ವಾರಾಂತ್ಯ ವಿಶೇಷ

ಭರತನಾಟ್ಯ, ಜಾನಪದ ನೃತ್ಯ ಕ್ಷೇತ್ರದಲ್ಲಿ ನಾಗಶ್ರೀ ಕಲಾ ವೈಭವ

ಜಿ. ತಂಗಂ ಗೋಪಿನಾಥಂ

ಭವ್ಯ ಕಲಾ ಪಂಪರೆ ಹೊಂದಿರುವ ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ಕಲಾ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆ ಗುರುತು ಮೂಡಿಸಿರುವ ಭರತನಾಟ್ಯ ಶಿಕ್ಷಕಿ ವಿದುಷಿ ನಾಗಶ್ರೀ -ಣೀಂದ್ರ ಕುಮಾರ್ ನಾಟ್ಯವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ. ಅವರು ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ನಾದಿನಿ (ತಮ್ಮನ ಪತ್ನಿ) ಎಂಬುದು ಗಮನಾರ್ಹ.

ಭರತನಾಟ್ಯ ಕಲಾವಿದೆಯಾಗಿ, ನಾಟ್ಯ ಶಿಕ್ಷಕಿ ಹಾಗೂ ನೃತ್ಯ ನಿರ್ದೇಶಕಿ, ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ನಾಗಶ್ರೀ ಅವರು, ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರ ನಾಟ್ಯಕ್ಕೆ ಹಲವರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಲೆಮರೆ ಕಾಯಿಯಂತೆ ನೃತ್ಯಾಭಾಸದಲ್ಲಿ ತೊಡಗಿಸಿಕೊಂಡಿರುವ ನಾಗಶ್ರೀ ಅವಕಾಶ ಸಿಕ್ಕಾಗಲೆಲ್ಲ ವೇದಿಕೆಯ ಮೇಲೆ ಮಿಂಚಿದ್ದಾರೆ. ಬಾಲ್ಯದಿಂದಲೂ ಭರತನಾಟ್ಯ ಕಲಿಯಬೇಕು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದ ನಾಗಶ್ರೀ ಹಂತ ಹಂತವಾಗಿ ಗುರಿಯನ್ನು ಸಾಕಾರ ಮಾಡಿ ಕೊಂಡಿದ್ದಾರೆ.

೨೦೦೯ ನ. ೧೪ ರಂದು ಮೈಸೂರಿನ ವಿಜಯನಗರ ೩ನೇ ಹಂತದಲ್ಲಿ ‘ಶ್ರೀ ನಟರಾಜ ಪ- ರ್ಮಿಂಗ್ ಆರ್ಟ್ಸ್ ಸೆಂಟರ್’ ಎಂಬ ಸಂಸ್ಥೆ ಯನ್ನು ಸ್ಥಾಪಿಸಿ ಕಲಾಸಕ್ತಿ ಇರುವ ನೂರಾರು ಮಂದಿಗೆ ಕಲೆಯನ್ನು ಧಾರೆ ಎರೆಯುವ ಮೂಲಕ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಈ ಶಾಲೆಯಲ್ಲಿ ಕೇವಲ ಶಾಸೀಯ ನೃತ್ಯವಾದ ಭರತನಾಟ್ಯ ಮಾತ್ರ ವಲ್ಲದೆ, ಜಾನಪದ, ಲಘು ಶಾಸೀಯ ನೃತ್ಯವನ್ನೂ ಹೇಳಿಕೊಡುತ್ತಿದ್ದಾರೆ.

ದೇವಿ ಮಹಾತ್ಮೆ, ಮಹಿಷಾಸುರ ಮರ್ದಿನಿ, ಭಕ್ತಪ್ರಹ್ಲಾದ, ಕನ್ನಡದ ಕಣ್ಮಣಿಗಳು, ಮೋಹಿನಿ ಭಸ್ಮಾಸುರ, ಶ್ರೀನಿವಾಸ ಕಲ್ಯಾಣ, ಶಿವ ವೈಭವ, ನಮೋ ಹನುಮ, ನವದುರ್ಗಾ ವೈಭವ, ದಶಾವತಾರ, ರಾಮಾಯಣ, ಶ್ರೀಕೃಷ್ಣ ಲೀಲಾ ಮುಂತಾದ ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದಾರೆ.

ಮೈಸೂರು ದಸರಾ, ಪಂಜಿನ ಕವಾಯತು, ಸಂಸ್ಕಾರ ಭಾರತಿಯ ಭರತಮುನಿ ಜಯಂತಿ, ನೃತ್ಯಗಿರಿ ನೃತ್ಯ ಸಪ್ತಾಹ, ಶಿವರಾತ್ರಿ, ಗಣಪತಿ ಉತ್ಸವ ಸೇರಿದಂತೆ ರಾಷ್ಟ್ರದ ನಾನಾ ಕಡೆ ಹಲವಾರು ಯಶಸ್ವಿ ನೃತ್ಯ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟಿದ್ದಾರೆ. ಕೇವಲ ಶಾಸೀಯ ನೃತ್ಯಕ್ಕೆ ಸೀಮಿತವಾಗದೆ ಚಲನಚಿತ್ರ, ಜಾನಪದ, ಲಘು ಶಾಸೀಯ, -ಷನ್ ನೃತ್ಯಗಳನ್ನೂ ನಿರ್ದೇಶಿಸಿದ್ದಾರೆ.

ನಾಗಶ್ರೀ ನಡೆದು ಬಂದ ಹಾದಿ
ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿವಯರಾದ ನಾಗಶ್ರೀ ಫಣೀಂದ್ರ ಕುಮಾರ್ ಅವರಿಗೆ ಭರತನಾಟ್ಯದ ಮೇಲೆ ಆಸಕ್ತಿ ಮೂಡಿದ್ದು ೫ನೇ ತರಗತಿಯಲ್ಲಿ. ಇವರದು ವೈವಿಧ್ಯಮಯ ವ್ಯಕ್ತಿತ್ವ. ಬಾಲ್ಯದಲ್ಲಿ ವಿದುಷಿ ಉಷಾ ವೇಣುಗೋಪಾಲ್ ಅವರ ಬಳಿ ನೃತ್ಯ ಶಿಕ್ಷಣವನ್ನು ಆರಂಭಿಸಿದ ಇವರು, ನಂತರದಲ್ಲಿ ಮೈಸೂರಿನ ಹೆಸರಾಂತ ನೃತ್ಯ ಶಿಕ್ಷಕಿ ಡಾ. ಕೃಪಾ -ಡ್ಕೆ ಅವರ ಬಳಿ ವಿದ್ವತ್ ಹಂತದ ನೃತ್ಯ ಶಿಕ್ಷಣವನ್ನು ಪಡೆದಿದ್ದಾರೆ. ಬೆಂಗಳೂರಿನ ಕರ್ನಾಟಕ ಕಲಾಶ್ರೀ ವಿದುಷಿ ಭಾನುಮತಿ ಬಳಿಯೂ ನೃತ್ಯ ತರಬೇತಿ ಪಡೆದಿದ್ದಾರೆ. ಭರತನಾಟ್ಯದ ಜೂನಿ ಯರ್, ಸೀನಿಯರ್ ಹಾಗೂ ವಿದ್ವತ್ ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಅಲ್ಲದೇ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಿಂದ ನೃತ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಎಂ. ಎ ಪಡೆದಿದ್ದಾರೆ. ಬಹು ಪ್ರತಿಷ್ಠಿತ ಗಾನಭಾರತೀ ಸಂಗೀತ ನೃತ್ಯ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಕಳೆದ ೨೦ ವರ್ಷ ಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡಿಪಾಲ್ ಇಂಟರ್ ನ್ಯಾಷನಲ್ ಸ್ಕೂಲ್’, ‘ಪ್ರಗತಿ ವಿದ್ಯಾಕೇಂದ್ರ’, ‘ರೋಟರಿ ಮಿಡ್ ಟೌನ್’, ‘ಕೇಂದ್ರೀಯ ವಿದ್ಯಾಲಯ’ ಮುಂತಾದ ಸಂಸ್ಥೆಗಳಲ್ಲಿ ನೃತ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ. ಭಾರತೀಯ ನೃತ್ಯ ಕಲಾ ಪರಿಷತ್ ಮೈಸೂರು, ಇದರ ಮಾನಿತ ಜಂಟಿ ಕಾರ್ಯದರ್ಶಿ ಯಾಗಿ ಹಾಗೂ ಸಂಸ್ಕಾರ ಭಾರತೀ ಮೈಸೂರು ಜಿಲ್ಲೆಯ ನೃತ್ಯವಿದಾ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

೨೦ ವರ್ಷಗಳಿಂದ ಭರತನಾಟ್ಯ ಸೇವೆ
ವಿದುಷಿ ನಾಗಶ್ರೀ -ಣೀಂದ್ರ ಕುಮಾರ್ ಅವರು ಕಳೆದ ೨೦ ವರ್ಷಗಳಿಂದ ಭರತನಾಟ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾವುದೇ ಶೈಲಿಗೆ ಕಟ್ಟುಬೀಳದೆ ಭರತನ ನಾಟ್ಯಶಾಸ ಆಧಾರಿತ ರೀತಿಯಲ್ಲಿ ನೃತ್ಯ ಪಸರಿಸುತ್ತಿದ್ದಾರೆ. ನಾಗಶ್ರೀ ಅವರು ನೂರಾರು ವಿದ್ಯಾರ್ಥಿಗಳಿಗೆ ನೃತ್ಯ ಶಿಕ್ಷಣ ನೀಡುತ್ತಾ, ಅವರ ಪ್ರತಿಭೆಗೆ ಉತ್ತಮ ವೇದಿಕೆ ಕಲ್ಪಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ವಿದ್ವತ್ ದರ್ಜೆಯಲ್ಲಿ, ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ರಂಗ ಪ್ರವೇಶಗಳನ್ನು ಪೂರೈಸಿ, ತಮ್ಮದೇ ಆದ ನೃತ್ಯ ಸಂಸ್ಥೆಗಳನ್ನು ಪ್ರಾರಂಭಿಸಿ, ನೃತ್ಯ ಶಿಕ್ಷಣವನ್ನು ನೀಡುತ್ತಿದ್ದಾರೆ.

ಭರತನಾಟ್ಯ ಶಿಕ್ಷಕಿ ಆಗಿರುವುದು ಹೆಮ್ಮೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಭರತನಾಟ್ಯ ಸೇರಿದಂತೆ ದೇಶೀಯ ಕಲೆಗಳು ನಶಿಸಿ ಹೋಗುತ್ತಿದ್ದು, ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸ ಬೇಕು. -ವಿದುಷಿ ನಾಗಶ್ರೀ

ಜ. ೨೬ ರಿಂದ ‘ಮಂಜಿರ ಮಹೋತ್ಸವ’. . ಮೈಸೂರಿನ ಕುವೆಂಪುನಗರದ ಗಾನಭಾರತಿಯ ರಮಾ ಗೋವಿಂದ ಕಲಾ ವೇದಿಕೆ ಯಲ್ಲಿ ಶ್ರೀ ನಟರಾಜ ಪ-ಮಿಂಗ್ ಆರ್ಟ್ಸ್ ಸೆಂಟರ್ ವತಿಯಿಂದ ಜ. ೨೬ ರಿಂದ ೨೮ ರವರೆಗೆ ರಾಷ್ಟ್ರೀಯ ಮಟ್ಟದ ಶಾಸೀಯ ನೃತ್ಯೋತ್ಸವ ‘ಮಂಜಿರ ಮಹೋತ್ಸವ’ ವನ್ನು ಹಮ್ಮಿಕೊಳ್ಳಲಾಗಿದೆ. ಜ. ೨೬ರ ಸಂಜೆ ೫. ೪೫ಕ್ಕೆ ಸಂಸ್ಕೃತಿ ದಿ ಟೆಂಪಲ್ ಆ- ಆಟ್ ನ ನಿರ್ದೇಶಕ ವಿದ್ವಾನ್ ಡಾ. ಸತ್ಯನಾರಾಯಣ ರಾಜು ಅವರು ಮಂಜಿರ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನೃತ್ಯಗಿರಿ ಪ್ರದರ್ಶಕ ಕಲೆಗಳ ಸಂಶೋಧನ ಕೇಂದ್ರದ ನಿರ್ದೇಶಕರಾದ ವಿದುಷಿ ಡಾ. ಕೃಪಾ -ಡ್ಕೆ ಮುಖ್ಯ ಅತಿಥಿಯಾಗಿ ಭಾಗ ವಹಿಸಲಿದ್ದಾರೆ. ಮೂರು ದಿನಗಳು ಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಲಿದೆ.

ಆಂದೋಲನ ಡೆಸ್ಕ್

Recent Posts

ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಗಾರು ಮಳೆಯಾಗಲಿದೆ: ಹವಾಮಾನ ಇಲಾಖೆ ಮಾಹಿತಿ

ನವದೆಹಲಿ: ಈ ಬಾರಿ ಮುಂಗಾರು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ತರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೂ…

18 mins ago

ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಗಿ ರದ್ದು: ಸುಪ್ರೀಂ ಸೂಚನೆ

ನವದೆಹಲಿ: ಆಸ್ಪತ್ರೆಯು ನವಜಾತ ಶಿಶುಗಳನ್ನು ಕಳ್ಳಸಾಗಣೆ ಮಾಡಿದರೆ ಅಂತಹ ಆಸ್ಪತ್ರೆಗಳ ಪರವಾನಗಿಯನ್ನು ಕೂಡಲೇ ರದ್ದು ಮಾಡಿ ಎಂದು ಸುಪ್ರೀಂಕೋರ್ಟ್‌ ಮಹತ್ವದ…

33 mins ago

ಲಾರಿ ಮಾಲೀಕರ ಮುಷ್ಕರ: ಮೊದಲ ಸಂಧಾನ ಸಭೆ ವಿಫಲ

ಬೆಂಗಳೂರು: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದು, ಲಾರಿ ಸಂಚಾರ ಬಂದ್‌ ಆಗಿವೆ. ಈ ಹಿನ್ನೆಲೆಯಲ್ಲಿ…

40 mins ago

ಟಿ.ನರಸೀಪುರ| ಅಪಘಾತದ ವೇಳೆ ನದಿಗೆ ಬಿದ್ದಿದ್ದ ತಾಯಿಯ ಮೃತದೇಹ ಪತ್ತೆ

ಟಿ.ನರಸೀಪುರ: ಬೈಕ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ನದಿಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು…

51 mins ago

ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿ ಪತ್ತೆ

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಗುಜರಾತ್‌ನ ವಡೋದರಾ…

1 hour ago

ಜಾತಿಗಣತಿ ವರದಿಯಲ್ಲಿ ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾದರೆ ಸಿಡಿದೇಳಬೇಕಾಗುತ್ತದೆ: ಡಿ.ವಿ.ಸದಾನಂದಗೌಡ

ಬೆಂಗಳೂರು: ಜಾತಿ ಗಣತಿ (caste census) ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ (D. V. Sadananda Gowda) ಅವರು…

1 hour ago