ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ವರನಟ ಡಾ. ರಾಜ್ ಅವರ ಕುಟುಂಬಕ್ಕೆ ಭೇಟಿ ನೀಡಿ ರಾಷ್ಟ್ರಧ್ವಜವನ್ನು ನೀಡಿದ್ದಾರೆ.
ಸದಾಶಿವ ನಗರದಲ್ಲಿರುವ ನಟ ರಾಘವೇಂದ್ರ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಅವರ ಮನೆಗೆ ತೆರಳಿ ಸಚಿವ ಅಶ್ವತ್ಥ ನಾರಾಯಣ ರಾಷ್ಟ್ರಧ್ವಜ ನೀಡಿದರು.
ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಹಂಚಿಕೊಂಡಿರುವ ಅಶ್ವತ್ಥ ನಾರಾಯಣ ಅವರು ಸತ್ಕಾರ್ಯಗಳಿಗೆ ಸದಾ ಬೆಂಬಲ ನೀಡುವ ಅಣ್ಣಾವ್ರ ಕುಟುಂಬ ಸಮಾಜಕ್ಕೆ ಸದಾ ಮಾದರಿ.
ಸಮಾಜದ ಒಳಿತಿಗಾಗಿ ಸದಾ ಮಿಡಿಯುತ್ತಿದ್ದ ಅಪ್ಪು ಅವರ ನಿಸ್ವಾರ್ಥ ಮನೋಭಾವ, ದೇಶಪ್ರೇಮ ಸಾಮಾಜಿಕ ಕಳಕಳಿ ಸದಾ ಪ್ರೇರಣೆ.
ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ