ರಮ್ಯ ಅರವಿಂದ್
ಅನಾದಿಕಾಲದಿಂದಲೂ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಗಳ ಮೂಲಕವೇ ಚಿಕಿತ್ಸೆಯನ್ನು ನೀಡುತ್ತಾ ಬರಲಾಗಿದೆ. ಆಯುರ್ವೇದ ಚಿಕಿತ್ಸಾ ಪದ್ಧತಿ ತನ್ನದೇ ಆದ ಮಹತ್ವ ಹೊಂದಿದೆ. ಅಂತಹ ಆಯುರ್ವೇದ ಅಂಶಗಳಲ್ಲಿರುವ ಗಿಡಮೂಲಿಕೆಗಳ ಪೈಕಿ ‘ ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲು’ ಕೂಡ ಅತ್ಯಂತ ಪರಿಣಾಮಕಾರಿಯಾಗಿದೆ. ಈ ಸಸ್ಯವು ನಿಂಬೆಹಣ್ಣಿನ ಸುವಾಸನೆ ಬೀರುವುದರಿಂದ ಇದನ್ನು ನಿಂಬೆ ಹುಲ್ಲು’ ಎಂದು ಕರೆಯುತ್ತಾರೆ.
ಈ ನಿಂಬೆಹುಲ್ಲು ಸಸ್ಯದಿಂದ ಕಾಂತಿವರ್ಧಕಗಳು ಹಾಗೂ ಸೋಂಕು ನಿವಾರಕ ಔಷಧಿಗಳನ್ನು ತಯಾರಿಸಬಹುದಾಗಿದೆ. ಜೊತೆಗೆ ಇದೊಂದು ಆಹಾರ ಪದಾರ್ಥವೂ ಆಗಿದ್ದು, ವಿವಿಧ ಆಹಾರ ತಯಾರಿಕೆಯಲ್ಲಿ ಬಳಕೆ ಮಾಡಿಕೊಳ್ಳಬಹುದು. ಈ ಸಸ್ಯದಲ್ಲಿ ಔಷಧಿಯ ಗುಣವಿರುವುದು ವಿಶೇಷವಾಗಿದ್ದು, ಇದನ್ನು ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಮನುಷ್ಯನಿಗೆ ಹೆಚ್ಚು ಪರಿಣಾಮಕಾರಿಯಾಗಿರುವ ಈ ಸಸ್ಯವನ್ನು ನಾವು ನಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ದೊಡ್ಡ ಪಾಟ್‌ಗಳಲ್ಲಿ ಬೆಳೆಸಿಕೊಂಡು ಆಗಾಗ್ಗೆ ಬಳಸುವುದು ನಮ್ಮ ಆರೋಗ್ಯಕ್ಕೆ ಹೆಚ್ಚು ಪರಿಣಾಮಕಾರಿ.
ಇತ್ತೀಚಿನ ಯುವಸಮೂಹ ಸಂಜೆಯಾಗುತ್ತಲೇ ಜಂಕ್ ಫುಡ್, ಸ್ಟಾಕ್ಸ್‌ಗಳ ಸೇವನೆಗೆ ಜೋತುಬಿದ್ದು, ದೇಹದಲ್ಲಿ ಅನಗತ್ಯ ಕೊಬ್ಬು ಶೇಖರಣೆ ಮಾಡಿಕೊಂಡು ಚಿಕ್ಕ ವಯಸ್ಸಿನಲ್ಲಿಯೇ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಇಂತಹ ಅನವಶ್ಯಕ ಕೊಬ್ಬಿನಂಶವನ್ನು ಕರಗಿಸಲು ಈ ನಿಂಬೆಹುಲ್ಲು ಹೆಚ್ಚು ಉಪಯೋಗವಾಗಿದೆ. ಚಹ ಅಥವಾ ಕಷಾಯದ ರೂಪದಲ್ಲಿ ಮಾಡಿಕೊಂಡು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಅಲ್ಲದೆ ಅಜೀರ್ಣ ಹಾಗೂ ಚರ್ಮ ಸಂಬಂಧಿತ ಸಮಸ್ಯೆಗಳನ್ನೂ ನಿವಾರಿಸಿ ಕೊಳ್ಳಲು ಇದು ಹೇಳಿ ಮಾಡಿಸಿದ ಮನೆ ಮದ್ದು.
ನಿಂಬೆಹುಲ್ಲಿನ ಚಹಾ: ಒಂದು ಪಾತ್ರೆಯಲ್ಲಿ ನೀರನ್ನು ಚೆನ್ನಾಗಿ ಕುದಿಸಿಕೊಂಡು ಕುದಿಸಿದ ನೀರಿಗೆ ಸಣ್ಣಗೆ ಕತ್ತರಿಸಿಕೊಂಡ ನಿಂಬೆ ಹುಲ್ಲನ್ನು ಹಾಕಿಕೊಳ್ಳಬೇಕು. ಐದು ನಿಮಿಷಗಳ ಕಾಲ ಹಾಗೆಯೇ ಅದನ್ನು ಮುಚ್ಚಿಟ್ಟು ನಂತರ ಸೋಸಿ ಕೊಂಡು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು.
ಲೆಮನ್ ಗ್ರಾಸ್ ತಂಬುಳಿ: ಲೆಮನ್ ಗ್ರಾಸನ್ನು ಸಣ್ಣದಾಗಿ ಕತ್ತರಿಸಿ ಅದರ ಜೊತೆ ತಾಜಾ ತೆಂಗಿನ ತುರಿ, ಸ್ವಲ್ಪ ಜೀರಿಗೆ, ಒಂದೆರಡು ಹಸಿಮೆಣಸಿನಕಾಯಿ, ಸ್ವಲ್ಪ ನೀರನ್ನು ಸೇರಿಸಿಚೆನ್ನಾಗಿ ರುಬ್ಬಿಕೊಳ್ಳುವುದು ನಂತರ ಅದನ್ನು ಒಂದು ಪಾತ್ರೆಗೆ ಸೋಸಿಕೊಂಡು ಆ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮಜ್ಜಿಗೆ ಅಥವಾ ಮೊಸರನ್ನು ಸೇರಿಸಿ ಬಳಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೊತೆಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಸಮತೋಲನವಾಗಿಡಲು ಸಹಾಯಕವಾಗಿದೆ.
ಇನ್ನು ಈ ನಿಂಬೆಹುಲ್ಲು ದಂತದ ಆರೋಗ್ಯಕ್ಕೂ ಹೆಚ್ಚು ಪರಿಣಾಮಕಾರಿ. ನಿಂಬೆಹುಲ್ಲನ್ನು ಬಾಯಿಗೆ ಹಾಕಿ ಜಗಿದರೆ ಬ್ಯಾಕ್ಟಿರಿಯಾ ಹಾಗೂ ಕ್ಯಾವಿಟಿಸ್ ಸಮಸ್ಯೆಯಿಂದ ದೂರವಿರಬಹುದು ಈ ಕುರಿತು ಫುಡ್ ಕೆಮಿಸ್ಟಿ ಜರ್ನಲ್‌ನಲ್ಲಿಯೂ ವರದಿ ಮಾಡಲಾಗಿದೆ. ಇಂತಹ ಬಹುಪಯೋಗಿ ನಿಂಬೆಹುಲ್ಲನ್ನು ಎಲ್ಲಿ ಸಿಕ್ಕಿದರು ಬಿಡದೆ ತಂದು ನಿಮ್ಮ ಮನೆಯ ತೋಟದಲ್ಲಿ ಬೆಳೆಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.
abhigna.ramya@gmail.com
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…
ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್ಗಳ ರಜಾ…
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…
ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…
ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…