ನೆಲಮಂಗಲ : ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಹಿರಿಯ ನಟಿ ಡಾ.ಲೀಲಾವತಿ ಹಾಗೂ ವಿನೋದ್‌ರಾಜ್‌ರವರಿಗೆ ಸನ್ಮಾನ,ಅಭಿನಂದನೆ ಸಲ್ಲಿಸಲಾಗಿದೆ. ಹಿರಿಯ ನಟಿ ಡಾ.ಲೀಲಾವತಿ ಹಾಗೂ ವಿನೋದ್‌ರಾಜ್‌ರವರು ಕಲ್ಲಿನ ಬಂಡೆಯ ಜಾಗದಲ್ಲಿ ಪ್ರಕೃತಿಯನ್ನು ಆರಾಧಿಸುವಂತೆ ತೋಟ ಮಾಡಿರುವುದು ಆ ತೋಟದಲ್ಲಿ ಪ್ರಾಣಿಪಕ್ಷಿಗಳು ಜೀವನ ಮಾಡಲು ಅನುವು ಮಾಡಿಕೊಟ್ಟಿರುವುದು ಮನುಷ್ಯ ಜನ್ಮದ ಅದ್ಬುತ ಕಾರ್ಯ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಇಂದಿರಾಕೃಷ್ಣಪ್ಪ ಅಭಿಪ್ರಾಯ ಪಟ್ಟರು.
ತಾಲೂಕಿನ ಸೋಲದೇವನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಆಯೋಜಿಸಲಾಗಿದ್ದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಜನರಿಗೆ ಹಾಗೂ ಪಶುಗಳಿಗೆ ಸ್ವಂತ ಆಸ್ಪತ್ರೆ ನಿರ್ಮಾಣ ಮಾಡಿ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಸಮಾಜಕ್ಕೆ ಪ್ರೇರಣೆ, ಗಾಂಧಿಯವರ ಕನಸಿನ ಭಾರತಕ್ಕೆ ಲೀಲಾವತಿಯವರ ಸೇವೆ ಮಾದರಿಯಾಗಿದೆ. ಕರುನಾಡಿನಲ್ಲಿ ಜನಮೆಚ್ಚಿದ ಆರುನೂರಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನೆ ಮಾಡಿ ದಕ್ಷಿಣ ಭಾರತದ ಘನತೆಯ ಕಲಾವಿದೆಯಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಜೀವನ ಸಾಗಿಸುವ ಮೂಲಕ ಸಮಾಜ ಸೇವೆ ಮಾಡಿ ಮಾದರಿಯಾಗಿದ್ದಾರೆ ಎಂದರು.
ಹಿರಿಯ ನಟಿ ಡಾ.ಲೀಲಾವತಿ ಮಾತನಾಡಿ, ನನಗೆ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಅಭಿನಂದನೆ ಸಲ್ಲಿಸುತ್ತಿರುವುದು ಸಂತೋಷವಾಗಿದೆ. ದೇಶದಲ್ಲಿ ಗಾಂಧಿ ಕನಸಿನ ಮಾದರಿ ಗ್ರಾಮಗಳು ಸೃಷ್ಟಿಯಾದರೆ ಮಾತ್ರ ಗ್ರಾಮೀಣ ಜನರ ಬದುಕು ಉತ್ತಮವಾಗಿರುತ್ತದೆ, ನಾನು ನೆಲೆಸಿರುವ ಸೋಲದೇವನಹಳ್ಳಿ ಭಾಗದ ಗ್ರಾಮೀಣ ಜನರಿಗೆ ಅನುಕೂಲವಾಗಲು ಆಸ್ಪತ್ರೆ ಮಾಡುವ ಕನಸು ನನಸಾಗಿದೆ. ಒಂದು ಪಶು ಆಸ್ಪತ್ರೆ ಮಾಡಲಾಗುತ್ತಿದ್ದು ಮಗ ವಿನೋದ್ ರಾಜ್ ಬಲವಾಗಿ ನಿಂತಿದ್ದಾರೆ. ಗಾಂಧೀಜಿಯವರು ಹೇಳಿದಂತೆ ಹಳ್ಳಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಕಾಣಲಿದೆ ಎಂದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಭಾರತ ಸ್ವಾತಂತ್ರ‍್ಯ ಮಹೋತ್ಸವದ ಹಿನ್ನಲೆ ಕನ್ನಡಕ್ಕೊಬ್ಬರೆ ಅಭಿನಯ ಸರಸ್ವತಿ ಡಾ.ಲೀಲಾವತಿ ಎಂಬ ಬಿರುದು ನೀಡಿ ಪ್ರಮಾಣ ಪತ್ರ ಹಾಗೂ ಚರಕವನ್ನು ನೀಡಿ ಡಾ.ಲೀಲಾವತಿಯವರಿಗೆ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು. ತಾಯಿಯ ಜೊತೆ ಮಗ ವಿನೋದ್ ರಾಜ್‌ರವರಿಗೂ ಸಹ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಟ ವಿನೋದ್‌ರಾಜ್, ರಾಷ್ಟೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ ಪ್ರಶಾಂತ್,ಅಧ್ಯಾಪಕಿ ಶಾಮಲಾ, ಕನ್ನಡ ಸಾಹಿತ್ಯ ಪರಿಷತ್ ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರೆ.
ಶೇ.30ರಷ್ಟು ಉತ್ಪಾದನೆ ಕುಸಿತ ; ಉತ್ತರ ಕೊಡಗಿನ ಭಾಗದಲ್ಲಿ ಹೆಚ್ಚಿನ ಬೆಳೆ ನಷ್ಟ ನವೀನ್ ಡಿಸೋಜ ಮಡಿಕೇರಿ: ಈ ಬಾರಿಯ…
ಭೇರ್ಯ ಮಹೇಶ್ ಕೆ.ಆರ್.ನಗರ : ಭತ್ತದ ನಾಡು ಎಂದೇ ಪ್ರಖ್ಯಾತಿ ಹೊಂದಿರುವ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳಲ್ಲಿ ಇದೀಗ ಭತ್ತದ…
ದೊಡ್ಡ ಕವಲಂದೆ : ಗಬ್ಬೆದ್ದು ನಾರುತ್ತಿರುವ ಚರಂಡಿಯ ಕೊಳಚೆ ನೀರಿನಿಂದ ಗ್ರಾಮ ಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡು ತ್ತಿದ್ದು, ಗ್ರಾಮ…
ಸರಗೂರು : ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಜನ ಸಾಮಾನ್ಯರು ತತ್ತರಿಸಿ ಆತಂಕದಲ್ಲಿದ್ದರೂ ನಿಯಂ ತ್ರಣ…
ನುರಿತ ತಜ್ಞರ ತಂಡದಿಂದ ಕೆರೆ ಸ್ವಚ್ಛತೆ ಆರಂಭಿಸಲು ತಯಾರಿ ಮೈಸೂರು : ಪ್ರವಾಸಿಗರು ಹಾಗೂ ವಾಯುವಿಹಾರಿಗಳ ನೆಚ್ಚಿನ ತಾಣವಾದ ಕುಕ್ಕರಹಳ್ಳಿ…
ಮೈಸೂರು ನಗರದ ಪ್ರತಿಯೊಂದೂ ವಾರ್ಡ್‌ನ ಪ್ರತಿ ಮಾರ್ಗದಲ್ಲೂ ಮೈಸೂರು ಮಹಾ ನಗರ ಪಾಲಿಕೆಯಿಂದ ವಾರ್ಡ್ ಸಂಖ್ಯೆ, ವಾರ್ಡ್‌ನ್ನು ಪ್ರತಿನಿಧಿಸುವ ಪಾಲಿಕೆ…