ಚಿತ್ರ ಮಂಜರಿ

ಮತ್ತೆ ಟ್ರೋಲ್‌ ಆದ ಆದಿಪುರುಷ ಚಿತ್ರದ VFX ಅಪ್‌ಡೇಟ್‌

ಪ್ರಭಾಸ್‌ ಅಭಿನಯದ ‘ಆದಿಪುರುಷ‘ ಚಿತ್ರ ನ್ಯೂಯಾರ್ಕ್‌ನ ಟ್ರಿಬೆಕಾ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲು ತಯಾರಾಗಿದ್ದು, ಚಿತ್ರದ ವಿಎಫ್‌ಎಕ್ಸ್‌ನಲ್ಲಿ ಸ್ವಲ್ಪ ಬದಲಾವಣೆ ಮಾಡಿರುವುದು ಕಂಡುಬಂದಿದೆ. ಚಿತ್ರದ ವಿಎಫ್‌ಎಕ್ಸ್‌ ಅಪ್‌ಡೇಟ್‌ ನೋಡಿದ ನೆಟ್ಟಿಗರೊಬ್ಬರು ‘ಬ್ರೈಟ್‌ನೆಸ್‌ ಕಮ್ಮಿ ಮಾಡಿ, ಕಲರ್‌ ಟೋನ್‌ ಜಾಸ್ತಿ ಮಾಡಿದಾಕ್ಷಣ ವಿಎಫ್‌ಎಕ್ಸ್‌ ಅಥವಾ ಸಿಜಿಐ ಸುಧಾರಿಸುವುದಿಲ್ಲವಲ್ಲವೇ?‘ ಎಂದು ಟ್ರೋಲ್‌ ಮಾಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆದಿಪುರುಷ ಚಿತ್ರದ ಟೀಸರ್‌ ಬಿಡುಗಡೆ ಮಾಡಿದ್ದು, ಚಿತ್ರದ ವಿಎಫ್‌ಎಕ್ಸ್‌ ನೋಡಿ ಹಲವರು ಗೇಲಿ ಮಾಡಿದ್ದರು. ಇದೊಂದು ಕೆಟ್ಟ ವಿಎಫ್‌ಎಕ್ಸ್ ಆಗಿದೆ ಎಂದು ಹೇಳಿದ್ದರು. ಇದೀಗ ಚಿತ್ರತಂಡ ವಿಎಫ್‌ಎಕ್ಸ್‌ನಲ್ಲಿ ಸ್ವಲ್ಪ ಬದಲಾವಣೆ ತಂದಿದ್ದು, ಈಗ ಮತ್ತೆ ಟ್ರೋಲ್‌ಗೆ ಒಳಗಾಗಿದೆ. ‘ಆದಿಪುರುಷ ಚಿತ್ರತಂಡ ನೀಲಿಯಾಗಿ ಕಾಣುತ್ತಿದ್ದ ಬ್ಯಾಕ್‌ಗ್ರೌಂಡ್‌ ಬಣ್ಣವನ್ನು ಹಳದಿಯಾಗಿ ಬದಲಾಯಿಸಿದೆ‘ ಎಂದು ಮತ್ತೊಬ್ಬ ಟ್ವಿಟಿಗರು ವಿಎಫ್ಎಕ್ಸ್‌ ಬದಲಾವಣೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ .

‘ಆದಿಪುರುಷ ಚಿತ್ರತಂಡವು ಹೊಸ ಮತ್ತು ಸುಧಾರಿತ ವಿಎಫ್‌ಎಕ್ಸ್ ಅನ್ನು ಪ್ರಚಾರ ಮಾಡುತ್ತಿರುವ ರೀತಿ ಹಾಸ್ಯಾಸ್ಪವಾಗಿದೆ. ಅವರು ಏನು ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಅವರಿಗೆ ತಿಳಿಯುತ್ತಿಲ್ಲವೇ? ಕಲರ್‌ ಗ್ರೇಡಿಂಗ್ ಮತ್ತು ವಿಎಫ್‌ಎಕ್ಸ್‌ ನಡುವೆ ವ್ಯತ್ಯಾಸವಿದೆ‘ ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ.

ಪೌರಾಣಿಕ ಕಥೆಯಾಧಾರಿತ ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ಮತ್ತು ಬಾಲಿವುಡ್‌ ನಟಿ ಕೃತಿ ಸನೂನ್‌ ನಟಿಸಿದ್ದಾರೆ. ಚಿತ್ರದಲ್ಲಿ ಸೈಫ್‌ ಅಲಿ ಖಾನ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಜೂನ್‌ 16ಕ್ಕೆ ಬೆಳ್ಳಿ ಪರದೆ ಮೇಲೆ ತೆರೆ ಕಾಣಲಿದೆ.

 

andolanait

Recent Posts

ಪಿರಿಯಾಪಟ್ಟಣ | ನಿಲ್ಲದ ಸರ್ವರ್‌ ಸಮಸ್ಯೆ ; ಪಡಿತರ ಪಡೆಯಲು ಪರದಾಟ

ಪಿರಿಯಾಪಟ್ಟಣ : ಪಿರಿಯಾಪಟ್ಟಣದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಜನರು ಪಡಿತರ ಪಡೆಯಲು ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ. ಜನಸಾಮಾನ್ಯರು ಎಂದಿನಂತೆ ಪ್ರತಿ…

9 hours ago

ಗೌರವಯುತವಾಗಿ ನಡೆದುಕೊಂಡ ಸಿದ್ದರಾಮಯ್ಯ : ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯನವರ ಮುಂದಿನ ಜೀವನ ಚೆನ್ನಾಗಿರಲಿ. ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಉತ್ತಮ…

11 hours ago

ನಾಳೆ ಸಿಎಲ್‌ಪಿ ಸಭೆ ಕರೆದಿದ್ದೇವೆ, ಸಿದ್ದರಾಮಯ್ಯ ಜತೆ ಚರ್ಚಿಸಿದ್ದೇನೆ : ಡಿ.ಕೆ.ಶಿವಕುಮಾರ್‌

ಹೊಸದಿಲ್ಲಿ : ಕಳೆದ ಎರಡ್ಮೂರು ದಿನಗಳಿಂದ ಮೌನಕ್ಕೆ ಶರಣಾಗಿದ್ದ ಡಿಕೆ ಶಿವಕುಮಾರ್ ಕೊನೆಗೂ ತುಟಿ ಬಿಚ್ಚಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿ…

12 hours ago

ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ನಾನು ಸಹ ಹೊಸ ಸಚಿವ ಸಂಪುಟದಲ್ಲಿ ಸೇರುವ ಬಯಕೆ ಇದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ…

17 hours ago

ರಾಜ್ಯ ಸಚಿವ ಸಂಪುಟ ವಿಸರ್ಜನೆ: ಸಚಿವರ ಸರ್ಕಾರಿ ವಾಹನಗಳು ವಾಪಸ್‌

ಬೆಂಗಳೂರು: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ್ದ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಅಂಗೀಕರಿಸಿದ್ದಾರೆ. ರಾಜೀನಾಮೆ ಅಂಗೀಕಾರವಾದ ಬೆನ್ನಲ್ಲೇ…

17 hours ago

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಡಿ.ಕೆ.ಶಿವಕುಮಾರ್‌

ಬೆಂಗಳೂರು: ದೇವರು ವರನೂ ಕೊಡಲ್ಲ. ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಆ ಕೊಟ್ಟಿರುವ ಅವಕಾಶದಲ್ಲಿ ನಾವು ಏನು ಸಾಧನೆ…

18 hours ago