ಟೆಕ್ ಸಮಾಚಾರ
ತನ್ನ ವಿಶಿಷ್ಟವಾದ ಸ್ಮಾರ್ಟ್ ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆದಿರುವ ಸ್ಮಾರ್ಟ್ ಫೋನ್ ಕಂಪೆನಿ ಒಪ್ಪೊ, ಭಾರತೀಯ ವಿವಿಧ ಹವಾಮಾನ ವೈವಿಧ್ಯಕ್ಕೆ ಹೊಂದಿಕೊಳ್ಳುವಂತೆ ವಿನೂತನ ವೈಶಿಷ್ಟ ಗಳೊಂದಿಗೆ ರೂಪಿಸಿರುವ ಒಪ್ಪೊ ಎಫ್ 29 ಸರಣಿಯ ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಈ ಸರಣಿಯ ಒಪ್ಪೊ ಎಫ್29 ಮತ್ತು ಎಫ್29 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ತೆಳುವಾದ ಆಕರ್ಷಕ ವಿನ್ಯಾಸ ಹಾಗೂ ಅತ್ಯಾಧುನಿಕ ಸಂಪರ್ಕತೆ ಮತ್ತು ದೀರ್ಘ ಬ್ಯಾಟರಿ ಬಾಳಿಕ ಹೊಂದಿರುವ ಫೋನ್ ಇದಾಗಿದೆ.
ಈ ಫೋನ್‌ಅನ್ನು ಭಾರತೀಯ ವಿವಿಧ ಹವಾಮಾನಗಳಾದ ಮಳೆ, ಚಳಿ, ದೂಳು, ತಾಪಮಾನಕ್ಕೆ ಹೊಂದಿಕೊಳ್ಳುವಂತೆ ರೂಪಿಸಲಾಗಿದ್ದು, ದೂಳು, ಮಳೆ,
ನೀರಿನೊಳಗೆ ಮುಳುಗುವ ಸಂದರ್ಭಗಳಲ್ಲಿ ಫೋನ್‌ಗೆ ರಕ್ಷಣೆ ಇರುತ್ತದೆ. ಸ್ಟಾಂಜ್ ಬಯೋನಿಕ್ ಕುಶನಿಂಗ್ ಮತ್ತು ಫೈಬರ್ ಗ್ಲಾಸ್ ಕವರ್ ಹಾಗೂ ಕ್ಯಾಮೆರಾ ಲೆನ್ಸ್ ರಕ್ಷಣಾತ್ಮಕ ರಿಂಗ್ ಇದರಲ್ಲಿದೆ.
ಒಪ್ಪೊ ಎಫ್20 ಪ್ರೋನಲ್ಲಿ 6000 ಎಂಎಎಚ್ ಬ್ಯಾಟರಿ ಸಾಮರ್ಥ್ಯದೊಂದಿಗೆ 80 ಡಬ್ಲ್ಯೂ ಸೂಪರ್‌ವೊಕ್ ವೇಗದ ಚಾರ್ಜಿಂಗ್ ವ್ಯವಸ್ಥೆಯಿದ್ದರೆ, ಒಪ್ಪೊ ಎಫ್29 ಸಾಧನದಲ್ಲಿ 6500 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದೆ. ಈ ಎರಡರಲ್ಲೂ ಕರೆಯ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಮಾಡಲು ಅಲ್ಟ್ರಾ ವಾಲ್ಯೂಮ್ ಮೋಡ್ ಇದೆ.
ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…
ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…
ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…
ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…
ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…
ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…