ಆಂದೋಲನ ಪುರವಣಿ

ಶ್ರೀಲಂಕಾ: ಅಂತ್ಯವಾಗದ ಆರ್ಥಿಕ ಸಂಕಷ್ಟದ ಮಧ್ಯೆ ಅಧ್ಯಕ್ಷೀಯ ಚುನಾವಣೆ

ಡಿ.ವಿ.ರಾಜಶೇಖರ

ಆರ್ಥಿಕವಾಗಿ ದಿವಾಳಿಯಾಗಿದ್ದ ಶ್ರೀಲಂಕಾದಲ್ಲಿ ಮುಂದಿನ ವಾರ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಎರಡು ವರ್ಷಗಳ ಹಿಂದೆ ಕೋವಿಡ್ ಪಿಡುಗಿನ ಹಿನ್ನೆಲೆಯಲ್ಲಿ ದೇಶವನ್ನು ಆರ್ಥಿಕ ದಿವಾಳಿಗೆ ನೂಕಿದ ಅಂದಿನ ಅಧ್ಯಕ್ಷ ಗೋಟಬಯ ರಾಜಪಕ್ಕೆ ವಿರುದ್ಧ ಜನರು ರೊಚ್ಚಿಗೆದ್ದು ಬೀದಿಗಿಳಿದಿದ್ದರು. ಜನರ ಆಕ್ರೋಶಕ್ಕೆ ಹೆದರಿ ರಾಜಪಕ್ಸೆ ದೇಶ ಬಿಟ್ಟು ಪಲಾಯನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರಾದ ರಾನಿಲ್ ವಿಕ್ರಮ ಸಿಂಘ ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದು ಇದೀಗ ಅಧ್ಯಕ್ಷೀಯ ಚುನಾವಣೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ. ಮುಂದಿನ ಶನಿವಾರ (ಸೆ.21) ಚುನಾವಣೆ ನಡೆಯಲಿದೆ.

ಎರಡು ವರ್ಷಗಳ ಹಿಂದೆ ಇದ್ದಂಥ ಆರ್ಥಿಕ ಸಂಕಷ್ಟ ಪರಿಸ್ಥಿತಿ ಈಗ ಇಲ್ಲ. ಪರಿಸ್ಥಿತಿ ಸುಧಾರಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೂ (ಐಎಂಎಫ್) ಸೇರಿದಂತೆ ವಿವಿಧ ಬ್ಯಾಂಕುಗಳಿಂದ ಪಡೆದಿದ್ದ ಸಾಲಕ್ಕೆ ಬಡ್ಡಿಯೂ ಕಟ್ಟಲಾರದಂಥ ಸ್ಥಿತಿಯಲ್ಲಿದ್ದ ಶ್ರೀಲಂಕಾ ಇಂದು ಅಭಿವೃದ್ಧಿಯತ್ತ ಕಾಲಿರಿಸಿದೆ. ಶ್ರೀಲಂಕಾ ಮಾಡಿರುವ ಒಟ್ಟು ವಿದೇಶಿ ಸಾಲ 92.43 ಬಿಲಿಯನ್ ಡಾಲರ್. ಚೀನಾಕ್ಕೆ ಕೊಡಬೇಕಿರುವ ಹಣ 6.5 ಬಿಲಿಯನ್ ಡಾಲರ್. ಎಡಿಬಿಗೆ ಕೊಡಬೇಕಿರುವ ಹಣ 6.2 ಬಿಲಿಯನ್ ಡಾಲರ್, ವಿಶ್ವಬ್ಯಾಂಕಿಗೆ ಕೊಡಬೇಕಿರುವ ಹಣ 4.3 ಬಿಲಿಯನ್ ಡಾಲರ್. ಜಪಾನ್‌ ಗೆ ಕೊಡಬೇಕಿರುವ ಹಣ 2.68 ಬಿಲಿಯನ್ ಡಾಲರ್. ಭಾರತಕ್ಕೆ ಕೊಡಬೇಕಿರುವ ಹಣ 1.74 ಬಿಲಿಯನ್ ಡಾಲರ್. ಜೊತೆಗೆ ಐಎಂಎಫ್‌ಗೆ ಕೊಡಬೇಕಿರುವ ಹಣ 1351 ಮಿಲಿಯನ್ ಡಾಲರ್, ಪ್ರತಿವರ್ಷ 7 ಬಿಲಿಯನ್ ಡಾಲರ್ ಹಣವನ್ನು ಬಡ್ಡಿಯಾಗಿ ಕಟ್ಟಬೇಕಿತ್ತು. ಬಡ್ಡಿ ಹಣವನ್ನೂ ಕಟ್ಟಲಾರದೆ ಹೋದದ್ದರಿಂದ 2022ರಲ್ಲಿ ಶ್ರೀಲಂಕಾ ದಿವಾಳಿಯೆದ್ದಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ಕಠಿಣ ಆರ್ಥಿಕ ನಿರ್ಬಂಧಗಳಿಂದಾಗಿ ಪರಿಸ್ಥಿತಿ ಸುಧಾರಿಸಿದೆ ಎಂದು ಐಎಂಎಫ್ ವರದಿ ಮಾಡಿದೆ.

ದಿವಾಳಿಯಾಗಿದ್ದ ಸರ್ಕಾರವನ್ನು ಚೇತರಿಸಿಕೊಳ್ಳುವಂತೆ ಮಾಡಲು ಐಎಂಎಫ್ ಮತ್ತಷ್ಟು ಸಾಲ ಕೊಡಲು ಮುಂದಾಯಿತು. ಅದು ವಿಧಿಸಿದ ಕಠಿಣ ಷರತ್ತುಗಳನ್ನು ಚಾಚೂ ತಪ್ಪದೆ ಪಾಲಿಸಿದ ಪರಿಣಾಮ ಇಂದು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಜೊತೆಗೆ ಭಾರತ ಸಾಕಷ್ಟು ಹಣವನ್ನು ಸಾಲದ ರೂಪದಲ್ಲಿ ನೀಡಿತು. ಹಳೆಯ ಸಾಲಕ್ಕೆ ಜಪಾನ್, ಚೀನಾ ಮತ್ತು ಭಾರತ ಭದ್ರತೆ ಒದಗಿಸಿದ್ದರಿಂದಾಗಿ ತುರ್ತಾಗಿ ಸಾಲ ತೀರಿಸಬೇಕಾದ ಒತ್ತಡ ಇಲ್ಲವಾಯಿತು. ರಾನಿಲ್ ವಿಕ್ರಮ್‌ ಸಿಂಘ ದೇಶವನ್ನು ಮತ್ತೆ ಸರಿದಾರಿಗೆ ತರುವಲ್ಲಿಸಫಲರಾದರು. ಪರಿಸ್ಥಿತಿ ಸುಧಾರಿಸಲು ಜನರು ಪಟ್ಟ ಕಷ್ಟ ಹೇಳತೀರದು. ಬಡವರು ಅರೆ ಹೊಟ್ಟೆಯಲ್ಲಿ ಜೀವನ ಸಾಗಿಸಿದರು. ಲಕ್ಷಾಂತರ ಯುವಕರು ಸರಿಯಾದ ಉದ್ಯೋಗ ಇಲ್ಲದೆ ದುಡಿದರು. ಲಕ್ಷಾಂತರ ಮಂದಿ ವಲಸೆಹೋದರು. ದೇಶ ಇದೀಗ ಸ್ವಲ್ಪ ಉಸಿರಾಡುವ ಸ್ಥಿತಿಗೆ ತಲುಪಿದೆ. ಆದರೆ ದೇಶ ಆರ್ಥಿಕ ಬಿಕ್ಕಟ್ಟಿನಿಂದ ಸಂಪೂರ್ಣ ಪಾರಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅಧ್ಯಕ್ಷೀಯ
ಚುನಾವಣೆ ಬಂದಿದೆ.

ದೇಶ ಇಂಥ ಸಂಕಷ್ಟದಲ್ಲಿದ್ದಾಗಲೂ ಅಧಿಕಾರ ಹಿಡಿಯುವ ಆಸೆಯಿಟ್ಟುಕೊಂಡವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. 32 ಮಂದಿ ಸ್ಪರ್ಧೆಗಿಳಿದಿದ್ದಾರೆ. ರಾಜಕೀಯವನ್ನೇ ವೃತ್ತಿ ಮಾಡಿಕೊಂಡಿರುವ ರಾಜಕಾರಣಿಗಳು ಮತ್ತೆ ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಹಾಲಿ ಅಧ್ಯಕ್ಷ ರಾನಿಲ್ ವಿಕ್ರಮ ಸಿಂಘ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇತರ ಎಲ್ಲ ಪಕ್ಷಗಳ ಬೆಂಬಲ ಪಡೆದು ಗೆಲ್ಲುವ ಆಸೆ ಅವರದು. ಕುಸಿದುಹೋಗಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದನ್ನು ಅವರು ತಮ್ಮ ಸಾಧನೆಯೆಂದು ಹೇಳಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ಸ್ಪರ್ಧೆಯಲ್ಲಿದ್ದು, ಬಡವರಿಗೆ ಅನುಕೂಲವಾಗುವಂಥ ನೀತಿಗಳನ್ನು ಅನುಸರಿಸುವುದಾಗಿ ಹೇಳುತ್ತಿದ್ದಾರೆ. ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ಹಾಕಿ,ಬಡವರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಐಎಂಎಫ್ ಜೊತೆ ಮಾತುಕತೆ ನಡೆಸುವುದಾಗಿ ಹೇಳುತ್ತಿದ್ದಾರೆ. ಮತ್ತೊಬ್ಬ ವಿರೋಧಪಕ್ಷದ ನಾಯಕ ಅನುರ್‌ ಕುಮಾರ್ ದಿಸ್ತಾನಾಯಕ ಕೂಡ ಕಣದಲ್ಲಿದ್ದು, ಹೆಚ್ಚು ಮಂದಿ ಸಿಂಹಳೀಯರ ಮತ ಗಳಿಸುವ ಭರವಸೆ ಇಟ್ಟುಕೊಂಡಿದ್ದಾರೆ. ತಮಿಳರ ಪಕ್ಷಗಳಲ್ಲಿ ಗೊಂದಲ ಮುಂದುವರಿದಿದೆ. ಕೆಲವು ತಮಿಳು ಸಂಘಟನೆಗಳು ಸಜಿತ್ ಪ್ರೇಮದಾಸ ಅವರಿಗೆ ಬೆಂಬಲ ಘೋಷಿಸಿದ್ದರೆ ಮತ್ತೆ ಕೆಲವು ಸ್ವತಂತ್ರವಾಗಿ ಉಳಿದಿವೆ. ತಮಿಳು ಪ್ರದೇಶಗಳಿಗೆ
ಹಾರ ಹೆಚ್ಚು ಸ್ವಾಯತ್ತತೆ ಕೊಡುವ ದಿಸೆಯಲ್ಲಿ ಕ್ರಮತೆಗೆದುಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ದೇಶ ಬಿಟ್ಟು ಪರಾರಿಯಾಗಿದ್ದ ಗೋಟಬಯ ರಾಜಪಕ್ಕೆ ಮತ್ತು ಅವರ ಕುಟುಂಬ ಮತ್ತೆ ರಾಜಕೀಯದಲ್ಲಿ ಭಾಗವಹಿಸಲು ಮುಂದಾಗಿದೆ. ಜನರೂ ಹಿಂದೆ ಆಗಿದ್ದನ್ನು ಮರೆತಂತೆ ಕಾಣುತ್ತಿದ್ದಾರೆ. ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಕೆ ಅವರ ಪುತ್ರ ನಮಲ್ ರಾಜಪಕ್ಕೆ (ಗೋಟಬಯ ರಾಜಪಕ್ಷೆ ಸೋದರ ಸಂಬಂಧಿ ಚುನಾವಣೆ ಕಣದಲ್ಲಿದ್ದು ದೇಶ ಮತ್ತೆ ಅಭಿವೃದ್ಧಿಯ ಪಥದಲ್ಲಿ ಹೋಗುವಂತೆ ಮಾಡುವುದಾಗಿ ಹೇಳುತ್ತಿದ್ದಾರೆ. ದೇಶ ಎದುರಿಸುತ್ತಿರುವ ಬಿಕ್ಕಟ್ಟಿಗೆ ರಾಜಪಕ್ಕೆ ಕುಟುಂಬವೇ ಕಾರಣ ಎನ್ನುವುದು ಜನರ ಸಾಮಾನ್ಯ ಅಭಿಪ್ರಾಯ. ಹೀಗಾಗಿಯೇ 2022ರಲ್ಲಿ ಜನರು ರೊಚ್ಚಿಗೆದ್ದು ರಾಜಪಕ್ಕೆ ಕುಟುಂಬದ ಮೇಲೆ ದಾಳಿ ನಡೆಸಿದರು. ಅವರ ಮನೆಗಳನ್ನು ಸುಟ್ಟುಹಾಕಿದರು. ವಿಚಿತ್ರ ಎಂದರೆ ಎಲ್‌ಟಿಟಿಇ ನಿರ್ನಾಮಕ್ಕೆ ಕಾರಣವಾಗಿದ್ದ ಮಹಿಂದಾ ರಾಜಪಕ್ಕೆ ಕೆಲವೇ ದಶಕಗಳ ಹಿಂದೆ ಸಿಂಹಳೀಯರ ಕಣ್ಮಣಿಯಾಗಿದ್ದುದು. ತಮಿಳರಿಗಾಗಿ ಪ್ರತ್ಯೇಕ ದೇಶ ಕಟ್ಟುವ ಕನಸು ಕಾಣುತ್ತಿದ್ದ ಎಲ್‌ ಟಿಟಿಇ ನಾಯಕ ಪ್ರಭಾಕರನ್ ಮತ್ತು ಅವರ ಗೆರಿಲ್ಲಾ ಯೋಧರನ್ನು ನಿರ್ನಾಮ ಮಾಡಿ ರಾಜಪಕ್ಕೆ ತಮ್ಮ ರಾಜಕೀಯ ನೆಲೆಯನ್ನು ಗಟ್ಟಿಮಾಡಿಕೊಂಡಿದ್ದರು. ಆದರೆ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಅವರಿಂದ ಸಾಧ್ಯ ಆಗಲಿಲ್ಲ. ಸಾಲ, ಸಾಲ. ಸಾಲದ ಮೇಲೆ ಅವರ ಆಡಳಿತ ನಿಂತಿತ್ತು. ದೇಶ ದಿವಾಳಿಯಾಗಲು ಇವರ ದುರಾಡಳಿವೇ ಕಾರಣ ಎಂದು ಜನರು ರೊಚ್ಚಿಗೆದ್ದಿದ್ದನ್ನು ಮರೆಯುವಂತಿಲ್ಲ. ರಾಜಪಕ್ಕೆ ಕುಟುಂಬ ಶ್ರೀಲಂಕಾ ರಾಜಕೀಯದಲ್ಲಿ ರಾಜವಂಶಾಡಳಿತದಂತಿತ್ತು. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಅವರ ಕುಟುಂಬದವರೇ ತುಂಬಿದ್ದರು. ಅವರು ಹೇಳಿದ್ದೇ ನಿಯಮ. ಹೀಗಾಗಿ ಸರ್ವಾಧಿಕಾರ ದೇಶದಲ್ಲಿ ಇತ್ತು. ಇದನ್ನು ಜನರು ಮರೆತಿಲ್ಲ. ಹೀಗಾಗಿ ಜನರು ಅವರ ಪರವಾಗಿ ಮತ ನೀಡುವಸಾಧ್ಯತೆ ಇಲ್ಲ. ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯುತ್ತದೆಯೋ ಇಲ್ಲವೋಎಂಬುದನ್ನು ಗಮನಿಸಲು ಕಾಮನ್‌ವೆಲ್ತ್ ರಾಷ್ಟ್ರಗಳ ವೀಕ್ಷಕರ ತಂಡ ಈಗಾಗಲೇ ಶ್ರೀಲಂಕಾದಲ್ಲಿ ಬೀಡುಬಿಟ್ಟಿದೆ.

ವಿಶ್ವದಲ್ಲಿ ಶ್ರೀಲಂಕಾ ಮಾತ್ರ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ನೂರಾರು ದೇಶಗಳಿವೆ. ಬಿಕ್ಕಟ್ಟಿನಿಂದ ಕೆಲವೇ ವರ್ಷಗಳಲ್ಲಿ ಹೊರಬಂದು ಅಭಿವೃದ್ಧಿ ಸಾಧಿಸಿದ ದೇಶಗಳೂ ಇವೆ. ಅದಕ್ಕೆ ಬೇಕಿರುವುದು ಜನಪ್ರತಿನಿಧಿಗಳ ಇಚ್ಛಾಶಕ್ತಿ. ಭಾರತ ಆರ್ಥಿಕವಾಗಿ ಬಲಾಡ್ಯವಾಗಿ ಬೆಳೆಯುತ್ತಿದೆ. ಆದರೆ ಅದರ ನೆರೆಯ ದೇಶಗಳೆಲ್ಲಾ ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯಿಂದ ನರಳುತ್ತಿವೆ. ಶ್ರೀಲಂಕಾದಂತೆ ಪಾಕಿಸ್ತಾನವೂ ಸಾಲದಹೊರೆಯಿಂದ ತತ್ತರಿಸಿಹೋಗಿದೆ. ತಂದ ಸಾಲಕ್ಕೆ ಬಡ್ಡಿ ಕಟ್ಟಲೂ ಅದರ ಹತ್ತಿರ ಹಣವಿಲ್ಲ. ಇದರ ಜೊತೆಗೆ ಅಲ್ಲಿ ರಾಜಕೀಯ ಸ್ಥಿರತೆ ಇಲ್ಲ. ಬಾಂಗ್ಲಾದೇಶ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕಿತ್ತು. ಆದರೆ ಇತ್ತೀಚಿನ ತಿಂಗಳುಗಳಲ್ಲಿ ಅಲ್ಲಿಯೂ ರಾಜಕೀಯ ಅಸ್ಥಿರತೆ ನೆಲೆ ಮಾಡಿದೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪರಾರಿಯಾಗುವಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಲ್ಲಿ ತಾತ್ಕಾಲಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮಾಲೀವ್ ಮತ್ತು ನೇಪಾಳ ರಾಜಕೀಯ ಇದಕ್ಕಿಂತ ಭಿನ್ನವಿಲ್ಲ. ಚೀನಾ ಈ ಎಲ್ಲ ದೇಶಗಳ ಬೆಳವಣಿಗೆಗಳ ಹಿಂದೆ ಇರುವಂತೆ ಕಾಣುತ್ತಿದೆ. ಹಣಕಾಸು ದೃಷ್ಟಿಯಿಂದ ಬಲಾಢವಾಗಿರುವ ಚೀನಾ ಈ ಬಡ ದೇಶಗಳಿಗೆ ಸಾಕಷ್ಟು ಹಣವನ್ನು ಸಾಲಕೊಟ್ಟು ತನ್ನತ್ತ ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಏಷ್ಯಾ ವಲಯದಲ್ಲಿ ಭಾರತವನ್ನು ಏಕಾಂಗಿ ಮಾಡಿ ಅದರ ಅಭಿವೃದ್ಧಿಗೆ ಅಡ್ಡಗಾಲು ಹಾಕುವುದು ಚೀನಾದ ಉದ್ದೇಶ ಇರುವಂತೆ ಕಾಣುತ್ತಿದೆ.

ದೇಶ ಇಂಥ ಸಂಕಷ್ಟದಲ್ಲಿದ್ದಾಗಲೂ ಅಧಿಕಾರ ಹಿಡಿಯುವ ಆಸೆಯಿಟ್ಟುಕೊಂಡವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. 32 ಮಂದಿ ಸ್ಪರ್ಧೆಗಿಳಿದಿದ್ದಾರೆ. ರಾಜಕೀಯವನ್ನೇ ವೃತ್ತಿ ಮಾಡಿಕೊಂಡಿರುವ ರಾಜಕಾರಣಿಗಳು ಮತ್ತೆ ಚುನಾವಣೆ ಕಣಕ್ಕೆ ಧುಮುಕಿದ್ದಾರೆ. ಹಾಲಿ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇತರ ಎಲ್ಲ ಪಕ್ಷಗಳ ಬೆಂಬಲ ಪಡೆದು ಗೆಲ್ಲುವ ಆಸೆ ಅವರದು. ಕುಸಿದುಹೋಗಿದ್ದ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದನ್ನು ಅವರು ತಮ್ಮ ಸಾಧನೆಯೆಂದು ಹೇಳಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರೂ ಸ್ಪರ್ಧೆಯಲ್ಲಿದ್ದು, ಬಡವರಿಗೆ ಅನುಕೂಲವಾಗುವಂಥ ನೀತಿಗಳನ್ನು ಅನುಸರಿಸುವುದಾಗಿ ಹೇಳುತ್ತಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago