನೆಗಳನ್ನು ಇನ್ನೆಂದೂ ಮರುಕಳಿಸದಂತೆ ತ್ಯಜಿಸಿ ಬಿಡಿ. ನಿಮ್ಮೆಲ್ಲ ಅದ್ಭುತ ಶಕ್ತಿಯೊಡನೆ ಮುನ್ನುಗ್ಗಿ ಬನ್ನಿ’ ಎಂದು ಅವರು ಯುವಕರನ್ನು ಆತ್ಮೀಯ ಗೆಳೆಯನಂತೆ ಭಾವಿಸಿ ಹೇಳುವ ಮಾತುಗಳು ನಮ್ಮ ತಪ್ಪುಗಳನ್ನು ಕುರಿತು ಎಚ್ಚರಿಸುತ್ತವೆ. ಜೊತೆಗೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ದಾರಿದೀಪಗಳಾಗಿವೆ ಎಂದರೆ ತಪ್ಪಲ್ಲ. ಇನ್ನೊಂದು ಮಾತು- ಯೌವನದ ಉತ್ಸಾಹ, ಕನಸು, ಭ್ರಮೆಗಳ ನಡವೆ ನಿಮ್ಮನ್ನು ಎಚ್ಚರವಾಗಿಡುವ ಇಂತಹ ವಿವೇಕದ ಪ್ರಜ್ಞೆಗಳು ನಮ್ಮ ಪರಂಪರೆಯಲ್ಲೂ ಇವೆ. ನಮ್ಮ-ನಿಮ್ಮ ಸುತ್ತಮುತ್ತಲೂ ಇವೆ. ಆದರೆ ಅವುಗಳನ್ನು ಕಂಡುಕೊಳ್ಳಲಾಗದಷ್ಟು ತಾರುಣ್ಯದ ಮೈಮರೆವು ನಮ್ಮನ್ನು ಕುರುಡಾಗಿಸಬಾರದಷ್ಟೇ.

 

ಆಂದೋಲನ ಡೆಸ್ಕ್

Recent Posts

ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿ

ಹಾಸನ: ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಳ್ಳಿ ಗ್ರಾಮದ ಸುಧಾಮಣಿ ಹಾಗೂ…

29 seconds ago

ಅಸ್ಸಾಂನಲ್ಲಿ ಘೋರ ದುರಂತ: ರೈಲು ಡಿಕ್ಕಿಯಾಗಿ 7 ಆನೆಗಳು ಸಾವು

ಗುವಾಹಟಿ: ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಸ್ಸಾಂನ…

50 mins ago

ಬುರುಡೆ ಗ್ಯಾಂಗ್‌ನಲ್ಲಿ ಬಿರುಕು: ಏನಾಗಿದೆ ಗೊತ್ತಾ?

ಮಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಪ್ರಮುಖ ಆರೋಪಿ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಇದೀಗ ಬುರುಡೆ ಗ್ಯಾಂಗ್‌ ವಿರುದ್ಧವೇ ತಿರುಗಿ ಬಿದ್ದಿದ್ದಾನೆ.…

1 hour ago

ದ್ವೇಷ ಭಾಷಣ ಪ್ರತಿಬಂಧನ ಮಸೂದೆಗೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಪತ್ರ ಬರೆದ ಶೋಭಾ ಕರಂದ್ಲಾಜೆ

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಗೆ ಅಂಕಿತ ಹಾಕಬಾರದು…

1 hour ago

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

2 hours ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಸ್ವಾಗತಾರ್ಹ

ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…

2 hours ago