ಬೆಂಗಳೂರು : ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಪನೌತಿ ಎಂದು ಕರೆದಿದ್ದರು. ಅದಾದ ನಂತರ ಪನೌತಿ ಬಗ್ಗೆ ಕನ್ನಡದ ನಟ ಕಿಶೋರ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಪನೌತಿಯಿಂದ ಸೋಲುವುದು ಎಷ್ಟು ಸುಳ್ಳೋ..ಜೈಶ್ರೀರಾಮನಿಂದ ಗೆಲ್ಲುವುದೂ ಅಷ್ಟೇ ಸುಳ್ಳು ಎಂದು ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಂದಿನ ವ್ಯವಸ್ಥೆಯ ವ್ಯಂಗ್ಯವೇನೆಂದರೆ ಸಜ್ಜನರ ಆಟ ಎಂದು ಕರೆಯಲ್ಪಡುವ ಕ್ರಿಕೆಟ್ಟಿನಲ್ಲೂ, ಪ್ರೇಕ್ಷಕರನ್ನು ಜೈ ಶ್ರೀರಾಮ್ ಎಂದು ಧಾರ್ಮಿಕ ಘೋಷಣೆಗಳನ್ನು ಕೂಗುವ ಮಟ್ಟಕ್ಕೆ ತಂದಿಟ್ಟವರು ಪನೌತಿಯ ಪ್ರಭಾವವನ್ನೂ ಹೆಗಲಿಗೇರಿಸಿಕೊಳ್ಳಲೇಬೇಕು ಎಂದು ಕಿಡಿಕಾರಿದ್ದಾರೆ.
ದೇಶವನ್ನು ವಿನಾಶದಂಚಿಗೆ ತಳ್ಳುತ್ತಿರುವ ಧರ್ಮಾಂಧತೆ, ಮೂಢನಂಬಿಕೆ, ಬಡತನ, ಅಸಮಾನತೆ, ನಿರುದ್ಯೊಗ ಮತ್ತು ಭ್ರಷ್ಟಾಚಾರಗಳು ನಿಜವಾದ ಪನೌತಿಯಾಗಿದೆ. “ಹೊಲಸು ಧರ್ಮಾಂಧ ರಾಜಕಾರಣದಿಂದ ಮೂಢನಂಬಿಕೆಯ ಕೂಪದಲ್ಲಿ ತಳ್ಳಲ್ಪಟ್ಟು ಮೂರ್ಖರಾದ ನಾವು ತಿಳಿದುಕೊಳ್ಳಬೇಕಿರುವುದು ಇದನ್ನೇ ಎಂದು ಅವರು ಹೇಳಿದ್ದಾರೆ.
ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…
ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…
ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…
ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…
ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…
ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…