ಬೆಂಗಳೂರು: ಭಾರೀ ನಿರೀಕ್ಷೆ ಹುಟ್ಟಿಸಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್‘ ಸಿನಿಮಾ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿದ್ದು, ಅಂತರಜಾಲದಲ್ಲಿ ಸಿನಿಮಾ ಲಭ್ಯವಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ಜನವರಿ 25 ರಂದು ಸಿನಿಮಾ ಬಿಡುಗಡೆಯಾಗಿದ್ದು, ಅದಕ್ಕೂ ಮುನ್ನವೇ Filmyzilla ಹಾಗೂ Filmy4wap ಎನ್ನುವ ವೆಬ್ಸೈಟ್ಗಳಲ್ಲಿ ಸಿನಿಮಾ ಸೋರಿಕೆಯಾಗಿದೆ. ಪೈರಸಿ ಬಗ್ಗೆ ಸಿನಿಮಾ ತಂಡ ದೂರು ನೀಡಿದ್ದರೂ ಕೂಡ, ಅಕ್ರಮವಾಗಿ ಸಿನಿಮಾ ವೆಬ್ಸೈಟ್ಗಳಲ್ಲಿ ಲಭ್ಯವಿರುವುದು ಸಿನಿಮಾ ತಂಡಕ್ಕೆ ಹಿನ್ನಡೆಯಾಗಿದೆ. ಇದೇ ವೇಳೆ ಸಿನಿಮಾವನ್ನು ಚಿತ್ರ ಮಂದಿರಗಳಲ್ಲಿಯೇ ವೀಕ್ಷಣೆ ಮಾಡಿ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲಂಸ್ ಅಭಿಮಾನಿಗಳಲ್ಲಿ ಮನವಿ ಮಾಡಿದೆ.
‘