ವಾರಾಂತ್ಯ ವಿಶೇಷ

ಐಪಿಎಲ್‌ನಲ್ಲಿ ಮನ್ವಂತರ| ಡೆಲ್ಲಿ ತಂಡಕ್ಕೆ ಮೈಸೂರಿನ ಮನ್ವಂತ್‌ಕುಮಾರ್‌ ಆಯ್ಕೆ

ಸಾಲೋಮನ್
ಮೈಸೂರು: ಭಾರತೀಯ ಕ್ರಿಕೆಟ್ ತಂಡಕ್ಕೆ ಆಡಬೇಕೆನ್ನುವುದು ನನ್ನ ಕುಟುಂಬದವರ ಕನಸು. ಅದು ನನಸಾಗುವ ಕಾಲ ಕೂಡಿ ಬಂದಿದೆ ಎಂದವರು ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಆಯ್ಕೆ ಆಗಿರುವ ಎಲ್. ಮನ್ವಂತರ್ ಕುಮಾರ್.

೨೦೨೫ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ) ತಂಡಕ್ಕೆ ಇದೇ ಮೊದಲ ಬಾರಿಗೆ ಮೈಸೂರಿ ನಿಂದ ಆಯ್ಕೆ ಆಗಿರುವ ಆಲ್ ರೌಂಡರ್ ಯುವ ಕ್ರಿಕೆಟಿಗ ಮನ್ವಂತರ್, ಸದ್ಯಕ್ಕೆ ಮಧ್ಯಪ್ರದೇಶ ರಾಜ್ಯದ ಇಂದೋರ್‌ನಲ್ಲಿ ನಡೆಯುತ್ತಿರುವ ‘ಸೈಯದ್ ಮಷ್ತಾಖ್ ಅಲಿ’ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ ತಂಡ ೩೦ ಲಕ್ಷಕ್ಕೆ ಇವರನ್ನು ಬಿಡ್ ಮಾಡಿದೆ. ವಿಶೇಷ ಎಂದರೆ, ಇವರು ಎಡಗೈ ಬ್ಯಾಟ್ಸ್ ಮನ್ ಹಾಗೂ ಬಲಗೈ ಬೌಲರ್ ಆಗಿzರೆ. ಇವರು ಬೌಲ್ ಮಾಡಿದಾಗ ಬಾಲು ಗಂಟೆಗೆ ೧೩೫ ಕಿ. ಮೀ. ವೇಗದಲ್ಲಿ ಚಲಿಸುತ್ತದೆ ಎಂದು ಲೆಕ್ಕಿಸಲಾಗಿದೆ.

‘ಆಂದೋಲನ’ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ‘ನಾನು ಚಿಕ್ಕಂದಿನಿಂದಲೂ ಕ್ರಿಕೆಟ್ ಆಡುತ್ತಾ ಬೆಳೆದ ವನು. ಈಗ ಐಪಿಎಲ್‌ಗೆ ಆಯ್ಕೆ ಆಗಿರುವುದು ನನಗೆ ತುಂಬಾ ಖುಷಿ ನೀಡಿದೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದರು.

ನಾನು ಈ ಹಂತಕ್ಕೆ ಬರಲು ನನ್ನ ತಂದೆ ಹಾಗೂ ನನ್ನ ಅಣ್ಣ ಹೇಮಂತ್ ಬಹಳ ಶ್ರಮಪಟ್ಟಿದ್ದಾರೆ. ನಾವಿಬ್ಬರೂ ಕ್ರಿಕೆಟರ‍್ಸ್ ಆಗಬೇಕೆನ್ನುವುದು ತಂದೆಯವರ ಕನಸು. ಅಣ್ಣನೂ ಒಳ್ಳೆಯ ಕ್ರಿಕೆಟರ್. ಅವನು ಅಂಡರ್ ೨೩ ರವರೆಗೂ ಆಡಿzನೆ. ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ) ನಲ್ಲಿ ಅವನೂ ಆಡಿzನೆ. ಅವನನ್ನೇ ಹಿಂಬಾಲಿಸಿಕೊಂಡು ನಾನು ಬಂದಿದ್ದೇನೆ. ಐಪಿಎಲ್‌ಗೆ ಆಯ್ಕೆಯಾಗಿದ್ದು ಅದೃಷ್ಟ ಎಂದರು.

ಮೈಸೂರಿನ ಜೆ. ಪಿ. ನಗರದ ನಿವಾಸಿ ಎಸ್. ಲಕ್ಷ್ಮೀ ಕುಮಾರ್ ಹಾಗೂ ಆರ್. ಶ್ರೀದೇವಿ ದಂಪತಿ ದ್ವಿತೀಯ ಪುತ್ರ ಮನ್ವಂತರ್. ತಂದೆಯ ಶ್ರಮಕ್ಕೆ ಫಲ ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಕ್ರಿಕೆಟ್‌ಗಾಗಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬೇಕಾಯಿತು. ಈ ಬಾರಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್(ಕೆಸಿಎ)ನಿಂದ ೨೬ ಮಂದಿ ಬಿಡ್‌ಗೆ ಸೆಲೆಕ್ಷನ್ ಪಟ್ಟಿಯಲ್ಲಿ ಹೆಸರು ಇತ್ತು. ಅದರಲ್ಲಿ ೭ ಮಂದಿ ಆಯ್ಕೆಯಾಗಿದ್ದಾರೆ. ಆ ಏಳರಲ್ಲಿ ನಾನೂ ಒಬ್ಬನಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.

ನನ್ನ ಮಗನ ಆಯ್ಕೆ ಖುಷಿ ತಂದಿದೆ
ನಾನೂ ಕ್ರಿಕೆಟ್ ಆಡುತ್ತಿದ್ದೆ. ಆದರೆ ಒಳ್ಳೆ ಅವಕಾಶಗಳು ಸಿಗಲಿಲ್ಲ. ನನ್ನ ಮಕ್ಕಳೂ ಆಡಲಿ ಎಂದು ಇಷ್ಟಪಟ್ಟು ಕ್ರಿಕೆಟ್ ತರಬೇತಿ ಕೊಡಿಸಿದೆ. ದೊಡ್ಡವನೂ ಚೆನ್ನಾಗಿ ಆಡುತ್ತಾನೆ. ಚಿಕ್ಕವನು ಈಗ ಐಪಿಎಲ್‌ಗೆ ಆಯ್ಕೆ ಆಗಿರುವುದು ನಮಗೆ ಖುಷಿ ತಂದಿದೆ. ಮನ್ವಂತರ್ ಕೆಪಿಎಲ್‌ನಲ್ಲಿ ‘ಹುಬ್ಬಳ್ಳಿ ಟೈಗರ‍್ಸ್’ ತಂಡದಲ್ಲಿ ೨೦೨೩ ಹಾಗೂ ೨೦೨೪ರಲ್ಲಿ ಆಡಿದ್ದಾನೆ. ಎಲ್ಲರ ಆಶೀರ್ವಾದ ಅವನಿಗೆ ಫಲಿಸಿದೆ. -ಎಸ್. ಲಕ್ಷ್ಮೀಕುಮಾರ್, ಮನ್ವಂತರ್ ತಂದೆ

ಯಾಂಡರ್ ಜಿಮ್ ಹೆಮ್ಮೆ
ಐಪಿಎಲ್‌ಗೆ ಆಯ್ಕೆಯಾದ ಮನ್ವಂತರ್ ಬಾಲ್ಯದಿಂ ದಲೂ ಕ್ರಿಕೆಟ್ ಆಡುತ್ತಿದ್ದರು. ಆದರೆ ಅವರ ೧೩ನೇ ವಯಸ್ಸಿ ನಲ್ಲಿ ನಗರದ ಹೆಬ್ಬಾಳು ಕೈಗಾರಿಕಾ ಬಡಾವಣೆ ಯಲ್ಲಿರುವ ‘ಯಾಂಡರ್ ಜಿಮ್’ನಲ್ಲಿ ವರ್ಕ್ ಔಟ್ ಆರಂಭಿಸಿದ್ದರು. ಅಲ್ಲಿಂದ ಅವರ ಕ್ರಿಕೆಟ್ ಜರ್ನಿಯಲ್ಲಿ ಬಹಳ ಬದಲಾವಣೆ ಕಂಡು ಬಂತು. ಇಲ್ಲಿ ಬೋಪಯ್ಯ ಎಂಬವರು ಮನ್ವಂತರ್ ಅವರಿಗೆ ತರಬೇತಿ ನೀಡಿದ್ದಾರೆ. ೬ ವರ್ಷಗಳಿಂದ ಫಿಸಿಕಲ್ ಫಿಟ್‌ನೆಸ್ ಇಲ್ಲಿಯೇ ಪಡೆದಿರುವುದು ಎನ್ನುವುದು ಯಾಂಡರ್ ಜಿಮ್‌ಗೆ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಜಿಮ್‌ನ ನಿರ್ಮಿತ್ ಹೇಳುತ್ತಾರೆ.

ಮನ್ವಂತರ್‌ ಸಾಧನೆಗೆ ಯಾಂಡರ್‌ ಜಿಮ್‌ ಸಹಕಾರ
ಅತ್ಯಾಧುನಿಕ ಉಪಕರಣಗಳು: ಕ್ರಮಬದ ತರಬೇತಿಗೆ ಆದ್ಯತೆ
ಮೈಸೂರು: ದೈಹಿಕ ಸಾಮರ್ಥ್ಯ, ಆಕಾರ ಹಾಗೂ ಸೌಂದರ್ಯ ಹೀಗೆ ನಾನಾ ಕಾರಣಗಳಿನ್ನಿಟ್ಟುಕೊಂಡು ಜಿಮ್ ಗಳ ಕಡೆಗೆ ಇಂದಿನ ಯುವಕರು ಮುಖ ಮಾಡಿದ್ದಾರೆ. ಹಿಂದಿನ ಗರಡಿ ಮನೆಗಳಿಗಿಂತಲೂ ಇಂದಿನ ಜಿಮ್‌ಗಳು ಯುವಕರ ಫಿಸಿಕಲ್ ಶೇಪ್ ಮತ್ತು ಸ್ಟ್ರೆಂಥ್ ಮೈಗೂಡಿಸಿಕೊಳ್ಳಲು ಅನುಕೂಲಕರವಾಗಿವೆ.

ಸುಮ್ಮನೆ ಜಿಮ್‌ಗಳಲ್ಲಿ ಇಷ್ಟ ಬಂದಂತೆ ವರ್ಕ್ ಔಟ್ ಮಾಡುವುದು ಒಳ್ಳೆಯದಲ್ಲ ಎಂದು ವೈದ್ಯರು ಹಾಗೂ ಜಿಮ್ ತರಬೇತುದಾರರು ಹೇಳುತ್ತಲೇ ಇದ್ದಾರೆ. ಸುಂದರ ದೇಹದ ಆಕಾರ ಪಡೆಯಲು ಕಠಿಣ ಶ್ರಮವೂ ಅಗತ್ಯ. ಆದರೆ ಶ್ರಮ ಮಿತಿ ಮೀರಬಾರದು ಎನ್ನು ವುದು ಅನೇಕರ ಅಭಿಪ್ರಾಯ. ಕ್ರಮಬದ್ಧವಾದ ವ್ಯಾಯಾಮ ಹಾಗೂ ಆಹಾರ ಸೇವನೆಯನ್ನು ಗಮನದಲ್ಲಿಟ್ಟು ಕೊಂಡು ಜಿಮ್‌ನಲ್ಲಿ ವರ್ಕ್ ಔಟ್ ಮಾಡುವುದು ಒಳ್ಳೆಯದು. ಇದಕ್ಕೆಲ್ಲ ಸೂಕ್ತ ವ್ಯವಸ್ಥೆಯನ್ನು ಹೊಂದಿದೆ ‘ಯಾಂಡರ್ ಜಿಮ್’.

‘ಯಾಂಡರ್ ಜಿಮ್’ ಮೈಸೂರಿನ ಹೊರವಲಯದ ಹೆಬ್ಬಾಳು ಬಡಾ ವಣೆಯಲ್ಲಿದೆ. ಇದರ ಮಾಲೀಕರಾದ ನಿರ್ಮಿತ್ ಹೇಳುವ ಪ್ರಕಾರ, ಇದೊಂದು ‘ಸೋಷಿಯಲ್ ಹಬ್’ ಅಂತೆ. ಇಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರೂ ಆಡಬಹುದಾದ ಎಲ್ಲ ಪರಿಕರಗಳು ಹಾಗೂ ಸವಲತ್ತುಗಳನ್ನು ಒದಗಿಸಲಾಗಿದೆ.

ಎಲ್‌ಕೆಜಿ ಮಕ್ಕಳು ಆಡುವ ಆಟಿಕೆ ಗಳಿಂದ ಹಿಡಿದು ಟೇಬಲ್ ಟೆನ್ನಿಸ, ಸ್ನೂಕರ್‌ವರೆಗೂ ಇಲ್ಲಿದೆ. ‘ಯಾಂಡರ್ ಜಿಮ್’ ೩ ಹಂತದಲ್ಲಿದೆ. ಮೊದಲ ಹಂತದಲ್ಲಿ ‘-ಡ್ ಕೋರ್ಟ್’, ಎರಡನೆಯದರಲ್ಲಿ ಗೇಮ್ಸ್‌ಗಳು ಹಾಗೂ ಮೂರನೇ ಹಂತದಲ್ಲಿ ಅತ್ಯಾಧುನಿಕ ಜಿಮ್ ಇದೆ.

ಗೇಮ್ಸ್ ಗಳಲ್ಲಿ ವಿಶೇಷವಾಗಿ ಮಕ್ಕಳು ಹಾಗೂ ಟಿನೇಜರ್‌ಗಳಿಗೆ ‘ವರ್ಚ್ಯುವಲ್ ರಿಯಾಲಿಟಿ’ ಆಟಗಳು ಹೆಚ್ಚು ಆಕರ್ಷಕವಾಗಿವೆ ಎನ್ನುತ್ತಾರೆ ನಿರ್ಮಿತ್. ಮಕ್ಕಳು ಈ ಆಟದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ಬಯಸುತ್ತಾರೆ. ಪೋಷಕರು ಮಕ್ಕಳನ್ನು ಸಂಜೆ ಆಟ ಆಡಿಸಲು ಕರೆತಂದರೆ, ಅಲ್ಲಿ ಅವರಿಗೆ ಉತ್ತಮ ಗುಣಮಟ್ಟದ ಆಹಾರವೂ ಲಭ್ಯವಿರುತ್ತದೆ. ಅನೇಕರು ಇಲ್ಲಿಗೆ ಸಂಜೆ ಬಂದು ಬಿಟ್ಟರೆ ವರ್ಕ್ ಔಟ್ ಮಾಡಿ ತರಬೇತುದಾರರು ಸೂಚಿಸುವ ಸಮತೋಲನ ಆಹಾರವನ್ನು ಇಲ್ಲಿಯೇ ಸೇವಿಸಿ ತೆರಳುತ್ತಾರೆ. -ಡ್ ಝೋನ್‌ನಲ್ಲಿ ಸಸ್ಯಾಹಾರ ಹಾಗೂ ಮಾಂಸಾ ಹಾರ ಎರಡೂ ಲಭ್ಯ ಇವೆ. ನಗರದ ಬಳ್ ವೃತ್ತದಲ್ಲಿ ರುವ ನಿತ್ಯೋತ್ಸವದ ಒಂದು ಅಂಗವಾಗಿರುವ ‘ಯಾಂಡರ್ ಜಿಮ್’ನಲ್ಲಿ ಅಲ್ಲಿಂದಲೇ ಸಸ್ಯಾಹಾರದ ತಿನಿಸುಗಳು ಬರುತ್ತವೆ ಎಂದು ನಿರ್ಮಿತ್ ಹೇಳುತ್ತಾರೆ.

೬ ವರ್ಷ ತರಬೇತಿ ಪಡೆದಿರುವ ಮನ್ವಂತರ್ ಸುಂದರ ಹೊರಾಂಗಣ ಹಾಗೂ ಒಳಾಂಗಣ ಹೊಂದಿ ರುವ ಯಾಂಡರ್ ಜಿಮ್ ವಿಶೇಷವಾಗಿ ಕ್ರೀಡೆಯಲ್ಲಿ ಆಸಕ್ತಿ ಇರುವವರಿಗೆ ತರಬೇತಿ ನೀಡುತ್ತದೆ. ಅವರಿಗೆ ಅಗತ್ಯ ವಿರುವ ದೈಹಿಕ ಸಾಮರ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ. ೨೦೨೫ರ ಐಪಿಎಲ್‌ಗೆ ಡೆಲ್ಲಿ ಕ್ಯಾಪಿಟಲ್ ತಂಡಕ್ಕೆ ಆಯ್ಕೆ ಯಾಗಿರುವ ಮನ್ವಂತರ್ ಇದೇ ‘ಯಾಂಡರ್ ಜಿಮ್’ ನಲ್ಲಿ ೬ ವರ್ಷಗಳ ಕಾಲ ತರಬೇತಿ ಪಡೆದುಕೊಂಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಿ

ಡಾ. ಬಿ. ಆರ್. ಅಂಬೇಡ್ಕರ್ ಅವರು ವಿಶ್ವದಲ್ಲೇ ಶ್ರೇಷ್ಠ ಸಂವಿಧಾನವನ್ನು ರಚಿಸಿ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ ಕಲ್ಪಿಸಿದ್ದಾರೆ. ಹಿಂದುಳಿದ…

8 mins ago

ಮಹಿಳಾ ಸಾಂತ್ವನ ಕೇಂದ್ರದಲ್ಲಿ 5,411 ಪ್ರಕರಣ ಇತ್ಯರ್ಥ

2002ರಲ್ಲಿ ಆರಂಭವಾದ ಸಾಂತ್ವನ ಕೇಂದ್ರದಲ್ಲಿ ನೊಂದವರಿಗೆ ನೆರವು ; ಯೋಜನೆ  ಸದುಪಯೋಗಪಡಿಸಿಕೊಳ್ಳಲು ಮನವಿ ನವೀನ್ ಡಿಸೋಜ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…

16 mins ago

ಏ.25ಕ್ಕೆ ಮೈಸೂರು ಬೃಹತ್‌ ನಗರಪಾಲಿಕೆ ರಚನೆ ನಿರ್ಧಾರ

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ಕೆ. ಬಿ. ರಮೇಶ್ ನಾಯಕ ಮೈಸೂರು: ಹಲವು ದಿನಗಳಿಂದ ಎದುರು ನೋಡುತ್ತಿರುವ ಮೈಸೂರು…

57 mins ago

ಮೈ ವಿವಿ: ಆನ್‌ಲೈನ್‌ನಲ್ಲಿ ಪ್ರಮಾಣಪತ್ರ ಸ್ವಾಗತಾರ್ಹ

ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಮೈಸೂರು ವಿಶ್ವವಿದ್ಯಾನಿಲಯ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ನಲ್ಲಿ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಈ ಮೊದಲು ಮೈಸೂರು…

1 hour ago

ಮಹಾಪಂಚ್ ಕಾರ್ಟೂನ್

ಮಹಾಪಂಚ್ ಕಾರ್ಟೂನ್‌ | ಏ.23 ಬುಧವಾರ

3 hours ago

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಗುಂಡಿನ ದಾಳಿ: 27 ಮಂದಿ ಪ್ರವಾಸಿಗರು ಬಲಿಯಾಗಿರುವ ಶಂಕೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು, 27 ಮಂದಿ ಪ್ರವಾಸಿಗರು ಬಲಿಯಾಗಿದ್ದಾರೆ ಎಂಬ ಮಾಹಿತಿ…

14 hours ago