ಬೆಂಗಳೂರು : ವರನಟ ಡಾ. ರಾಜ್ಕುಮಾರ್ ನಟನೆಯ ‘ಸಾಕ್ಷಾತ್ಕಾರ’ ಸಿನಿಮಾ 1971ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ನಟಿಸಿದ್ದ ನಟಿ ಜಮುನಾ ಅವರು ಇಂದು ನಿಧನರಾಗಿದ್ದಾರೆ.
ಹೈದರಾಬಾದ್ನಲ್ಲಿ ವಾಸವಾಗಿದ್ದ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ತೆಲುಗು, ತಮಿಳು ಜತೆ ಕನ್ನಡ ಚಿತ್ರರಂಗದಲ್ಲೂ ಆ್ಯಕ್ಟಿವ್ ಆಗಿದ್ದರು. ರಾಜ್ಕುಮಾರ್ ನಟನೆಯ ‘ಸಾಕ್ಷಾತ್ಕಾರ’ ಸಿನಿಮಾ 1971ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಅವರು ನಟಿಸಿದ್ದರು. ಕನ್ನಡದಲ್ಲಿ 8 ಚಿತ್ರಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. 1991ರ ‘ಪೊಲೀಸ್ ಮತ್ತು ದಾದಾ’ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ.