ಗಿಡ ನೆಟ್ಟು ಗ್ರೀನ್ ಇಂಡಿಯಾ ಅಭಿಯಾನಕ್ಕೆ ಸಲ್ಮಾನ್‌ ಖಾನ್‌ ಸಾಥ್‌

ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರು ‘ಕಭಿ ಈದ್ ಕಭಿ ದಿವಾಲಿ’ ಚಿತ್ರೀಕರಣಕ್ಕಾಗಿ ಹೈದರಾಬಾದ್‌ ನಲ್ಲಿದ್ದ ಸಂದರ್ಭದಲ್ಲಿ ಸ್ವತಃ ತಾವೇ ಗಿಡನೆಡುವುದರ ಮೂಲಕ ಗ್ರೀನ್ ಇಂಡಿಯಾ ಅಭಿಯಾನಕ್ಕೆ ಸಾಥ್‌ ನೀಡಿದ್ದಾರೆ.

ರಾಜ್ಯ ಸಭಾ ಎಪಿ ಮತ್ತು ಗ್ರೀನ್ ಇಂಡಿಯಾ ಸಂಸ್ಥಾಪಕ ಆಗಿರುವ ಜೆ. ಸಂತೋಷ್ ಕುಮಾರ್ ಆಹ್ವಾನದ ಮೇರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗಿಡ ನೆಡುವ ಮೂಲಕ  ಗ್ರೀನ್ ಇಂಡಿಯಾ ಚಾಲೆಂಜ್ ಪ್ರಯುಕ್ತ ಹೈದರಾಬಾದ್ ನ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಸಲ್ಮಾನ್ ಖಾನ್ ಗಿಡ ನೆಡುವ ಮೂಲಕ ಅಭಿಮಾನಿಗಳು ಗಿಡ ನೇಡುವಂತೆ ಮನವಿ ಮಾಡಿದ್ದರು.

ಗ್ಲೋಬಲ್ ವಾರ್ಮಿಂಗ್ ನಿಯಂತ್ರಣ ಮಾಡುವ ದೃಷ್ಟಿಯಿಂದ ಸಲ್ಮಾನ್ ಖಾನ್ ತಾವು ಕೂಡ ಗಿಡ ನೆಟ್ಟಿರುವುದಲ್ಲದೇ, ಅಭಿಮಾನಿಗಳಿಗೂ ಗಿಡ ನೇಡುವಂತೆ ಮನವಿ ಮಾಡಿದ್ದಾರೆ.