ವಾರಾಂತ್ಯ ವಿಶೇಷ

ಬಂಜಾರರ ಬದುಕು- ಬವಣೆ; ಬಿಂಬಿಸಲಿರುವ ‘ಗೋ‌ರ್ ಮಾಟಿ’ ನಾಟಕ

 

ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾತರಿಸುತ್ತಿರುವ ಅಲಕ್ಷಿತ ಬಂಜಾರ ಸಮುದಾಯದ ಜೀವನ, ಸಂಸ್ಕೃತಿ, ಕಲೆಯನ್ನು ನಾಗರಿಕ ಲೋಕದ ಎದುರು ಬಿಚ್ಚಿಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಥಮ ಬಾರಿಗೆ ರಂಗಪ್ರಯೋಗವೊಂದು ಕನ್ನಡ ಭಾಷೆಯಲ್ಲಿ ಸಿದ್ಧವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರದರ್ಶನಕ್ಕೆ ಅಣಿಯಾಗಿದೆ.

ತಮ್ಮನ್ನು ತಾವು ಗೋರ್ ಎಂದು ಕರೆದುಕೊಳ್ಳುವ, ಬೇರೆಯವರನ್ನು, ಕೋರ್ ಎಂದು ಕರೆಯುವ ಗೋ‌ ಬೋಲಿ ಭಾಷೆ ಮಾತನಾಡುವ ಬಂಜಾರ ಸಮುದಾಯದ ಮುಂದಿರುವ ಸವಾಲುಗಳನ್ನು ಅನಾವರಣಗೊಳಿಸುವ ಉದ್ದೇಶದಿಂದ ಮೈಸೂರಿನ ರಂಗಾಯಣವು ‘ಗೋರ್ ಮಾಟಿ’ ಎಂಬ ನಾಟಕದ ಪ್ರಯೋಗಕ್ಕೆ ಸಜ್ಜಾಗಿದೆ. ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ನಿರ್ದೇಶನ ಈ ನಾಟಕಕ್ಕಿದೆ.

ರಂಗಾಯಣದ ನಾಲ್ವರು ಹಿರಿಯ ಕಲಾವಿದರು, ಮೈಸೂರು ರಂಗಾಯಣ ಸೇರಿದಂತೆ ರಾಜ್ಯದ ವಿವಿಧೆಡೆಯ ರಂಗಾಯಣಗಳಲ್ಲಿ ತರಬೇತಿ ಪಡೆದ 20 ಮಂದಿ ಕಲಾವಿದರನ್ನು ಬಳಸಿಕೊಂಡು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅವರು ಗೋ‌ ಮಾಟಿ ನಾಟಕವನ್ನು ನಿರ್ದೇಶನ ಮಾಡಿ ರಂಗರೂಪಕ್ಕೆ ಇಳಿಸಿದ್ದಾರೆ. ಬಂಜಾರ ಸಮುದಾಯದ ಮೂಲ ಪುರುಷ, ಆರಾಧ್ಯ ದೈವ ಸಂತ ಸೇವಾಲಾಲ್ ಸೇರಿದಂತೆ ಸಮುದಾಯದ ಪ್ರಮುಖ ನಾಯಕರ ಕೊಡುಗೆಯನ್ನು ಈ ನಾಟಕದ ಮೂಲಕ ಸಮಾಜದ ಮುಂದಿಡುವ ಪ್ರಯತ್ನ ಮಾಡಲಾಗಿದೆ.

ಕಲಾವಿದರು ಬಂಜಾರರಲ್ಲ..!

‘ಗೋ‌ ಮಾಟಿ’ ನಾಟಕದಲ್ಲಿ ಅಭಿನಯಿಸಿರುವ 24 ಮಂದಿ ಕಲಾವಿದರೂ ಬೇರೆ-ಬೇರೆ ಸಮುದಾಯಕ್ಕೆ ಸೇರಿದ್ದು, ಬಂಜಾರರು ಯಾರೂ ಇಲ್ಲ. ಕೆಲವು ಕಲಾವಿದರು ಗೋ‌ ಬೋಲಿ ಭಾಷೆಯನ್ನು ಕಲಿತಿದ್ದಾರೆ. ಬಂಜಾರರ ಸಂಸ್ಕೃತಿಯನ್ನು ವಿವಿಧ ಆಕರ ಗ್ರಂಥಗಳು ಮತ್ತು ಸಮುದಾಯದ ನಾಯಕರಿಂದ ತಿಳಿದುಕೊಳ್ಳಲಾಗಿದೆ. ಬಂಜಾರ ಮಹಿಳೆಯರೊಡನೆ ಮಾತುಕತೆ ನಡೆಸಿ ಅವರ ಉಡುಗೆ, ತೊಡುಗೆ, ಸಂಪ್ರದಾಯದ ಮಾಹಿತಿ ಕಲೆ ಹಾಕಿ ನಾಟಕವನ್ನು ರೂಪಿಸಿರುವುದು ವಿಶೇಷ.

ಬಂಜಾರರು ಯಾರು?

ಮೂಲತಃ ರಾಜಸ್ಥಾನ ಮತ್ತು ಗುಜರಾತ್ ಮೂಲದ ಬಂಜಾರರು ಗೋ‌ ಬೋಲಿ ಭಾಷೆ ಮಾತನಾಡುತ್ತಾರೆ. ಈ ಭಾಷೆಯಲ್ಲಿ ಹಿಂದಿ, ಉರ್ದು, ರಾಜಸ್ಥಾನಿ ಮತ್ತು ಸಂಸ್ಕೃತ ಭಾಷೆಗಳ ಸಮ್ಮಿಶ್ರಣವಿದೆ. ಈ ಸಮುದಾಯವು ತನ್ನದೇ ಆದ ವೇಷಭೂಷಣಗಳಿಂದ ಭಾರತೀಯ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಇವರನ್ನು ಜಿಪ್ಪಿಗಳೆಂದು ಕರೆಯುತ್ತಿದ್ದರು. ಇವರ ಮೂಲ ಪುರುಷ ಸಂತ ಸೇವಾಲಾಲ್, ಇವರ ಕುಲಕಸುಬು ವ್ಯಾಪಾರ ಹಾಗೂ ಪಶುಸಂಗೋಪನೆ. ಇವರು ಶ್ರಮ ಜೀವಿಗಳು, ಸ್ವಾಭಿಮಾನಿ ಗಳು, ಅಷ್ಟೇ ಪ್ರಾಮಾಣಿಕರು. ಮೊದಲು ಅಲೆಮಾರಿಗಳಾಗಿದ್ದು, ಇತ್ತೀಚೆಗೆ ನಾಗರಿಕತೆ ಬೆಳೆದಂತೆ ಗ್ರಾಮಗಳಲ್ಲಿ, ಊರುಗಳಲ್ಲಿ ವಾಸವಾಗಿದ್ದಾರೆ. ಇವರು ತಮ್ಮ ಊರುಗಳನ್ನು ತಾಂಡ್ಯಗಳೆನ್ನುತ್ತಾರೆ.

ಜನವರಿಯಿಂದ ಆರಂಭವಾದ ಈ ನಾಟಕದ ಪ್ರಯತ್ನವು ಈಗ ರಂಗರೂಪಕ್ಕೆ ಬರುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ಸಭೆಯೊಂದರಲ್ಲಿ ಲಂಬಾಣಿ ಜನಾಂಗದ ಕುರಿತು ನಾಟಕ ಮಾಡುವಂತೆ ಸೂಚಿಸಿದ್ದರು. ಅದರಂತೆ ಈ ನಾಟಕ ರಂಗರೂಪಕ್ಕೆ ಬರುತ್ತಿದೆ. ಈ ರಂಗಪ್ರಯೋಗಕ್ಕೆ ಇತಿಹಾಸ, ಪುರಾಣ, ಐತಿಹ್ಯ, ಜೊತೆಗೆ ವಾಸ್ತವ ಬದುಕಿನ ಕಥನ, ಕಾವ್ಯಗಳನ್ನು ಸಂಶೋಧನಾ ಆಕರಗಳನ್ನು ಚರಿತ್ರೆಯಲ್ಲಿನ ಪಾತ್ರಗಳ ಒಟ್ಟಿಗೆ ಸಮಕಾಲೀನ ಬದುಕಿನ ಸಮಾಜದ ಪಾತ್ರಗಳ ಮೂಲಕ ಅಭಿನೀತಗೊಂಡಿವೆ.
-ಸಿ.ಬಸವಲಿಂಗಯ್ಯ, ನಾಟಕದ ನಿರ್ದೆಶಕ,

‘ಗೋ‌ ಮಾಟಿ ನಾಟಕ ಹೊಸ ಪ್ರಯೋಗವಾಗಿದ್ದು, ಇದರಲ್ಲಿ ಹೊಸತನ ಇದೆ. ಕಲಾವಿದ ರಿಗೂ ಮತ್ತು ಪ್ರೇಕ್ಷಕರಿಗೂ ಇದು ಹೊಸದು. ಈ ಕೆಲಸ ಮಾಡುವುದು ಹೊಸ ಅನುಭವವನ್ನು ನೀಡಿದೆ.
-ಗೀತಾ ಮೋಂಟಡ್ಕ, ಹಿರಿಯ ಕಲಾವಿದರು.

ಇಂದು, ನಾಳೆ ನಾಟಕ ಪ್ರದರ್ಶನ

ಮಾ.16 ಮತ್ತು 17ರಂದು ಸಂಜೆ 6.30 ಕ್ಕೆ ರಂಗಾಯಣದ ಅಂಗಳದಲ್ಲಿರುವ ಭೂಮಿಗೀತದಲ್ಲಿ ಗೋರ್ ಮಾಟಿ ನಾಟಕವನ್ನು ಪ್ರದರ್ಶನಕ್ಕೆ ಅಣಿಗೊಳಿಸಲಾಗಿದೆ. ಉಳಿದಂತೆ ವಾರಾಂತ್ಯ ರಂಗಪ್ರದರ್ಶನವಾಗಿ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಅಂದರೆ . 22, 23, 24 TO 29, 30 DICI 31ರಂದು ನಾಟಕ ಪ್ರದರ್ಶನವಾಗಲಿದೆ.

ನಾಟಕ ಕನ್ನಡ, ಹಾಡುಗಳು ಗೋರ್ ಬೋಲಿ..!
2 ಗಂಟೆ 10 ನಿಮಿಷಗಳ ಅವಧಿಯ ಈ ನಾಟಕವು ಕನ್ನಡ ಭಾಷೆಯಲ್ಲಿ ಮೂಡಿಬಂದಿದೆ. ಇದರಲ್ಲಿ ಬಂಜಾರ ಜನಾಂಗದ ತೀಜ್ ಹಬ್ಬದ ಸುಖ ದುಃಖದ ಹಾಡುಗಳ ಜತೆಗೆ ಸಮುದಾಯದ ಗೀತೆಗಳು ಗೋರ್‌ ಬೋಲಿ ಭಾಷೆಯಲ್ಲಿವೆ. ಕೆಲವು ಹಾಡುಗಳು ಕನ್ನಡದಲ್ಲಿ ಮೂಡಿಬಂದಿವೆ. ನಾಟಕ ವೀಕ್ಷಣೆಗೆ 50 ರೂ. ಪ್ರವೇಶ ದರವನ್ನು ನಿಗದಿಪಡಿಸಲಾಗಿದೆ.

ಗೋರ್ ಮಾಟಿ ಎಂದರೇನು?

ಗೋರ್ ಮಾಟಿ ಎಂದರೆ ಬಂಜಾರ ಭಾಷೆಯಲ್ಲಿ ‘ನನ್ನ ಜನ’ ಎಂದು ಅರ್ಥ. ಬಂಜಾರರು ಮೂಲತಃ ಉತ್ತರ ಹಿಂದೂ ಆರ್ಯ ಸಂಸ್ಕೃತಿಯವರಾಗಿದ್ದು, ತಮ್ಮನ್ನು ತಾವು ‘ಗೋ‌ ಮಾಟ’ ಅಥವಾ ‘ಗೋರ್ ಭಾಯ್’ ಎಂದು ಕರೆದುಕೊಳ್ಳುತ್ತಾರೆ. ಹೊರಗಿನವರನ್ನು ಅವರು ಕೋರ್ ಎಂದು ಕರೆಯುತ್ತಾರೆ.

ಜಿ ತಂಗಂ ಗೋಪಿನಾಥಂ

ಮೂಲತಃ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮದವನಾದ ನಾನು ಸದ್ಯ,‌ ಮೈಸೂರಿನಲ್ಲಿ ನೆಲೆಸಿದ್ದೇನೆ. 2019ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿಎ ( ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ ) ಪದವಿಯನ್ನು ಮುಗಿಸಿದ್ದೇನೆ. ನಂತರ 2021ರಲ್ಲಿ‌ ಮೈಸೂರು ವಿಶ್ವವಿದ್ಯಾನಿಲಯದ‌ಲ್ಲಿ ಎಂಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ‌ 2 ವರ್ಷಗಳ ‌ಕಾಲ ಅನುಭವ ಪಡೆದುಕೊಂಡಿದ್ದೇನೆ. ವಿಜಯವಾಣಿ ಪತ್ರಿಕೆಯಲ್ಲಿ ಚಾಮರಾಜನಗರ ಜಿಲ್ಲಾ ಸಹಾಯಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಕಳೆದ 8 ತಿಂಗಳಿಂದ ಮೈಸೂರಿನ ಆಂದೋಲನ‌ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ.

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

1 hour ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

1 hour ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

2 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

2 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

4 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

4 hours ago