ವಾರಾಂತ್ಯ ವಿಶೇಷ

ನಾಳೆ ಭೂಮಿಗೀತದಲ್ಲಿ ‘ಉರಿಯ ಉಯ್ಯಾಲೆ’

ರಚನೆ ಡಾ.ಎಚ್‌.ಎಸ್.ವೆಂಕಟೇಶ್ ಮೂರ್ತಿ, ನಿದೇರ್ಶನ ಬಿ.ಎನ್.ಶಶಿಕಲಾ

ಸಾಲೊಮನ್
ರಂಗಭೂಮಿಗೆ ಹೊಸಬರನ್ನು ಪರಿಚಯಿಸುವ ಉದ್ದೇಶದಿಂದ ಆರಂಭಿಸಿದ ಶಶಿ ಥಿಯೇಟರ್ ಸಂಸ್ಥೆ ‘ಉರಿಯ ಉಯ್ಯಾಲೆ’ ಎಂಬ ನಾಟಕವನ್ನು ರಂಗಾಯಣದ ಭೂಮಿಗೀತದಲ್ಲಿ ಅ.27ರಂದು ಸಂಜೆ 6.30ಕ್ಕೆ ಪ್ರಸ್ತುತಪಡಿಸುತ್ತಿದೆ.

ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ರಚನೆಯ ಉರಿಯ ಉಯ್ಯಾಲೆ’ ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ಬಿ.ಎನ್. ಶಶಿಕಲಾ ಮಾಡಿದ್ದಾರೆ. ನಾಟಕದಲ್ಲಿ ಕಲಾವಿದರಾದ ಬಿ.ಎಲ್.ಸರಳ, ಜಯಶ್ರೀ ರವಿಕುಮಾರ್, ಆರ್.ಎಂ. ಶ್ರುತಿ, ಸುಮಾ ಪ್ರಶಾಂತ್, ಎಚ್.ಎಚ್.ಸುನೀತ, ಎಚ್.ಎಂ.ದೀಪ್ತಿ ಶೆಟ್ಟಿ, ಕವಿತ ಎ.ಎಂ.ಅಳಗಂಚಿ ಹಾಗೂ ಮೀನಾಕ್ಷಿ ವಗದಾಳೆ ಬೀದರ್‌ ಅಭಿನಯಿಸಿದ್ದಾರೆ. ನಾಟಕಕ್ಕೆ ಸುಬ್ರಹ್ಮಣ್ಯ ಮೈಸೂರು ಅವರು ಹಿನ್ನೆಲೆ ಸಂಗೀತ ನೀಡಿದ್ದು, ಬೆಳಕಿನ ವಿನ್ಯಾಸವನ್ನು ಜೀವನ್ ಹೆಗ್ಗೋಡು ಹಾಗೂ ಪರಿಕರ ಮತ್ತು ರಂಗ ಸಜ್ಜಿಕೆಯ ಕಾರ್ಯವನ್ನು ಎಸ್.ಶ್ರೀಕಾಂತ್ ನಿರ್ವಹಿಸುತ್ತಿದ್ದಾರೆ. ಮಹಾಭಾರತ ಯುದ್ಧಾನಂತರದ ಸಂದರ್ಭದಲ್ಲಿನ ದೌಪದಿಯು ತನ್ನ ವರ್ಣರಂಜಿತ ಪುಟಗಳನ್ನು ತೆರೆದು ನೋಡಿದಾಗ ಅವಳ ಬದುಕು ಜೀವನ ಜೋಕಾಲಿಯಾಗದೆ ‘ಉರಿವ ಉಯ್ಯಾಲೆ’ ಯಾಗಿರುವುದನ್ನು ನಾಟಕ ಶ್ರುತಪಡಿಸುತ್ತದೆ.

ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮೊ ಪಡೆದು ರಂಗಭೂಮಿಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಶಶಿಕಲಾ ಅವರು ಮೂಲತಃ ಮೈಸೂರಿನವರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಅನೇಕ ಬೀದಿ ನಾಟಕಗಳನ್ನು ರಚಿಸಿ ನಿರ್ದೇಶಿಸಿದ್ದಾರೆ. ಮಕ್ಕಳಿಗಾಗಿಯೂ ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ ಇವರು ರಂಗಾಯಣದ ಕಲಾವಿದರಾಗಿ ಅನೇಕ ನಾಟಕಗಳ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಾ ಕಳೆದ 35 ವರ್ಷಗಳಿಂದಲೂ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಚಿತ್ರ ಸಾಹಿತಿ ಜಯಂತ್ ಕಾಯ್ಕಿಣಿಯವರ ‘ಗಾಳಿ ಮರದ ನೆರಳು’ ಸಣ್ಣಕತೆಯನ್ನು ಕಿರುಚಿತ್ರವಾಗಿ ಶಶಿ ಥಿಯೇಟರ್ಸ್ ನಿರ್ಮಿಸಿತ್ತು. ನಂತರ ಶಶಿಕಲಾ ಅವರು ಅಭಿನಯ ಕಾರ್ಯಾಗಾರ, ನೇಪಥ್ಯ ಕಾರ್ಯಾಗಾರ, ಚಲನಚಿತ್ರ ರಸಗ್ರಹಣ ಶಿಬಿರ ಹಾಗೂ ರಂಗ ಸಂಗೀತ ಕುರಿತು ಶಿಬಿರಗಳನ್ನು ನಡೆಸಿದ್ದಾರೆ. ಮೈಸೂರು ರಂಗಾಯಣದ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಪ್ರಯೋಗಾರ್ಥ ಪ್ರದರ್ಶನಕ್ಕಾಗಿ ಪ್ರೇಮಾ ಕಾರಂತರ ‘ಕುರುಡು ಕಾಂಚಾಣ’ ನಾಟಕವನ್ನು ನಿರ್ದೇಶಿಸಿದ್ದಾರೆ. ಆಕಾಶವಾಣಿಗಾಗಿ ಕೆಲವು ನಾಟಕಗಳನ್ನು ರಚಿಸಿರುವ ಇವರು ‘ಗೋಲಾ ರಾಕ್ಷಸ’, ‘ಕೊತ್ತಿಲ್ ಕೊತ್ತಲ್ ಢಣ್ ಢಣ್’, ‘ಜನ್ ನಮೂನಿ ನಾಟ್ಕ’ ಮುಂತಾದವುಗಳನ್ನು ನಾಲ್ಕ ನಿರ್ದೇಶಿಸಿದ್ದಾರೆ.

ಪಿ.ಶೇಷಾದ್ರಿ, ಕೆ.ಶಿವರುದ್ರಯ್ಯ, ನಾಗೇಂದ್ರ ಶಾ ಇವರುಗಳ ನಿರ್ದೇಶನದ ಹಲವಾರು ಸಾಕ್ಷ್ಯಚಿತ್ರಗಳಲ್ಲಿಯೂ ಶಶಿಕಲಾ ನಟಿಸಿದ್ದಾರೆ. ಕೆ.ಶಿವರುದ್ರಯ್ಯ ನಿರ್ದೇಶಿಸಿದ ದೇವನೂರ ಮಹಾದೇವ ಅವರ ಕಥೆ ಆಧಾರಿತ ‘ಮಾರಿಕೊಂಡವರು’ ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ.

ರಂಗ ದಿಗ್ಗಜರಾದ ಬಿ.ವಿ.ಕಾರಂತ, ಪ್ರಸನ್ನ, ಸಿ.ಬಸವಲಿಂಗಯ್ಯ, ಸುರೇಶ್ ಆನಗಳ್ಳಿ, ಬಿ. ಜಯಶ್ರೀ, ಚಿದಂಬರರಾವ್ ಜಂಬೆ, ರಘು ನಂದನ್, ಆರ್.ನಾಗೇಶ್, ಪ್ರಕಾಶ್ ಬೆಳವಾಡಿ ಮುಂತಾದವರ ನಿರ್ದೇಶನದ, ರಂಗಪ್ರಯೋಗಗಳಲ್ಲಿ ಅಭಿನಯಿಸಿರುವ ಇವರು ತಮ್ಮದೇ ಆದ ಶಶಿ ಥಿಯೇಟರ್ ಆರಂಭಿಸಿ ಹೊಸ ಪ್ರತಿಭೆಗಳನ್ನು ರಂಗಭೂಮಿಗೆ ಪರಿಚಯಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶಶಿಕಲಾ ಅವರು 2019ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಹಲವು ಸಮಸ್ಯೆಗಳು

ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…

19 mins ago

ಮರ ಕಡಿಯದೆಯೇ ಕಾಗದ ತಯಾರಿಸುವ ಪೇಪರ್‌ ಪವಾರ್‌

ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…

42 mins ago

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಕನ್ನಡದ ಲೇಖಕಿ

ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…

55 mins ago

ಹಳೆಯ ಪುಸ್ತಕಗಳ ನಡುವೆ ನಗುವ ಆನಂದರಾಯರು

ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…

1 hour ago

ಓದುಗರ ಪತ್ರ | ರೇಣುಕಾ ಇತರರಿಗೆ ಮಾದರಿ

ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…

3 hours ago

ನುಡಿ ಜಾತ್ರೆಗೆ ದಿಢೀರ ಮಳೆ ಸಿಂಚನ

ಒಂದೆಡೆ ತಂಪಿನ ವಾತಾವರಣ : ಮತ್ತೊಂದೆಡೆ ಕಿರಿಕಿರಿ ಉಂಟುಮಾಡುವ ಕೆಸರುಮಯ ತಾಣ ಜಿ. ತಂಗಂ ಗೋಪಿನಾಥಂ ಮಂಡ್ಯ: ಕಳೆದ ಎರಡು…

3 hours ago