ವಾರಾಂತ್ಯ ವಿಶೇಷ

ಬರಿಗಣ್ಣ ನೋಟಕ್ಕೆ ಕಾಣಿಸುತ್ತಲೇ ಕಾಣೆ ಆದವರು

ಫೆ.23ರ ಭಾನುವಾರ ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತೆಯಲ್ಲಿ ಕಾಣೆ ಆದವರು ನಾಟಕ ಪ್ರದರ್ಶನ

ಮೂರನೇ ಬೆಲ್ ಆಗುವಾಗ ನಾಟಕ ಶುರು ಆಗುತ್ತೆ ಅನ್ನುವುದು ನಿಮ್ಮ ಕಂಡೀಷನಿಂಗ್ ಆಗಿದ್ದರೆ ಇಲ್ಲಿ ಅದು ಮಸುಕಾಗುತ್ತದೆ. ಏಕೆಂದರೆ, ಯಾವುದು ನಾಟಕ? ರಂಗದ ಮೇಲೆ ವೈರುಧ್ಯಗಳು ಮುಖಾಮುಖಿಯಾಗಿ ಕೆಲವೊಮ್ಮೆ ಜೊತೆ ಯಾಗಿ ಕಾಣಿಸಿಕೊಳ್ಳುವಾಗ ಒಂದು ಅಭಿಪ್ರಾಯ ತಳೆಯುವುದು ಸರಳವಲ್ಲ.

ಅಲ್ಲಿ ಒಂದು ಕವಿತೆ ಇದೆ. ಅವಳ ಜಗತ್ತಿನ ವೈಚಿತ್ರಗಳು ಅವಳನ್ನು ಕಂಗೆಡಿ ಸುತ್ತಲೇ ಜೀವ ಚೈತನ್ಯವನ್ನೂ ತುಂಬುತ್ತಿವೆ. ಆದರೆ ಅದನ್ನೆಲ್ಲಾ ಅರ್ಥಮಾಡಿ ಕೊಂಡು ಕೊರಗಿ ಕಡೆಯಾಗಲು ಅವಳಿಗೆ ಸಮಯವಿಲ್ಲ. ಏಕೆಂದರೆ ಅವಳು ಓಡಬೇಕು. ತಲೆ ಬಾಚಿ, ಹೆಲ್ಮೆಟ್ ಧರಿಸಿ, ಬ್ಯಾಗ್ ನೇತು ಹಾಕಿ ಓಡೋಡುತ್ತಾ ಹೋಗಿ ಮತ್ತೆ ಓಡೋಡುತ್ತಾ ಬಂದು ಹಾಗೇ ನಿಂತು ಮೀನು ಹುರಿಯಬೇಕು. ಹುರಿಯುತ್ತಲೇ ಇರಬೇಕು. ಏಕೆಂದರೆ ಅವಳಿಲ್ಲದೆ ಮೀನು ಮೀನಾಗದು. ದಿನದಿನಕ್ಕೂ ಆ ಮಸಾಲೆ ಅವಳ ತಲೆಯಲ್ಲೇ ತಿರುಗುತ್ತಾ ಅವಳ ಮನಸ್ಸನ್ನೆಲ್ಲಾ ಅವರಿಸಿ ಮತ್ಯಾವುದಕ್ಕೂ ಅವಕಾಶ ಸಿಗದ ಹಾಗೆ ಅವಳು ಕಳೆದುಹೋಗಬೇಕು.

ಈಗ ರಂಗಾಯಣದಲ್ಲಿ ಪ್ರದರ್ಶನಗೊಳ್ಳುತ್ತಿರುವ ವಾರಾಂತ್ಯ ನಾಟಕ ‘ಕಾಣೆ ಆದವರು’ ಒಂದು ವಿನ್ಯಾಸದ ಮಾದರಿಗೆ ಒಳಪಟ್ಟಂತಹ ನಾಟಕ. ಇಂಗ್ಲಿಷಿನಲ್ಲಿ ಹೇಳುವುದಾದರೆ ಡಿವೈಸ್ಡ್ ಪ್ಲೇ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಪದವೀಧರರಾದ ಸೌರವ್ ಅವರು ನಿರ್ದೇಶಿಸಿ ನಮ್ಮ ರಂಗಾಯಣದ ಅನುಭವಿ ಕಲಾವಿದರಾದ ನಂದಿನಿ, ಶಶಿಕಲಾ ಮತ್ತು ಗೀತಾ ಇವರುಗಳು ಕಟ್ಟಿಕೊಡುವ ಈ ನಾಟಕ ಹರಿಯುವ ಕತೆಗೆ ಎಲ್ಲೋ ಒಂದು ಹಂತದಲ್ಲಿ ಮಾತ್ರ ಸಂಧಿಸುವ ಸಾಧ್ಯತೆ ತೋರಿಸುತ್ತದೆ.

ಕಳೆದುಹೋಗುವುದು ಅಂದರೆ ಎಲ್ಲೋ ಹೋಗಿ ತನ್ನ ಪಾಡಿಗೆ ತಾನು ಇದ್ದುಬಿಡುವುದಲ್ಲ. ಹಾಗೆ ಸ್ವಂತದ ಒಂದು ಹುಡುಕಾಟಕ್ಕೆ ಇಲ್ಲಿ ಅವಕಾಶವೇ ಇಲ್ಲ. ಪ್ರತಿಭಟಿಸುವಷ್ಟು ಸ್ಪಷ್ಟತೆ ಅವಳಿಗೂ ಇಲ್ಲ. ತಾನೇನೋ ಆಗಲು ಹೋಗಿ ಇನ್ನೇನೋ ಆಗಿದ್ದೀನಿ. ಆ ಅದೇನೋ ‘ಆಗಲು’ ಹೋದವಳು ಎಲ್ಲಿ ಹೋದಳು ಅಂತ ನೋಡಿದರೆ, ಆ ಅವಳು ಇಲ್ಲವೇ ಇಲ್ಲ. ಸತ್ತು ಹೋಗಿ ದ್ದಾಳೆ. ಆದರೆ ಅವಳ ಹೆಣವೂ ಸಿಗು ತ್ತಿಲ್ಲ. ಹಾಗಂತ ಅವಳು ಸತ್ತಿಲ್ಲ. ಕಾಣಿಸುತ್ತಲೇ ಇಲ್ಲ ಅಷ್ಟೇ. ಅವಳು ಕೊಲೆಯಾಗಿದ್ದಾಳೆ, ಅಲ್ಲಲ್ಲ ಕೊನೆ ಯಾಗಿದ್ದಾಳೆ. ಆ ಕೊನೆಯ ಕೊಲೆ ಗಾರರು ಯಾರು ಅಂತ ಹುಡುಕಿ ದರೆ ಉತ್ತರ ಸರಳವಾಗಿ ಸಿಗುವುದೇ ಇಲ್ಲ. ಆ ಅವಳು ಎಲ್ಲೆಲ್ಲೂ ಇದ್ದಾಳೆ, ಸರ್ವಾಂತರ್ಯಾಮಿಯ ಹಾಗೆ.

ಹಸೀ ಹಸಿತನವನ್ನು ಮರೆ ಮಾಡುವ ಪ್ರಯತ್ನ ಇಲ್ಲಿಲ್ಲ. ‘ಕಾಣೆ ಆದವರು‘ ಒಂದು ಡಿವೈಸ್ಡ್ ಅಂದರೆ ನಟರ ಜೊತೆ ಕೂತು ವಿನ್ಯಾಸಗೊಳಿ ಸಲಾದ ಹಾಗೂ ಸಾಮುದಾಯಿಕ ಚೌಕಟ್ಟಿನಲ್ಲಿ ಒಟ್ಟಾಗಿಸಲಾದ ಚಿತ್ರ ಗಳ ಕೆಲಿಡೋಸ್ಕೋಪ್ ಇದು.

ಒಂದೊಮ್ಮೆ ನೋಡಿದರೆ ಇದು ನಾಟಕದ ಸಿದ್ಧ ಮಾದರಿಯನ್ನು ಮುರಿದು ಈ ಪ್ರದರ್ಶನದಲ್ಲಿ ನಮ್ಮೊಂದಿಗೆ ನಿಲ್ಲುವಿರಾ ಎನ್ನುವ ಸವಾಲನ್ನು ಪ್ರೇಕ್ಷಕರಿಗೂ ಹಾಕುವ ನಾಟಕ ಇದು. ಸಾಗುತ್ತಿರುವ ಕಥೆಗೆ ಎಲ್ಲೋ ಒಂದು ಕಡೆ ಮಾತ್ರ ಚೌಕಟ್ಟು ಹಾಕಿದ ಹಾಗೆ. ವೆಯಿಟಿಂಗ್ ಫಾರ್ ಗಾಡೋ ರೀತಿಯ ಅಸಂಗತ ನಾಟಕಗಳ ಪಟ್ಟಿಗೆ ಇದು ಸೇರಬಹುದು ಎನ್ನಿಸಿದರೂ ಈ ನಾಟಕ ಪ್ರೇಕ್ಷಕರ ಪಾಲಿಗೆ ಹೊಸ ಅನುಭವವೇ ಹೌದು. ಸಾಕಷ್ಟು ಮೂರು ಅಂಕದ ನಾಟಕಗಳನ್ನು ಅಂದರೆ ತ್ರೀ ಆಕ್ಟ್ ಪ್ಲೇಗಳನ್ನು ನೋಡಿರುವ ನಾವು ನಾಟಕ ಶುರುವಾಗಿ, ಕಥೆಯ ಎಳೆ ಬಿಡಿಸಿ ಮತ್ತೆ ಒಂದು ತಾರ್ಕಿಕ ಅಂತ್ಯಕ್ಕೆ ಬರಲಿ ಎಂದು ಬಯಸು ತ್ತೇವೆ. ಆದರೆ ಪರಿಚಿತ ಹಾಡಿನ ಸಾಲುಗಳು ಇದ್ದಕ್ಕಿದ್ದ ಹಾಗೆ ಬದ ಲಾಗಿ ನಾವು ಗುನುಗಿದ್ದ ಪದಗಳು ಅಲ್ಲಿ ಇಲ್ಲ ಎನ್ನುವುದು ಗೊತ್ತಾದಾಗ ಆಗಬಹುದಾದ ತಳಮಳ ಈ ನಾಟಕ ನಿಮ್ಮಲ್ಲಿ ಎಬ್ಬಿಸುವ ಭಾವ.

ಇಲ್ಲಿ ‘ಅವಳು’ ಕಾಣೆಯಾದ ತಕ್ಷಣ ಒಂದು ಪ್ರಶ್ನೆ ಏಳುತ್ತದೆ. ‘ಕಣ್ಮರೆಯಾದವರು ಏನಾಗುತ್ತಾರೆ? ’ ವೇದಿಕೆಯ ಮೇಲೆ, ಅರೆ ಮುರಿದ, ಧ್ವಂಸವಾದ ಕನಸಿನಂತಹ ಪ್ರಪಂಚ ಕಾಣಿಸುತ್ತದೆ. ಅಲ್ಲಿನ ಆ ಮೌನ ಮಾತಿಗಿಂತ ಜೋರಾಗಿ ಪ್ರತಿಧ್ವನಿಸು ತ್ತದೆ. ಮರೆತುಹೋದ ಕಥೆಗಳು ಮತ್ತು ಉತ್ತರವಿಲ್ಲದ ಆರ್ತ ಕೂಗುಗಳ ಹುಡುಕಾಟವಿದೆ. ಇತಿಹಾಸದ ಗೋರಿಯನ್ನು ಒದ್ದು ಎಬ್ಬಿಸಿ ಕೇಳುವ ಪ್ರಶ್ನೆ ಗಳಿಗೆ ಇಲ್ಲಿ ಅವಡುಗಚ್ಚಿದ ಸಿಟ್ಟಿನ ಎತ್ತಲಾಗದ ಕೈಯ ಅಸಹಾಯಕತೆಯೇ ಉತ್ತರ. ಅವಳು ಇಲ್ಲಿಲ್ಲ. ಅವಳು ಅಲ್ಲೂ ಇಲ್ಲ. ಇಲ್ಲಿದ್ದಳು, ಆದರೆ ನಿಮಗೆ ಕಾಣು ವುದಿಲ್ಲ. ಯಾಕೆಂದರೆ ಅವಳು ಕಳೆದುಹೋಗಿಲ್ಲ. ಕಾಣೆಯಾಗಿಸಲಾಗಿದೆ.

ಒಂದು ಲಿಂಗದ ವಿರುದ್ಧದ ನಿರಂತರ ಹಿಂಸೆ, ಜನಾಂಗ, ಧರ್ಮ, ಜಾತಿ ಅಥವಾ ವರ್ಗದ ಮೇಲಿನ ಸತತ ಹಿಂಸಾಚಾರವನ್ನು ಬಹಿರಂಗಪಡಿಸುತ್ತವೆ. ಏಕೆಂದರೆ ಏನನ್ನು ಸವಾಲು ಹಾಕಿ ಬದಲಾಯಿಸಬೇಕೆಂದು ಬಯಸಿದ್ದರೋ ಆ ಶಕ್ತಿಗಳೇ ಇವರನ್ನು ಬಲವಂತದ ಮೌನಕ್ಕೆ ನೂಕಿವೆ.

ಈ ನಾಟಕದ ನಿರ್ದೇಶಕ ಸೌರವ್ ವಿನ್ಯಾಸದಲ್ಲಿ ಪರಿಣತಿ ಹೊಂದಿರುವ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ(NSD)ದ ೨೦೧೪ರ ಬ್ಯಾಚ್ ವಿದ್ಯಾರ್ಥಿ. ತಂತ್ರಜ್ಞಾನ, ಸಾಂಸ್ಕೃತಿಕ ಹಾಗೂ ಮಾಧ್ಯಮ ಅಭ್ಯಾಸ ಗಳು ಮತ್ತು ಕಾರ್ಯಕ್ಷಮತೆಯೊಂದಿಗೆ ದೃಶ್ಯ ಸಂಸ್ಕ ತಿ ಮತ್ತು ಸೈಬರ್‌ಸ್ಪೇಸ್. ಸಂಽಸುವ ಸಂದರ್ಭಗಳನ್ನು ಅನ್ವೇಷಿಸುವ ಪ್ರಾಯೋಗಿಕ ಸಾಧನಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನ ಮತ್ತು ಸಿದ್ಧಾಂತವನ್ನು ಸಂಯೋಜಿಸುವತ್ತ ಅವರಿಗೆ ವಿಶೇಷ ಆಸಕ್ತಿ ಇದೆ. ‘ಕಾಣೆ ಆದವರು’ ಸ್ವಲ್ಪ ಬೇರೆಯೇ ಭಾವ ಮೂಡಿಸುತ್ತದಲ್ಲ ಎಂದು ಕೇಳಿದರೆ ಅವರು ಹೀಗೆ ಹೇಳುತ್ತಾರೆ ‘ರಂಗ ಭೂಮಿ ಕೊಡುವ ಯಾವ ಕಂಫರ್ಟ್‌ಅನ್ನೂ ನಿಮಗೆ ನಾನು ಇಲ್ಲಿ ಕೊಡ ಲಾರೆ. ಯಾಕೆಂದರೆ ನಾನು ಇಲ್ಲಿ ನಿಮ್ಮನ್ನು ನಮ್ಮ ನಟರ ಅರಿಕೆಗೆ ಮುಖಾ ಮುಖಿಯಾಗಿಸುತ್ತಿದ್ದೇನೆ. ಇನ್ನು ಅವರುಂಟು, ನೀವುಂಟು, ನಿಮ್ಮೊಳಗಿನ ತಲ್ಲಣಗಳುಂಟು’. ಫೆ. ೨೩ರ ಭಾನುವಾರ ಸಂಜೆ ೬. ೩೦ಕ್ಕೆ ರಂಗಾಯಣದ ಭೂಮಿಗೀತದಲ್ಲಿ ‘ಕಾಣೆ ಆದವರು’ ನಾಟಕ ಕಡೆಯ ಶೋ ಇದೆ. ಮತ್ತೆ ರಿಪೀಟ್ ಆಗಲು ಸಾಕಷ್ಟು ಕಾಲ ಬೇಕಾಗಬಹುದು.

ಆಂದೋಲನ ಡೆಸ್ಕ್

Recent Posts

ಕೂರ್ಗಳ್ಳಿ ಕೆರೆ ಒತ್ತುವರಿ ಕೂಗು; ಗ್ರಾಮಸ್ಥರಲ್ಲಿ ಹಲವು ಅನುಮಾನ

ಸಾಲೋಮನ್ ೨೨.೨೦ ವಿಸ್ತೀರ್ಣದ ಕೆರೆ ಈಗ ಉಳಿದಿರುವುದು ೫ ಎಕರೆ! ಅನೇಕ ವರ್ಷಗಳಿಂದ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಯಾರೇ…

10 mins ago

ಸ್ಥಳೀಯ ಸಂಸ್ಥೆ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ: ಭೋಸರಾಜು

ನವೀನ್ ಡಿಸೋಜ ಖಾಲಿ ಹುದ್ದೆಗಳ ಭರ್ತಿ ಸಂಬಂಧ ಚರ್ಚೆ ಸ್ಥಳೀಯ ಸಂಸ್ಥೆಗಳ ಸಮಸ್ಯೆ ಹಿಂದಿನಿಂದಲೂ ಇದೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ…

15 mins ago

‘ಖಾಲಿ ಹುದ್ದೆ ಭರ್ತಿಗೆ ಕ್ರಮವಹಿಸುವುದು ಅಗತ್ಯ : ಸಚಿವ ಚಲುವರಾಯಸ್ವಾಮಿ

ಬಿ.ಟಿ. ಮೋಹನ್ ಕುಮಾರ್ ಶೇ.೬೦ರಷ್ಟು ಬಿ, ಸಿ, ಡಿ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿ ಪೌರಕಾರ್ಮಿಕರ ಹುದ್ದೆ ಭರ್ತಿಗೆ ಸಂಬಂಧಪಟ್ಟ…

16 mins ago

ಬೀದಿ ಮಕ್ಕಳ ಆಶಾಕಿರಣ “ಚೇತನಾ”

ಪಂಜು ಗಂಗೊಳ್ಳಿ  ಹತ್ತನೇ ತರಗತಿ ಪರೀಕ್ಷೆಗಳು ಮುಗಿದು ಲಕ್ಷಾಂತರ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಕ್ಕಳಿಗೆ ಈ ಹತ್ತನೇ…

17 mins ago

ಓದುಗರ ಪತ್ರ: ಗಿಡಗಂಟೆ ತೆರವುಗೊಳಿಸಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕ್ಯಾತಮಾರನಹಳ್ಳಿ 4ನೇ ಹಂತದ ಕಲ್ಯಾಣಗಿರಿ ನಗರ ಬಡಾವಣೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ವಾಸದ ಮನೆಗಳ ಪಕ್ಕ ಇರುವ…

17 mins ago

ಅವಶ್ಯಕತೆಗೆ ಅನುಗುಣವಾಗಿ ನೇಮಕಾತಿ: ಸಚಿವ ವೆಂಕಟೇಶ್‌

ಆಂದೋಲನ’ ಸಂದರ್ಶನದಲ್ಲಿ ಸಚಿವ ಕೆ.ವೆಂಕಟೇಶ್ ಭರವಸೆ ನೇರ ನೇಮಕಾತಿ ಅಥವಾ ನಿಯೋಜನೆ ಮೂಲಕ ಭರ್ತಿಗೆ ಸೂಚನೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ…

18 mins ago