ಯುವ ಡಾಟ್ ಕಾಂ

ಕೇಳಿಯೇ ಕಲಿತ ಹಾಡುಗಾರ ಸಂಜಯ್‌

ಜಾನಪದ ಸಂಗೀತದ ಮೂಲಕ ಬದುಕು ಕಟ್ಟಿಕೊಂಡ ಕನಕಪುರ ಸಂಜಯ್

ಅನಿಲ್ ಅಂತರಸಂತೆ
ನಾವು ಆಧುನಿಕತೆಗೆ ತೆರೆದುಕೊಂಡಂತೆಯೇ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ದೂರ ಮಾಡಿಬಿಡುತ್ತೇವೆ. ಅದರಲ್ಲಿಯೂ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಒಗ್ಗಿಕೊಂಡ ಬಳಿಕ ಜಾನಪದ ಸಂಗೀತ, ಸಾಹಿತ್ಯವನ್ನು ಸಂಪೂರ್ಣ ಮರೆತುಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಜಾನಪದ ಸಾಹಿತ್ಯ, ಭಕ್ತಿ ಗೀತೆ, ಭಾವಗೀತೆ, ಶೋಕ ಗೀತೆಗಳನ್ನು ಹಾಡುತ್ತಾ ಕಾರ್ಯಕ್ರಮಗಳನ್ನು ನೀಡಿ ಯುವಕರಿಗೆ ಜಾನಪದ ಸಂಗೀತದ ಪರಿಚಯ ಮಾಡಿಕೊಡುವ ಜತೆಗೆ ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಕನಕಪುರದ ಯುವ ಕಲಾವಿದ ಸಂಜಯ್.

ರಾಮನಗರ ಜಿಲ್ಲೆಯ ಕನಕಪುರದ ಸಂಜಯ್ ಯಾವುದೇ ಸಂಗೀತ ಅಭ್ಯಾಸ ಮಾಡದೆಯೂ ಲಯಬದ್ಧವಾಗಿ ಲೀಲಾ ಜಾಲವಾಗಿ ಹಾಡುವ ಅಪ್ಪಟ ಗ್ರಾಮೀಣ ಪ್ರತಿಭೆ , ಗಾಯನ ಕಲಾವಿದ. ಹಾಡುವ ಹವ್ಯಾಸವನ್ನೇ ವೃತ್ತಿ ಮಾಡಿಕೊಂಡು ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಕನಕಪುರದ ರಾಜಣ್ಣ ಮತ್ತು ಶಶಿಕಲಾ ದಂಪತಿಯ ಮೂರನೇ ಮಗನಾದ ಸಂಜಯ್‌ರವರಿಗೆ ವಿದ್ಯಾಭ್ಯಾಸ ಅಷ್ಟಾಗಿ ತಲೆಗತ್ತಲಿಲ್ಲ. ೧೦ನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಜೀವನಾ ಧಾರಕ್ಕೆ ವಿವಿಧ ಕಾರ್ಖಾನೆಗಳಲ್ಲಿ ಕೆಲಸಗಳನ್ನು ಮಾಡಲು ಆರಂಭಿಸಿದರು. ಬಳಿಕ ಸ್ವಂತವಾಗಿ ಸಣ್ಣದೊಂದು ಟೀ ಅಂಗಡಿ ಯನ್ನೂ ನಡೆಸಿ ಅದರಿಂದ ಬದುಕನ್ನು ಕಟ್ಟಿಕೊಳ್ಳಲು ಪರದಾಡಿದರು. ಇಂತಹ ಸಂದರ್ಭದಲ್ಲಿ ಇವರ ಕೈಹಿಡಿದು ಒಂದು ಬದುಕು ನೀಡಿದ್ದು, ಇವರ ಎದೆಯಲ್ಲಿದ್ದ ಗಾಯನ ಕಲೆ. ಸಂಜಯ್ ೩ನೇ ತರಗತಿಯಲ್ಲಿದ್ದಾಗ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ, ವಿವಿಧ ಗೀತಗಾಯನ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಇವರ ಗಾಯನ ಕಲೆಗೆ ಶಿಕ್ಷಕರೂ ಪ್ರೋತ್ಸಾಹ ನೀಡುತ್ತಿದ್ದರು. ಆರಂಭದಲ್ಲಿ ದ್ವಿತೀಯ, ತೃತೀಯ ಸ್ಥಾನಗಳನ್ನು ಗಳಿಸುತ್ತಿದ್ದ ಸಂಜಯ್‌ರವರಿಗೆ ದಿನ ಕಳೆದಂತೆ ಪ್ರಥಮ ಸ್ಥಾನ ಲಭಿಸಿದವು. ಇದು ಇವರ ಗಾಯನ ಹವ್ಯಾಸಕ್ಕೆ ಮತ್ತಷ್ಟು ಬಲ ತುಂಬಿತು.

ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಯವರ ಧ್ವನಿಯನ್ನು ಅನುಕರಿಸುವಂತೆ ಹಾಡುವ ಈ ಯುವಪ್ರತಿಭೆ ಗಾಯನ ಲೋಕಕ್ಕೆ ಕಾಲಿಡಲು ಮಳವಳ್ಳಿ ಮಹದೇವಸ್ವಾಮಿಯವರೇ ಸ್ಛೂರ್ತಿ. ಅವರ ಗಾಯನವನ್ನು ಕೇಳಿ ಪುಳುಕಿತರಾದ ಇವರು, ಅವರ ಧ್ವನಿಯನ್ನು ಅನುಕರಿಸಿ ಕೊಂಡು ಮಹದೇಶ್ವರ, ಸಿದ್ಧಾಪ್ಪಾಜಿಯ ಭಕ್ತಿ ಗೀತೆಗಳು, ಜಾನಪದ ಗೀತೆಗಳು, ಭಾವಗೀತೆಗಳನ್ನು ಹಾಡುತ್ತಾರೆ. ಸದ್ಯ ನಾನು ಗಾಯನ ಹವ್ಯಾಸವನ್ನು ಮುಂದುವರಿಸಲು ಮಳವಳ್ಳಿ ಮಹದೇವಸ್ವಾಮಿಯವರೇ ಸ್ಛೂರ್ತಿ. ಅವರೇ ನನ್ನ ಮೊದಲ ಗುರುಗಳು ಎನ್ನುತ್ತಾರೆ ಸಂಜಯ್.

ಸಂಜಯ್ ವಿವಿಧ ಶುಭ ಸಮಾರಂಭಗಳು, ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಕ್ತಿಗೀತೆ, ಭಾವಗೀತೆಗಳನ್ನು ಹಾಡು ವುದು, ಸಾವನ್ನಪ್ಪಿರುವವರ ಮನೆಯಲ್ಲಿ ಶೋಕಗೀತೆಗಳನ್ನು ಹಾಡುವ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇಲ್ಲಿಯ ವರೆಗೂ ಗುಂಡ್ಲುಪೇಟೆ, ಚಾಮರಾಜನಗರ, ಹಾಸನ, ಕನಕ ಪುರ, ಹೊಳೆನರಸೀಪುರ, ಚನ್ನರಾಯಪಟ್ಟಣ, ಮೈಸೂರು, ತಮಿಳುನಾಡು ಸೇರಿದಂತೆ ನಾನಾ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇದಕ್ಕಾಗಿ ತಂಡವೊಂದನ್ನೂ ಕಟ್ಟಿಕೊಂಡಿದ್ದಾರೆ.

ನಾನು ಯಾವುದೇ ಗಾಯನ ತರಬೇತಿ ಪಡೆದಿಲ್ಲ. ಶಾಲೆಯಲ್ಲಿ ಓದುವಾಗ ಹಾಡುಗಳನ್ನು ಕೇಳಿಯೇ ಕಲಿತು ಹಾಡುತ್ತಿದ್ದೆ. ಆ ಹವ್ಯಾಸವೇ ಈಗ ವೃತ್ತಿಯಾಗಿದೆ. ಅನ್ನ ನೀಡಿದೆ. ನನ್ನ ಗಾಯನವನ್ನು ನಾನು ಸಾಮಾಜಿಕ ಜಾಲತಾಣ ಗಳಲ್ಲಿ ಹಂಚಿಕೊಳ್ಳುತ್ತೇನೆ. ಗಾಯನ ಕೇಳಿ ಪ್ರೋತ್ಸಾಹಿಸುವ ವರಂತೆಯೇ ಟೀಕಿಸುವವರೂ ಇದ್ದಾರೆ. ಆದರೆ ನನ್ನ ಕೈಹಿಡಿದಿರುವ ಗಾಯನ ಕಲೆಯನ್ನು ನಾನು ಎಂದಿಗೂ ಗೌರವಿಸುತ್ತೇನೆ ಎನ್ನುತ್ತಾರೆ ಸಂಜಯ್.

ಜಾನಪದ ಸಂಗೀತ, ಭಕ್ತಿಗೀತೆ, ಭಾವಗೀತೆಗಳಿಂದ ಯುವಸಮೂಹ ದೂರಾಗಿದೆ. ಹಳೇ ಸಾಹಿತ್ಯದ ಬಗ್ಗೆ ಒಲವು ಅವರಲ್ಲಿಲ್ಲ. ಇತ್ತೀಚಿನ ಸಾಹಿತ್ಯವು ಹಳೆಯ ಸಾಹಿತ್ಯದಂತೆ ಗುಣಮಟ್ಟ ಹೊಂದಿಲ್ಲ. ಇದ ರಿಂದಲೇ ಇಂದು ಯುವ ಸಮೂಹ ಪಾಶ್ಚಿಮಾತ್ಯ ಸಂಗೀತಕ್ಕೆ ಮೊರೆಹೋಗು ತ್ತಿದೆ. ನಮ್ಮ ಮೂಲ ಜಾನಪದ, ಭಕ್ತಿಗೀತೆ, ಭಾವಗೀತೆಗಳ ಗಾಯನದೆಡೆಗೆ ಎಲ್ಲರೂ ಹೆಚ್ಚು ಒಲವು ತೋರಬೇಕು ಎನ್ನುತ್ತಾರೆ ಸಂಜಯ್.

 

ಆಂದೋಲನ ಡೆಸ್ಕ್

Recent Posts

ಅಂಬೇಡ್ಕರ್‌ ಕುರಿತು ಅಮಿತ್‌ ಶಾ ವಿವಾದಾತ್ಮಕ ಹೇಳಿಕೆ: ದೇಶಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ

ನವದೆಹಲಿ: ಬಾಬಾಸಾಹೇಬ್‌ ಅಂಬೇಡ್ಕರ್‌ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಯ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ.…

8 mins ago

ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸ್‌ ಹಿಂಪಡೆದ ರಾಜ್ಯ ಸರ್ಕಾರ

ತುಮಕೂರು: 70 ಲಕ್ಷ ಕರೆಂಟ್‌ ಬಿಲ್‌ ಕಟ್ಟುವಂತೆ ಸಿದ್ಧಗಂಗಾ ಮಠಕ್ಕೆ ನೀಡಿದ್ದ ನೋಟಿಸನ್ನು ಸರ್ಕಾರ ಹಿಂಪಡೆದಿದೆ. ಸರ್ಕಾರಿ ನೀರಾವರಿ ಯೋಜನೆಗೆ…

29 mins ago

ಪದ್ಮಶ್ರೀ ಪುರಸ್ಕೃತ ಜಾನಪದ ಕಲಾವಿದ ಮೊಗಿಲಯ್ಯ ವಿಧಿವಶ

ಹೈದರಾಬಾದ್:‌ ಟಾಲಿವುಡ್‌ ಚಲನಚಿತ್ರ ಬಳಗಂ ಮೂಲಕ ಪ್ರಖ್ಯಾತಿ ಗಳಿಸಿದ್ದ ಜನಪ್ರಿಯ ಜಾನಪದ ಕಲಾವಿದ ದರ್ಶನಂ ಮೊಗಿಲಯ್ಯ ಇಂದು ಬೆಳಿಗ್ಗೆ ವಿಧಿವಶರಾಗಿದ್ದಾರೆ.…

50 mins ago

ರಾಜಕೀಯ ಅಧಿಕಾರ ಹಿಡಿಯಲು ಅಂಬೇಡ್ಕರ್‌ ಹೆಸರು ಬಳಕೆ: ಸಿದ್ದರಾಮಯ್ಯ ವಿರುದ್ಧ ಆರ್‌.ಆಶೋಕ್‌ ವಾಗ್ದಾಳಿ

ಬೆಂಗಳೂರು: ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಕುರಿತಂತೆ ಗೃಹ ಸಚಿವ ಅಮಿತ್‌ ಶಾ ನೀಡಿರುವ ಹೇಳಿಕೆಗೆ ರಾಜ್ಯದ ಮುಖ್ಯಮಂತ್ರಿ ಸಿಎಂ…

1 hour ago

ಕಾಶ್ಮೀರದಲ್ಲಿ ಭರ್ಜರಿ ಬೇಟೆಯಾಡಿದ ಭಾರತೀಯ ಸೇನೆ: ಐವರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಐವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಬೇಹಿಬಾಗ್‌…

1 hour ago

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

ಮಡಿಕೇರಿ: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನಡೆದಿದೆ. ಮಡಿಕೇರಿಯ ಹಾರಂಗಿ ಜ್ಞಾನಗಂಗಾ ಶಾಲೆಯ…

2 hours ago