ಗೆಲುವಿನ ಕಥೆಗಳು ನಮ್ಮನ್ನು ಗೆಲುವಿನತ್ತ ಕರೆದೊಯ್ಯುತ್ತವೆ. ಸಾಧಕರ ಕಥೆಗಳು ಆತ್ಮವಿಶ್ವಾಸ ತುಂಬುತ್ತವೆ. ಆದರೆ, ಕೇವಲ ಬೋಧನೆಗಳಿಂದ ಬದಲಾವಣೆ ಸಾಧ್ಯವಿಲ್ಲ. ಬದಲಿಗೆ, ದೃಢ ನಿರ್ಧಾರ ಮಾತ್ರ ಅದನ್ನು ಸಾಧ್ಯವಾಗಿಸುತ್ತದೆ. ಆ ದೃಢ ನಿರ್ಧಾರದ ಹಿಂದೆ ಅತೀವವಾದ ಛಲ, ಛಲದ ಹಿಂದೆ ಹಸಿವು ಇರಲೇಬೇಕು. ಹಸಿವಿಗಿಂತ ದೊಡ್ಡ ಪ್ರೇರಣೆ ಜಗತ್ತಿನಲ್ಲಿ ಯಾವುದೂ ಇಲ್ಲ. ಆ ಹಸಿವು ಹೊಟ್ಟೆಯದು ಮಾತ್ರವಲ್ಲ; ಸಾಧನೆಯದು ಕೂಡ ಆಗಿರಬೇಕು.
ಜಗತ್ಪ್ರಸಿದ್ಧ ಆಪಲ್ ಕಂಪೆನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ಹೇಳುತ್ತಾರೆ: ‘ಒಂದು ಕಾಲದಲ್ಲಿ ಊಟಕ್ಕಾಗಿ ಏಳೆಂಟು ಮೈಲಿ ದೂರದಲ್ಲಿದ್ದ ಇಸ್ಕಾನ್ ದೇವಾಲಯಕ್ಕೆ ನಡೆದು ಹೋಗುತ್ತಿದ್ದೆ. ಕೋಕೋ ಖಾಲಿ ಬಾಟಲಿಗಳನ್ನು ಮಾರಿ ಬಂದ ಹಣದಿಂದ ಊಟ ಮಾಡುತ್ತಿದ್ದೆ’ ಎಂದು. ಆದರೆ, ಮುಂದೆ ಅವರು ಆಯ್ದುಕೊಂಡ ಮಾರ್ಗ, ಪಟ್ಟ ಪರಿಶ್ರಮ, ತಲುಪಿದ ಗುರಿ ಮಾತ್ರ ಯಾರೂ ಊಹಿಸಲಾಗದ್ದು. ಮಧ್ಯದಲ್ಲಿಯೇ ಕಾಲೇಜು ಬಿಟ್ಟರೂ ಮುಂದೆ ಚಿಕ್ಕ ವಯಸ್ಸಿನಲ್ಲೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೆ ಅತಿಥಿಯಾಗಿ ಕರೆಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದು ನಿಲ್ಲುತ್ತಾರೆ. ಸಾಧಿಸಲು ಏನಾದರೂ ಒಂದನ್ನು ನಂಬಲೇಬೇಕು, ನಂಬಿಕೆಯಿಂದ ಯಾವುದೇ ಕೆಲಸ ಮಾಡಿದರೆ ಮಾತ್ರ ಗೆಲುವು ಎಂದು ಪ್ರತಿಪಾದಿಸಿದವರು ಸ್ಟೀವ್.
ತಾವೇ ಕಟ್ಟಿ ಬೆಳೆಸಿದ ಕಂಪೆನಿಯಿಂದ ತಮ್ಮನ್ನು ಹೊರ ಹಾಕಿದಾಗಲೂ ಎದೆಗುಂದದೆ ಅಂತಹ ಮತ್ತೆರಡು ಕಂಪೆನಿಗಳನ್ನು ಕಟ್ಟಿ ಬೆಳೆಸುತ್ತಾರೆ. ಇದರಿಂದಾಗಿ ಮೊದಲ ಕಂಪೆನಿಯ ವ್ಯಾಪಾರ ಕುಸಿತ ಕಂಡಿದ್ದರಿಂದ ಮತ್ತೆ ಇವರನ್ನು ಅವರ ಷರತ್ತಿಗೆಲ್ಲ ಒಪ್ಪಿ ಗೌರವಯುತವಾಗಿ ಮೂಲ ಕಂಪೆನಿಗೆ ವಾಪಸ್ ಕರೆಸಿಕೊಳ್ಳಲಾಗುತ್ತದೆ. ಹಾಗಾಗಿ, ಜೀವನ ಎಲ್ಲರಿಗೂ ಆಗಾಗ ಪೆಟ್ಟುಗಳನ್ನು ಕೊಡುತ್ತದೆ. ಆದರೆ, ಎದೆಗುಂದಬಾರದಷ್ಟೇ ಎಂದು ಹೇಳಲು ಅವರು ಮರೆಯುವುದಿಲ್ಲ.
ನಾವು ಎಲ್ಲೇ ಇರಲಿ ಅಲ್ಲಿ ನಮ್ಮ ಇರುವಿಕೆಯ ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳುವುದೇ ನಮ್ಮ ಬದುಕಿನ ನಿಜವಾದ ಯಶಸ್ಸು. ಇಂತಹ ಸಾಧಕರ ಪರಂಪರೆ ಇಂದು ನೆನ್ನೆಯದಲ್ಲ. ನಮ್ಮ ಸುತ್ತಮುತ್ತ ಅಂತಹ ಸಾವಿರಾರು ನಿದರ್ಶನಗಳಿವೆ, ಆದರೆ ಎಲ್ಲರೂ ಕಣ್ತೆರೆಯ ಬೇಕಾಗಿದೆ, ಕಿವಿಗೊಡಬೇಕಾಗಿದೆಯಷ್ಟೇ. ಜೀವನ ಪ್ರತಿಯೊಬ್ಬರಿಗೂ ಹಲವು ಪರೀಕ್ಷೆಗಳ ಸರಣಿ. ಅದು ಯಾವುದನ್ನೂ ಯಾರಿಗೂ ಸುಮ್ಮನೇ ಕೊಡುವುದಿಲ್ಲ. ಜೀವನದ ಎಲ್ಲ ಹಂತಗಳಲ್ಲೂ ಪರೀಕ್ಷೆಗಳು ಎದುರಾಗುತ್ತವೆ. ಅವುಗಳಲ್ಲಿ ಯಾವೊಂದು ಪರೀಕ್ಷೆಯೂ ಅಮುಖ್ಯವಲ್ಲ. ಹಾಗೆಂದು ಯಾವೊಂದು ಪರೀಕ್ಷೆಯೂ ನಮ್ಮ ಬದುಕು-ಸಾವಿನ ಪ್ರಶ್ನೆಯೂ ಅಲ್ಲ. ಆದರೆ, ಪ್ರತಿ ಪರೀಕ್ಷೆಯೂ ಕಲಿಸುವ ಪಾಠವಷ್ಟೇ ಬಹಳ ಮುಖ್ಯ.
ಹಾಗಾಗಿ, ನಮ್ಮ ಯಾವ ಒಂದು ಸೋಲೂ ನಮ್ಮ ಬದುಕಿನ ಸೋಲಲ್ಲ, ಅದಕ್ಕಾಗಿ ಕುಗ್ಗಿ ಕೂರಬೇಕಾದ ಅಗತ್ಯವಿಲ್ಲ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ಕಾಯಿಲೆ ಪೀಡಿತ ತಾಯಿಗೆ ಅಡುಗೆ ಮಾಡಿ ಕೊಟ್ಟು, ಕೀಳು ಜಾತಿ ಎಂದು ಯಾರೂ ಮುಟ್ಟಿಸಿಕೊಳ್ಳದ ಕಾರಣ ಮೂರು ಮೈಲಿ ದೂರದಲ್ಲಿದ್ದ ಬಾವಿಯಿಂದ ನೀರು ತಂದಿಟ್ಟು, ಸಿದ್ಧವಾಗಿ, ನಾಲ್ಕು ಮೈಲಿ ಓಡೋಡಿ ಪ್ರತಿ ದಿನ ಶಾಲೆಗೆ ತಡವಾಗಿ ಬರುತ್ತಿದ್ದ ಬಾಲಕ ಮುಂದೆ ಐಎಫ್ ಎಸ್ ಪರೀಕ್ಷೆ ಪಾಸು ಮಾಡಿ ಅಮೆರಿಕದ ರಾಯಭಾರಿ ಆಗುವುದಾದರೆ, ಕೆ. ಆರ್. ನಾರಾಯಣನ್ ಅವರಂತೆಯೇ ಭಾರತದ ರಾಷ್ಟ್ರಪತಿಯಾಗುವುದಾದರೆ ಜೀವನದಲ್ಲಿ ಯಾರಿಗೂ ಯಾವುದೂ ಅಸಾಧ್ಯವಲ್ಲ ಎಂದುಕೊಳ್ಳಬೇಕು. ಹೀಗೆ ಏನೂ ಇಲ್ಲದವರೇ ಎಲ್ಲವನ್ನೂ ಸಾಽಸಿರುವ ಸಾಲು ಸಾಲು ನಿದರ್ಶನಗಳ ನಡುವೆ ಎಲ್ಲ ಸೌಲಭ್ಯಗಳಿದ್ದವರು ಸಾಽಸಿರುವು ದಾದರೂ ಎಷ್ಟು? ಇಂದು ನಮಗೆ ಸಾಧನೆ ಗಳನ್ನು ಮಾಡಲು ಏನಾದರೂ ಕೊರತೆಗಳಿವೆ, ಅಡಚಣೆಗಳಿವೆ ಎಂದಾದರೆ ಅದು ಆತ್ಮವಿಶ್ವಾಸದ ಕೊರತೆ ಮಾತ್ರ!
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…