ಚಿತ್ರ ಮಂಜರಿ

ನಮಗೆ ಏಕೆ ಕಡಿಮೆ ಸಂಭಾವನೆ: ರಮ್ಯಾ ದಿಟ್ಟ ಪ್ರಶ್ನೆ

ಮನದ ಕಡಲು ಶೀರ್ಷಿಕೆ ಗೀತೆ ಬಿಡುಗಡೆ ಮಾಡಿದ ರಮ್ಯಾ 

ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತದೆ. ಜೊತೆಗೆ ಒಳ್ಳೆಯ ಪಾತ್ರಗಳೂ ಸಿಗುವುದಿಲ್ಲ ಎಂಬ ಮಾತುಗಳು ಆಗಾಗ ಕೇಳಿಬರುತ್ತಿರುತ್ತವೆ. ಈಗ ರಮ್ಯಾ ಅವರೂ ನಾಯಕಿಯರಿಗೆ ಏಕೆ ಕಡಿಮೆ ಸಂಭಾವನೆ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೆಯೇ, ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳೂ ಕಡಿಮೆಯಾಗುತ್ತಿವೆಎಂದುಬೇಸರವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಮಹಿಳೆ ಮತ್ತು ಸಿನಿಮಾ’ ಎಂಬ ವಿಚಾರಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿರುವ ರಮ್ಯಾ, ‘ಆರಂಭದಲ್ಲಿ ನನ್ನ ಜೊತೆಗೆ ನಟಿಸುತ್ತಿದ್ದ ನಟರು ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದರು. ಈಗ ಅವರು ಸೂಪರ್ ಸ್ಟಾರ್‌ಗಳಾಗಿದ್ದಾರೆ. ಒಂದುಚಿತ್ರಯಶಸ್ವಿಯಾದರೆ,ನಾಯಕರು ತಮ್ಮ ಸಂಭಾವನೆಯನ್ನು ಶೇ.೫೦ರಷ್ಟು ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ನಟಿಯರ ಸಂಭಾವನೆ ಮಾತ್ರ ಶೇ.೫ರಷ್ಟು ಮಾತ್ರ ಚ್ಚುತ್ತದೆ. ಅವರು ಐದು ಕೋಟಿ ರೂ. ಪಡೆದರೆ, ನನ್ನ ಸಂಭಾವನೆ ಮಾತ್ರ ಒಂದು ಕೋಟಿ ರೂ. ಇರುತ್ತಿತ್ತು. ಒಂದು ಸಿನಿಮಾಗೆ ನಾಯಕಿ ಕೂಡ ಬಹಳ ಮುಖ್ಯ. ಎಷ್ಟೋ ಬಾರಿ ಸಂಭಾವನೆ ಕಡಿಮೆ ಎಂಬ ಕಾರಣಕ್ಕೆ ನಾನು ಹಲವು ಸಿನಿಮಾಗಳನ್ನು ಬಿಟ್ಟಿದ್ದೇನೆ. ಇದುಬರೀ ಸಿನಿಮಾಕ್ಷೇತ್ರ ವೊಂದರಲ್ಲೇಅಲ್ಲ,ಬೇರೆ ಕ್ಷೇತ್ರಗಳಲ್ಲೂಮಹಿಳೆಯರಿಗೆಸಂಭಾವನೆಕಡಿಮೆನೀಡಲಾಗುತ್ತದೆ’ ಎಂದು ಹೇಳಿದ್ದಾರೆ. ಕನ್ನಡದಲಿ  ಮಹಿಳಾ ಪ್ರಧಾನ ಚಿತ್ರಗಳು ಬರುತ್ತಿಲ್ಲಎಂದಿರುವಅವರು, ‘ಮಲಯಾಳದಲ್ಲಿಅದ್ಭುತವಾದ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿವೆ. ಆದರೆ,ಕನ್ನಡದಲ್ಲಿ ಮಹಿಳಾ ಪ್ರಧಾನ ಚಿತ್ರಗಳೆಂದರೆ, ಪೊಲೀಸ್ ಯೂನಿಫಾರ್ಮ್ ಹಾಕಿಕೊಂಡು ರೌಡಿಗಳನ್ನು ಹೊಡೆಯುವುದಕ್ಕೆ ಸೀಮಿತವಾಗಿದೆ. ಮಲಯಾಳದಲ್ಲಿ ನಟಿಯರಿಗೆ ವೈವಿಧ್ಯಮಯ ಪಾತ್ರಗಳು ಸಿಗುತ್ತವೆ. ಕನ್ನಡದಲ್ಲಿ ಅಂತಹ ಅವಕಾಶಗಳು ಸಿಗುವುದಿಲ್ಲ. ನಾಯಕಿಯರಿಗೆ ಒಳ್ಳೆಯ ಪಾತ್ರಗಳನ್ನು ಬರೆಯುತ್ತಿಲ್ಲ. ನಾನು ೨೦ ವರ್ಷಗಳ ಹಿಂದೆ ಮಾಡಿದ ಪಾತ್ರಗಳನ್ನೇ ಈಗಲೂ ಮಾಡಬೇಕಾದ ಪರಿಸ್ಥಿತಿ ಇದೆ. ಇಲ್ಲಿ ವಾಸ್ತವಕ್ಕೆ ಹತ್ತಿರವಾಗಿರುವ ಚಿತ್ರಗಳು ಬರುತ್ತಿಲ್ಲ.

ಮಹಿಳಾ ಕೇಂದ್ರಿತ ಸಿನಿಮಾಗಳು ಕಡಿಮೆಯಾಗಿವೆ. ಹಾಕಿದ ದುಡ್ಡು ಬರುತ್ತದೋ ಇಲ್ಲವೋ ಎಂದು ಮಹಿಳಾ ಪ್ರಧಾನ ಚಿತ್ರಗಳನ್ನುಮಾಡುವುದಕ್ಕೆ ನಿರ್ಮಾಪಕರು ಮುಂದೆಬರುತ್ತಿಲ್ಲ’ ಎಂದಿದ್ದಾರೆ.

ಇನ್ನು, ರಮ್ಯಾ ಕೆಲವು ವರ್ಷಗಳಿಂದ ನಟನೆಗೆ ವಾಪಸಾಗುವ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ, ರಮ್ಯಾ ಯಾವ ಚಿತ್ರದಲ್ಲೂ ನಟಿಸುವುದಕ್ಕೆ ಒಪ್ಪಿಕೊಂಡಿಲ್ಲ. ಈ ಕುರಿತು ಮಾತನಾಡಿರುವ ಅವರು, ‘ಅವಕಾಶಗಳೇನೋ ಸಾಕಷ್ಟಿವೆ. ಆದರೆ, ಒಳ್ಳೆಯಕಥೆಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ. ಯೋಗರಾಜ್ ಭಟ್ಟರ ಹೊಸ ಚಿತ್ರದ ಹಾಡುಗಳ ಬಿಡುಗಡೆ ಸಂದರ್ಭದಲ್ಲಿ, ಅವರ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಟಿಸುವ ಕುರಿತಂತೆ ಮಾತನ್ನಾಡಿದ ಸುದ್ದಿ ಇದೆ. ರಮ್ಯಾ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ ಒಂದು ಚಿತ್ರವನ್ನು ಈಗಾಗಲೇ ನಿರ್ಮಿಸಿದ್ದಾರೆ. ಅದರಲ್ಲಿ ಅಭಿನಯಿಸುವುದಾಗಿ ಮೊದಲು ಹೇಳಿದ್ದರಾದರೂ ಕೊನೆಗೆ ಹೊಸಬರಿಗೆ ಅವಕಾಶ ನೀಡಿದ್ದರು.

ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’ ಚಿತ್ರವು ಮಾರ್ಚ್ ೨೮ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಮೂರು ಹಾಡುಗಳು ಬಿಡುಗಡೆಯಾಗಿವೆ. ಈಗ ಚಿತ್ರದ ಶೀರ್ಷಿಕೆ ಗೀತೆಯನ್ನು ರಮ್ಯಾ ಬಿಡುಗಡೆ ಮಾಡಿದ್ದಾರೆ. ‘ನೀಲಿ ನೀಲಿ ಕಡಲು’ ಎಂದು ಶುರುವಾಗುವ ‘ಮನದ ಕಡಲು’ ಚಿತ್ರದ ಶೀರ್ಷಿಕೆ ಗೀತೆಯನ್ನು ಯೋಗರಾಜ್ ಭಟ್ ಬರೆದಿದ್ದು, ಸೋನು ನಿಗಮ್ ಹಾಡಿದ್ದಾರೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ರಮ್ಯಾ ಮೆಚ್ಚಿ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ವಿಶೇಷವೆಂದರೆ, ಯೋಗರಾಜ್ ಭಟ್ ಮಗಳು ಪುನರ್ವಸು ಭಟ್ ಈ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿದೆ.

ಈ ಚಿತ್ರಕ್ಕಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅದರಲ್ಲೂ ಕರ್ನಾಟಕದ ೧೨ ಜಿಲ್ಲೆಗಳಲ್ಲಿ ಜಿತ್ರೀಕರಣ ಮಾಡಿರುವುದು ವಿಶೇಷ. ಮಹಾರಾಷ್ಟ್ರದ ಮುರುಡ್ ಜಂಜೀರ ಎಂಬ ಸಮುದ್ರದ ಮಧ್ಯದ ಕೋಟೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಮನದ ಕಡಲು’ ಚಿತ್ರವನ್ನು ಇ.ಕೆ.ಎಂಟರ್‌ಟೈನರ‍್ಸ್ ಸಂಸ್ಥೆಯ ಮೂಲಕ ಇ.ಕೃಷ್ಣಪ್ಪ ಮತ್ತು ಗಂಗಾಧರ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದರೆ, ದತ್ತಣ್ಣ, ರಂಗಾಯಣ ರಘು ಮುಂತಾದ ಹಿರಿಯರಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಜಯಂತ್ ಕಾಯ್ಕಿಣಿ ಗೀತ ರಚನೆ ಇದೆ.

ಆಂದೋಲನ ಡೆಸ್ಕ್

Recent Posts

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಂರ ಮೀಸಲಾತಿಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಸುಮಾರು 1ಕೋಟಿ ರೂ. ವರೆಗಿನ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.…

1 hour ago

ಆನೆ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ

ಬೆಂಗಳೂರು: ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ 45 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ಈ…

1 hour ago

ಒಂದು ತಿಂಗಳು ʼಜಲ ಸಂರಕ್ಷಣಾ ಅಭಿಯಾನʼ: ಡಿಕೆ ಶಿವಕುಮಾರ್‌

ಬೆಂಗಳೂರು: ಜಲ ಸಂರಕ್ಷಣೆ ವಿಚಾರವಾಗಿ ರಾಜ್ಯದಲ್ಲಿ ಒಂದು ತಿಂಗಳುಗಳ ಕಾಲ ʼಜಲ ಸಂರಕ್ಷಣಾ ಅಭಿಯಾನʼ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿಕೆ…

2 hours ago

ಸರ್ವಜ್ಞನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಸರ್ವಜ್ಞ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯನ್ನು ಕ್ಷೇತ್ರದ ಶಾಸಕರಾದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪರಿಶೀಲನೆ ನಡೆಸಿದರು.…

3 hours ago

ಹೊಸ 7 ವಿವಿಗಳನ್ನು ಮುಚ್ಚುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ 7 ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ನಾವು ಎಲ್ಲಿಯೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ…

3 hours ago

ವೈದ್ಯರ ನಿವೃತ್ತಿ ವಯಸ್ಸು ಏರಿಸಲು ಚಿಂತನೆ: ಸಚಿವ ಶರಣ ಪ್ರಕಾಶ ಪಾಟೀಲ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ತಜ್ಞ ವೈದ್ಯರ ನಿವೃತ್ತಿ ವಯಸ್ಸನ್ನು…

4 hours ago