ನಟ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾ ಯುರೋಪಿನ ಪ್ರತಿಷ್ಠಿತ ಫೆಸ್ಟಿವಲ್ ಎಫ್3 ಕಾಂಟಿನೆಂಟ್ಸ್ನ 44ನೇ ಆವೃತ್ತಿಯಲ್ಲಿ ‘ಯಂಗ್ ಜ್ಯೂರಿ ಆವಾರ್ಡ್’ ಅನ್ನು ಪಡೆದುಕೊಂಡಿದೆ.
ಕಾಂತಾರ ಮೂಲಕ ಕಳೆದ ಸುಮಾರು 60 ದಿನಗಳಿಂದ ಸುದ್ದಿಯಲ್ಲಿರುವ ನಟ ರಿಷಬ್ ಶೆಟ್ಟಿ ನಿರ್ಮಾಣದ ಶಿವಮ್ಮ ಸಿನಿಮಾ ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ ‘ನ್ಯೂ ಕರೆಂಟ್ಸ್’ ಪ್ರಶಸ್ತಿ ಪಡೆದು ಖ್ಯಾತಿ ಗಳಿಸಿತ್ತು. ಇದೀಗ ಇದೇ ಚಿತ್ರ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಸುದ್ದಿಯಾಗಿದೆ.
ಯುರೋಪಿನ ಪ್ರತಿಷ್ಠಿತ ಫೆಸ್ಟಿವಲ್ ಎಫ್3 ಕಾಂಟಿನೆಂಟ್ಸ್ನ 44 ನೇ ಆವೃತ್ತಿಯಲ್ಲಿ ‘ಯಂಗ್ ಜ್ಯೂರಿ ಆವಾರ್ಡ್’ ಅನ್ನು ಶಿವಮ್ಮ ಚಿತ್ರ ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ನಿರ್ಮಾಪಕ ರಿಷಬ್ ಶೆಟ್ಟಿ ಅವರೇ ಹಂಚಿಕೊಂಡಿದ್ದಾರೆ.
ಬೂಸಾನ್ ಚಿತ್ರೋತ್ಸವದ ಪ್ರತಿಷ್ಠಿತ "ನ್ಯೂ ಕರೆಂಟ್ಸ್" ಪ್ರಶಸ್ತಿಯ ನಂತರ ಇದೀಗ #Shivamma ಚಲನಚಿತ್ರ ಯುರೋಪಿನ ಪ್ರತಿಷ್ಠಿತ @F3Continents ನ 44ನೇ ಆವೃತ್ತಿಯಲ್ಲಿ 'Young jury award' ಪ್ರಶಸ್ತಿ ಮುಡಿಗೆರಿಸಿಕೊಂಡಿರುವ ವಿಷಯ ತಿಳಿಸಲು ಹರ್ಷಿಸುತ್ತೇವೆ. @jaishnkr15 ಹಾಗೂ ಚಿತ್ರ ತಂಡಕ್ಕೆ ಅಭಿನಂದನೆಗಳು. #Rishabshettyfilms pic.twitter.com/9RRLWWzK1c
— Rishab Shetty (@shetty_rishab) November 29, 2022
ಈ ಸಿನಿಮಾವನ್ನು ಜೈಶಂಕರ್ ಆರ್ಯರ್ ನಿರ್ದೇಶಿಸಿದ್ದು, ಶರಣಮ್ಮ ಚೆಟ್ಟಿ ಹಾಗೂ ಚೆನ್ನಮ್ಮ ಅಬ್ಬೆಗೆರೆ ಅಭಿನಯಿಸಿದ್ದಾರೆ. ಮಧ್ಯಮ ವಯಸ್ಸಿನ ಬಡ ಹೆಣ್ಣು ಮಗಳೊಬ್ಬಳು ಪಾನೀಯದ ಕಂಪನಿಗೆ ಮಾರಾಟ ಪ್ರತಿನಿಧಿಯಾಗಿ ಹೋದಾಗ ಅನುಭವಿಸುವ ಸಾಕಷ್ಟು ಅನುಭವಗಳ ಕಥೆ ಈ ಸಿನಿಮಾದಲ್ಲಿದೆ.