ಚಿರಂಜೀವಿ ಅಭಿನಯದ ಕೊನೆಯ ಚಿತ್ರ `ರಾಜಮಾರ್ತಾಂಡ’ ತೆರೆಗೆ ಸಿದ್ದ

ಬೆಂಗಳೂರು : ಸ್ಯಾಂಡಲ್‌ ವುಡ್‌ ನ ನಟ ಚಿರಂಜೀವಿ ಅಭಿನಯದ ಕೊನೆಯ ಚಿತ್ರ ʼರಾಜಮಾರ್ತಾಂಡʼ ಇದೇ ವರ್ಷದ ಸೆಪ್ಟೆಂಬರ್‌ 2 ನೇ ತಾರೀಖಿನಂದು ಬಿಡುಗಡೆಯಾಗಲಿದೆ ಎಂದು ಚಿರು ಸಹೋದರ ನಟ ಧ್ರುವಾ ಸರ್ಜಾ ತಿಳಿಸಿದ್ದಾರೆ.

ಈ ಚಿತ್ರವನ್ನು ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ನಿರ್ಮಾಣ ಮಾಡಿರುವುದರಿಂದ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಡಲಾಗಿದೆ. ಈ ಮುಂಚೆಯೇ ಚಿತ್ರದ ಲುಕ್, ಟೀಸರ್ ಮೂಲಕ ಮೋಡಿ ಮಾಡುತ್ತಿರುವ `ರಾಜಮಾರ್ತಾಂಡ’ ಇದೇ ಸೆಪ್ಟೆಂಬರ್ ೨ಕ್ಕೆ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ. ಇನ್ನು ಚಿರು ಕೊನೆಯ ಸಿನಿಮಾವಾಗಿರುವ ಕಾರಣ ಚಿತ್ರದ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಚಿರು ಪುತ್ರ ರಾಯನ್‌ ಕೂಡ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಋಷಿಕಾ ರಾಜ್ ಕಾಣಿಸಿಕೊಂಡಿದ್ದಾರೆ. ಚಿರು ಪಾತ್ರಕ್ಕೆ ಧ್ರುವಾ ಸರ್ಜಾ ಧ್ವನಿ ನೀಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಚಿರು ಮಗ ರಾಯನ್ ಕೂಡ ನಟಿಸಿದ್ದಾರೆ.

ಸದ್ಯ ಅಭಿಮಾನಿಗಳು ಚಿರುರವರ ಕೊನೆಯ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಕಾತುರರಾಗಿದ್ದಾರೆ.