ಕೆಜಿಎಫ್ ಚಿತ್ರ ಸರಣಿಯ ಬೃಹತ್ ಸಕ್ಸಸ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಕಳೆದ ವರ್ಷ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್ 2 ಬಿಡುಗಡೆಯಾದ ಬಳಿಕ ಯಶ್ ನಟನೆಯ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ವರ್ಷದ ಮೇಲೆ ಏಳು ತಿಂಗಳು ಕಳೆದಿದ್ದರೂ ಯಶ್ ತಾವು ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತೇನೆ ಎಂಬ ಮಾಹಿತಿಯನ್ನೂ ಸಹ ಬಿಟ್ಟುಕೊಟ್ಟಿಲ್ಲ.
ಯಶ್ ಶ್ರೀಲಂಕಾ, ಇಂಗ್ಲೆಂಡ್ ಸೇರಿದಂತೆ ವಿವಿಧ ದೇಶಗಳ ಪ್ರಯಾಣ ಕೈಗೊಂಡಿರುವ ಸುದ್ದಿಗಳು ಹೊರಬೀಳುತ್ತಿವೆಯೇ ಹೊರತು ಮುಂದಿನ ಚಿತ್ರ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಕುರಿತು ವಾರಕ್ಕೊಂದು ಹೊಸ ಅಂತೆಕಂತೆಗಳು ಹರಿದಾಡುತ್ತಿದ್ದು ಯಶ್ 19 ಚಿತ್ರ ಆ ನಿರ್ದೇಶಕರ ಜತೆಯಂತೆ, ಈ ದಿನದಂದು ಚಿತ್ರದ ಘೋಷಣೆಯಾಗಲಿದೆಯಂತೆ ಎಂಬ ಸುದ್ದಿಗಳು ವೈರಲ್ ಆಗುತ್ತಲೇ ಇವೆ.
ಇದೀಗ ಇಂತಹ ಸುದ್ದಿಗಳ ಬಗ್ಗೆ ಹಾಗೂ ತಮ್ಮ ಮುಂದಿನ ಚಿತ್ರದ ಘೋಷಣೆಯ ಬಗ್ಗೆ ಸ್ವತಃ ಯಶ್ ಅವರೇ ಬಿಜಿಎಸ್ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಹೌದು, ನಿನ್ನೆ ( ನವೆಂಬರ್ 23 ) ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಯಶ್ ತಮ್ಮ ಮುಂದಿನ ಚಿತ್ರದ ಅಪ್‌ಡೇಟ್ ಅನ್ನು ಸ್ವತಃ ತಾವೇ ನೀಡಲಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹದ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ.
“ಒಳ್ಳೊಳ್ಳೆ ಹೊಸ ಕಲಾವಿದರು ಬರುತ್ತಾ ಇದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆನ್ನು ತಟ್ಟಿ. ನಮಗೂ ನೀವು ಬೆನ್ನು ತಟ್ಟಿದ್ದಕ್ಕೆ ನಾನು ಇವತ್ತು ಈ ಸ್ಥಾನದಲ್ಲಿರೋದು. ನೀವೆಲ್ಲಾ ಕೇಳ್ತಾ ಇದೀರ ನನಗೆ ಗೊತ್ತು ಅಪ್‌ಡೇಟ್ ಅಂತ. ಒಂದು ವಿಷಯ ಹೇಳ್ತೀನಿ, ನಾನು ಕೂತಿದೀನಿ ಅಂದ್ರೆ ಅದು ನೀವು ಕೊಟ್ಟ ಧೈರ್ಯದಿಂದ. ಹಂಗಂತ ನಾನು ರಿಲ್ಯಾಕ್ಸ್ ಆಗಿ ಕೂತಿಲ್ಲ. ನೀವು ಕೊಟ್ಟಿರೋ ಸಕ್ಸಸ್ ಜವಾಬ್ದಾರಿ ಅಂತ ತಿಳಿದುಕೊಂಡು ಇನ್ನೂ ಮುಂದೆ ಕೆಲಸ ಮಾಡಬೇಕು ಅಂತ ಮುಂದಿನ ಹಂತಕ್ಕೋಸ್ಕರ ಪ್ರಿಪೇರ್ ಆಗ್ತಾ ಇದೀನಿ, ಕೆಲಸ ಮಾಡ್ತೀನಿ. ತಾಳ್ಮೆ ಇಟ್ಟುಕೊಳ್ಳಿ, ನಾನು ಯಾವತ್ತೂ ಅನೌನ್ಸ್‌ಮೆಂಟ್ ಅಂತ ಹೇಳಿಲ್ಲ. ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಯಾವುದೇ ತಿಂಗಳು ಬಂದಾಗಲೂ ಈ ತಿಂಗಳು ಅಪ್‌ಡೇಟ್ ಅಂತ ಹೇಳಿ ಹೇಳಿ ನಿಮಗೆ ಆ ತಾಳ್ಮೆ ಲೆವೆಲ್ ಹೋಗ್ತಿದೆ, ಮಿಸ್‌ಗೈಡ್ ಆಗ್ತಿದೆ. ನಾನೇ ಹೇಳ್ತೀನಿ, ಅಡುಗೆ ಬೆಂದಮೇಲೆ ಬಡಿಸಬೇಕು, ಮುಂಚೆನೇ ಮಾಡೋಕೆ ನನಗೆ ಇಷ್ಟ ಇಲ್ಲ, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ, ನಿಮಗೆ ಇಷ್ಟವಾಗುವಂತ ಕೆಲಸ ಆಗುತ್ತೆ, ಥ್ಯಾಂಕ್ಯೂ” ಎಂದು ಯಶ್ ಹೇಳಿಕೆ ನೀಡಿದರು.
ಬೆಂಗಳೂರು: ನಟಿ ಕಾವ್ಯಾಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಪತಿ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ…
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…
ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು…
ಗದಗ: ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ…
ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು…
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನವಾಗಿಸಬೇಕೆಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ…