ಎ. ಆರ್. ಗಿರಿಧರ
ಮೈಸೂರಿನ ಡಿ. ಸುಬ್ಬಯ್ಯ ರಸ್ತೆಯ ನಿವಾಸಿ ಕೆ. ಜಿ. ಅನಂತ ಕೃಷ್ಣ (ಮನೆಯವರು, ಸ್ನೇಹಿತರು ಕರೆಯುವುದು ಮೂರ್ತಿ) ಅವರಿಗೆ ಜಡ ವಸ್ತುಗಳಿಗೂ ಜೀವ ತುಂಬುವ ಕಲೆ ಕರಗತವಾಗಿದೆ. ಕೊಬ್ಬರಿಗಿಟಕಿ, ಕಬ್ಬಿಣದ ತಗಡು, ಬೆಲ್ಲದ ಉಂಡೆ, ಅಚ್ಚು, ಕ್ಯಾರೆಟ್, ಬೀಟ್ರೂಟ್ ಮೊದಲಾದ ತರಕಾರಿಗಳು, ಗೋಂಡಂಬಿ, ಬಣ್ಣದ ಪೇಪರ್ ಯಾವುದೇ ಇವರ ಕೈಗೇ ಸಿಕ್ಕಿದರೂ ಕಲಾಕೃತಿಗಳನ್ನು ರೂಪಿಸುವ ಕೈಚಳಕ ಇವರಿಗಿದೆ.
ಐಟಿಐ ಫಿಟ್ಟರ್ ವ್ಯಾಸಂಗ ಮಾಡಿ ವಿಕ್ರಾಂತ್ (ಈಗ ಜೆಕೆ) ಟೈರ್ಸ್‌ನಲ್ಲಿ ಮೋಲ್ಡ್ ವಿಭಾಗದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಅನಂತ ಕೃಷ್ಣ ಕ್ಯಾರೆಟ್, ಮೂಲಂಗಿ, ಗೋಡಂಬಿ, ಕಡೆಗೆ ಕೊಬ್ಬರಿಯ ತುಂಡಿನಲ್ಲೂ ಬಾತುಕೋಳಿ ಮೊದಲಾದ ಚಿತ್ರಗಳನ್ನು ಮೂಡಿಸುತ್ತಾರೆ. ಚಿಕ್ಕಂದಿನಿಂದಲೂ ಕ್ರಿಯಾಶೀಲ ವ್ಯಕ್ತಿಯಾಗಿದ್ದ ಮೂರ್ತಿ ಅವರು ಆಟೋಟ, ಯೋಗಾಸನ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿಯೇ ಮುಂದಿರುತ್ತಿದ್ದರು. ೧೯೬೭ರಲ್ಲಿ ಕೊಬ್ಬರಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತಿದ್ದ ಸುಬ್ಬ ಲಕ್ಷ ಮ್ಮ ಅವರು ಇವರಿಗೂ ಕೊಬ್ಬರಿ ಗಿಟಕಿಯೊಂದನ್ನು ಕೊಟ್ಟು ಸ್ಕೆಚ್ ಮಾಡಲು ಹೇಳಿದರು. ಅಂದಿನಿಂದ ಮೂರ್ತಿ ಅವರು ಕೊಬ್ಬರಿಯಲ್ಲಿ ಕಲಾ ಕೃತಿಗಳನ್ನು ರಚಿಸಲು ಆರಂಭಿಸಿದರು.
ಪರಿಚಯಸ್ತರು, ಅಕ್ಕಪಕ್ಕದವರ ಮನೆಯಲ್ಲಿ ಮದುವೆ ನಿಶ್ಚಯವಾದರೆ ಮೊದಲು ಸಂಪರ್ಕಿಸುವುದು ಮೂರ್ತಿ ಅವರನ್ನು. ಕೊಬ್ಬರಿ ಗಿಟಕಿನಲ್ಲಿ, ವೀಣೆ, ನವಿಲು, ಗಿಳಿ ಪಂಜರ, ಪನ್ನೀರು ದಾನಿ, ಗೌರಿಯ ಮುಖ ಹೀಗೆ ಹಲವಾರು ಕಲಾಕೃತಿಗಳನ್ನು ರೂಪಿಸುತ್ತಾರೆ. ಇದಕ್ಕಾಗಿ ಅಂಗಡಿಗೆ ತೆರಳಿ ಸುಮಾರು ೧೦೦ ಕೊಬ್ಬರಿ ಗಿಟಕುಗಳನ್ನು ಹುಡುಕಿದರೆ ಆಕಾರಕ್ಕೆ ತಕ್ಕಂತೆ ಕೆಲವೇ ಗಿಟಕಿಗಳು ಸಿಗುತ್ತವೆ.
ಅಂಗಡಿಯವರು ಕೇಳಿದಷ್ಟು ಬೆಲೆ ನೀಡಿ ಮನೆಗೆ ತಂದು ಅದನ್ನು ಆಕಾರಕ್ಕೆ ತಕ್ಕಂತೆ ಕತ್ತರಿಸಿ ಕಲಾ ಕೃತಿಗಳನ್ನು ರೂಪಿಸುತ್ತಾರೆ. ಇವರು ಮಾಡಿದ ಕೊಬ್ಬರಿ ಕಲಾಕೃತಿಗಳು ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಇತರೆ ದೇಶಗಳಿಗೂ ತಲುಪಿರುವುದು ವಿಶೇಷ. ಚಿಕ್ಕ ಗಾತ್ರದಲ್ಲಿ ಬರುವ ಬಕೆಟ್, ಬೆಲ್ಲದಲ್ಲಿ ಶಿವಲಿಂಗ, ಬಾತುಕೋಳಿ, ಕಮಲದ ಬಟ್ಟಲು, ಹಣತೆ ಮೊದಲಾದ ಕಲಾಕೃತಿಗಳು ಹೆಚ್ಚು ಆಕರ್ಷಣೀಯವಾಗಿವೆ.
ಮೆಟಲ್ ವರ್ಕ್: ಅಲ್ಯೂಮಿನಿಯಂ ತಗಡಿನಲ್ಲಿಯೂ ಇವರು ನಿಪುಣರು. ಪರಶುರಾಮ, ನವಿಲು, ಗಿಡಮರ, ಕೊಕ್ಕರೆ ಮೊದಲಾದ ಕಲಾಕೃತಿಗಳು ಇವರ ಕೈಚಳಕದಲ್ಲಿ ಮೂಡಿವೆ. ಮೆಟಲ್ ವರ್ಕ್ ಮಾಡಲು ಅಪಾರ ಪರಿಶ್ರಮ ಬೇಕು. ಮೊದಲು ಯಾವ ಚಿತ್ರ ರಚಿಸಬೇಕೋ ಅದರ ಸ್ಕೆಚ್ ಹಾಕುಕೊಂಡು ಚಿನ್ನ, ಬೆಳ್ಳಿ ಕೆಲಸಗಾರರು ಬಳಸುವ ಆಕ್ಸಾ ಬ್ಲೇಡ್ ಮಾದರಿಯ ಉಪಕರಣದಲ್ಲಿ ಕೊರೆಯುತ್ತಾ ಹೋಗಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಕೈಗೆ ಗಾಯವಾಗುತ್ತದೆ ಇಲ್ಲವೇ ಕಲಾಕೃತಿ ಹಾಳಾಗುತ್ತದೆ. ಸುಂದರ ಕಲಾಕೃತಿ ಮೂಡಿ ಬಂದಾಗ ಆಗುವ ಸಂತಸಕ್ಕೆ ಬೆಲೆ ಕಟ್ಟಲಾಗದು ಎನ್ನುತ್ತಾರೆ ಮೂರ್ತಿ.
ಪೇಪರ್ ಕಟಿಂಗ್ಸ್ ನಲ್ಲಿಯೂ ಸೈ: ಪತ್ರಿಕೆಯಲ್ಲಿ ಬಂದಿದ್ದ ಪೇಪರ್ ಕಟಿಂಗ್ ಕಲಾವಿದರೊಬ್ಬರ ಬಗೆಗಿನ ಲೇಖನದಿಂದ ಪ್ರೇರಿತರಾದ ಮೂರ್ತಿ ಅವರು ಬಣ್ಣದ ಪೇಪರ್ ಗಳಲ್ಲಿ ಗಂಡಭೇರುಂಡ, ಅಶೋಕ ಚಕ್ರ ಮೊದಲಾದವುಗಳನ್ನು ರಚಿಸುವುದನ್ನು ಕಲಿತರು. ಇನ್ನು ಹತ್ತಿ ಹಾರ ಮಾಡುವು ದರಲ್ಲಿಯೂ ಇವರು ನಿಪುಣರು. ಹಬ್ಬದ ದಿನಗಳಲ್ಲಿ ತಿಂಗಳಿಗೂ ಮೊದಲೇ ಇಂತಹ ಹಾರ ಬೇಕು ಎಂದು ಬೇಡಿಕೆ ಇಡುವ ಗ್ರಾಹಕರೂ ಇದ್ದಾರೆ.
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…
ಪ್ರತಿದಿನ ಬೆಳಗಿನ ಜಾವ ದಿನ ದಿನಪತ್ರಿಕೆಗಳನ್ನು ಬಹುತೇಕ ಮಕ್ಕಳೇ ವಿತರಿಸುತ್ತಿದ್ದಾರೆ. ಹವಾಮಾನ ವೈಪರೀತ್ಯದಿಂದ ವಿಪರೀತ ಚಳಿ ಇರುವುದರಿಂದ ಆರೋಗ್ಯದ ಮೇಲೆ…
ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳಿಗೆ ಮಧ್ಯವರ್ತಿಗಳು ಹಾಗೂ ಚಾಲನಾ ತರಬೇತಿ ಶಾಲೆಗಳವರಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ…
ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟಲು ರಾಜ್ಯದ ಎಲ್ಲಾ ನಗರ ಪಾಲಿಕೆಗಳು, ಪುರಸಭೆಗಳು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ…
ಕಳೆದ ವಾರ ಕೊಚ್ಚಿಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಕಲೆ ಮತ್ತು ಸಾಹಿತ್ಯ ಉತ್ಸವದಲ್ಲಿ ಸಿನಿಮಾ ಕುರಿತಂತೆ ಪ್ರಮುಖರು ಆಡಿರುವ…