ನಟಿ ವೇದಿಕಾ ಕುಮಾರ್‌ ಗೆ ಕೊರೊನಾ ಪಾಸಿಟಿವ್‌

ಬೆಂಗಳೂರು : ಕನ್ನಡ ಸಿನಿಮಾಗಳಾದ ಸಂಗಮ, ಶಿವಲಿಂಗ ಸೇರಿ ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ವೇದಿಕಾ ಕುಮಾರ್‌ ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ವೇದಿಕಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ  ಕರೆ ನೀಡಿದ್ದಾರೆ.

ಜೊತೆಗೆ ಇದೇ ಮೊದಲ ಬಾರಿಗೆ ತಮಗೆ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ನೋವಿನ ಸಂಗತಿ ಎಂದು ಬರೆದುಕೊಂಡಿದ್ದಾರೆ.  ಮೊದ ಮೊದಲ ಜ್ವರದ ಲಕ್ಷಣಗಳಷ್ಟೇ ಕಾಣಿಸಿಕೊಂಡವು. ಆನಂತರ ತೀವ್ರ ಜ್ವರ ಶುರುವಾಯಿತು.

ತಡಮಾಡದೇ ನಾನು ವೈದ್ಯರನ್ನು ಸಂಪರ್ಕ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ಮಾಡಬೇಡಿ. 103 ಡಿಗ್ರಿ ಜ್ವರ ಇದೆಯಂತೆ. ಮೈ ಕೈ ನೋವಿನಿಂದಲೂ  ನರಳುತ್ತಿದ್ದೇನೆ ಎಂದು ಅವರು ಮಾಹಿತಿಯನ್ನು  ಹಂಚಿಕೊಂಡಿದ್ದಾರೆ.