ಮೈಸೂರು: ನರೇಶ್ ಮತ್ತು ಪವಿತ್ರಾ ಲೋಕೇಶ್ ಕಳೆದ ಕೆಲವು ವರ್ಷಗಳಿಂದ ಬಹಿರಂಗವಾಗಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ಗದ್ದಲ ಎಬ್ಬಿಸಿದ್ದ ನರೇಶ್ ಪತ್ನಿ ರಮ್ಯಾ ರಘುಪತಿ ಕೆಲ ತಿಂಗಳ ಹಿಂದೆ ಮೈಸೂರಿನಲ್ಲೂ ಪತ್ರಿಕಾ ಗೋಷ್ಠಿ ನಡೆಸಿ ಪವಿತ್ರಾ ಲೋಕೇಶ್ ವಿರುದ್ಧ ಕಿಡಿ ಕಾರಿದ್ದರು. ಸದ್ಯ ಒಟ್ಟಿಗೇ ವಾಸ್ತವ್ಯ ಹೂಡಿರುವ ಈ ಜೋಡಿ ತಾವು ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿದ್ದಾರೆ.
ಇವರಿಬ್ಬರ ಸಂಬಂಧ ಟಿ.ವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಸ್ತುವಾಗಿತ್ತು. ನರೇಶ್ ಕೆಲ ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು. ಪವಿತ್ರಾ ಕೂಡ ಪೊಲೀಸರಿಗೆ ದೂರು ನೀಡಿದ್ದರು.
ಹೊಸ ವರ್ಷ ಸಮೀಪಿಸುತ್ತಿದ್ದಂತೆ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಮೇಲಾಗಿ ನರೇಶ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪವಿತ್ರಾಗೆ ಲಿಪ್ ಕಿಸ್ ನೀಡಿದ ವಿಡಿಯೋ ಪೋಸ್ಟ್ ಮಾಡಿದ್ದು, ಅವರ ಮದುವೆಯ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ.
ನರೇಶ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಹೊಸ ವರ್ಷದ ಮುನ್ನಾದಿನದಂದು ಇಬ್ಬರೂ ಕೇಕ್ ಕತ್ತರಿಸಿ ನಂತರ ಪರಸ್ಪರ ಕೇಕ್ ತಿನ್ನಿಸಿದ್ದು ನಂತರ ಇಬ್ಬರು ಲಿಪ್ ಲಾಕ್ ಮಾಡಿದ್ದಾರೆ. ನರೇಶ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.
New Year ✨
New Beginnings 💖
Need all your blessings 🙏From us to all of you #HappyNewYear ❤️
– Mee #PavitraNaresh pic.twitter.com/JiEbWY4qTQ
— H.E Dr Naresh VK actor (@ItsActorNaresh) December 31, 2022
“ಹೊಸ ಪ್ರಪಂಚಕ್ಕೆ ಸ್ವಾಗತ, ಹೊಸ ವರ್ಷದ ಶುಭಾಶಯಗಳು. ನಾವಿಬ್ಬರು ಮದುವೆ ಆಗುತ್ತಿದ್ಧೇವೆ.” ಎಂಬ ಸಾಲುಗಳು ವಿಡಿಯೋ ದಲ್ಲಿದೆ. ಹೊಸ ವರ್ಷದಲ್ಲಿ ನಾವು ಹೊಸ ಜೀವನ ಆರಂಭಿಸುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದವನ್ನು ಬಯಸುತ್ತೇವೆ ಎಂದು ನರೇಶ್ ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಅಣ್ಣ ನರೇಶ್ ಪವಿತ್ರಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ಮದುವೆಯಾಗಿಲ್ಲ ಎಂದಿದ್ದರು. ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ನಿಧನದ ಸಂದರ್ಭದಲ್ಲೂ ಪವಿತ್ರಾ ಲೋಕೇಶ್ ಜೊತೆಗೂಡಿ ಅಲ್ಲಿಗೆ ಬಂದಿದ್ದರು.
ತೆಲುಗಿನ ಹಿರಿಯ ನಟ ಕೃಷ್ಣ ಅವರ ಎರಡನೇ ಪತ್ನಿ ವಿಜಯ ನಿರ್ಮಲ ಅವರ ಪುತ್ರ ನರೇಶ್, ರೇಖಾ ಎಂಬುವವರನ್ನು ಮದುವೆಯಾಗಿದ್ದರು. ಕೆಲವು ವರ್ಷಗಳ ನಂತರ ಮೊದಲ ಪತ್ನಿಗೆ ಡೈವೋರ್ಸ್ ನೀಡಿ ರಮ್ಯ ರಘುಪತಿ ಎಂಬುವವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇದೀಗ ರಮ್ಯ ಜೊತೆಗಿನ ಸಂಬಂಧ ಕಡಿದು ಕೊಂಡು ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗುತ್ತಿದ್ದಾರೆ.
ಪವಿತ್ರಾ ಲೊಕೇಶ್ ಸಾಫ್ಟ್ ವೇರ್ ಎಂಜಿನೀಯರ್ ಒಬ್ಬರನ್ನು ವಿವಾಹವಾಗಿದ್ದರು. ಅವರಿಗೆ ವಿಚ್ಛೇದನ ನೀಡಿದ ನಂತರ ಸುಚೇಂದ್ರ ಪ್ರಸಾದ್ ಅವರನ್ನು ವರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪವಿತ್ರಾ ಲೋಕೇಶ್, ಸುಚೇಂದ್ರ ಪ್ರಸಾದ್ ಅವರಿಂದ ದೂರವಾದರೂ ವಿಚ್ಛೇದನ ಪಡೆದಿರಲಿಲ್ಲ. ಕಾನೂನಿನ ಪ್ರಕಾರ ಡೈವೋರ್ಸ್ ಪಡೆದ ನಂತರ ಪವಿತ್ರಾ ಮತ್ತೊಂದು ಮದುವೆಯಾಗಲಿದ್ದಾರೆ ಎನ್ನಲಾಗಿದೆ.