ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ತರುಣ್ ಸುಧೀರ್ ಕಾಂಬಿನೇಶನ್‌ನ ಎರಡನೇ ಚಿತ್ರ ಕಾಟೇರ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಬಹು ದಿನಗಳ ಬಳಿಕ ದರ್ಶನ್ ಪ್ರತಿಭೆಗೆ ತಕ್ಕನಾದ ಚಿತ್ರ ಬಂದಿದೆ ಎಂದು ದರ್ಶನ್ ಅಭಿಮಾನಿಗಳು ಹಾಗೂ ಒಂದೊಳ್ಳೆ ಅಂಶ ಇರುವ ಸಿನಿಮಾ ಬಿಡುಗಡೆಯಾಗಿದೆ ಎಂದು ಸಿನಿ ರಸಿಕರು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದಾರೆ.
ಇನ್ನು ಕಾಟೇರ ಬಿಡುಗಡೆಯಾದಾಗಿನಿಂದಲೂ ಸಹ ಒಳ್ಳೆಯ ವಿಮರ್ಶೆಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದು, ಗಲ್ಲಾಪೆಟ್ಟಿಗೆಯಲ್ಲೂ ಸಹ ಗೆಲುವನ್ನು ಕಂಡಿದ್ದಾನೆ. ಹೀಗಾಗಿ ಕಾಟೇರ ಚಿತ್ರತಂಡ ಸಕ್ಸಸ್ ಮೀಟ್ ಕಾರ್ಯಕ್ರಮವನ್ನೂ ಸಹ ಹಂಚಿಕೊಂಡಿದ್ದು ಸಂಭ್ರಮಿಸಿದೆ. ಚಿತ್ರದ ನಿರ್ದೇಶಕ ತರುಣ್ ಸುಧೀರ್ ತಮ್ಮ ಕಾಟೇರ ಚಿತ್ರಕ್ಕೆ ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಗೆ ಮನಸೋತು ಟ್ವೀಟ್‌ವೊಂದನ್ನು ಮಾಡಿದ್ದು, ಚಿತ್ರಕ್ಕೆ ಬೆಂಬಲ ನೀಡಿದ ಹಾಗೂ ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ತರುಣ್ ಸುಧೀರ್ ಹಂಚಿಕೊಂಡ ಪೋಸ್ಟ್ ಈ ಕೆಳಕಂಡಂತಿದೆ:
ಅಭಿಮಾನಿಗಳು. ರೈತರು. ನಮ್ಮ ಕನ್ನಡ ಚಿತ್ರೋದ್ಯಮ ಮತ್ತು ಹಲವಾರು ಮನಗಳಿಗೆ ನಾವು ಸಾಕಷ್ಟು ಋಣಿಯಾಗಿದ್ದೇವೆ. ಹೊಸದೊಂದು ಕಥೆ ಹೇಳುವ ಸಲುವಾಗಿ ಶುರುವಾದ ಪ್ರಯತ್ನ. ಹಲವಾರು ದೈತ್ಯರ ಕೃಷಿ, ನಿಮ್ಮ ಕಾಟೇರ. ಇಂದು, ನಾವು ಕಲ್ಪಿಸಿಕೊಂಡದ್ದನ್ನು, ಅರಿತುಕೊಂಡಿರುವುದನ್ನು ನಿಜ ಸ್ವರೂಪದಲ್ಲಿ ಬೆಳ್ಳಿ ಪರದೆಯ ಮೇಲೆ ನೋಡಲು ಬಹಳ ಸಂತೋಷ ಮತ್ತು ಹೆಮ್ಮೆ ಅನಿಸುತ್ತಿದೆ.
ನಾನು ಹಿಂತಿರುಗಿ ನೋಡಿದಾಗ, ನನಗೆ ಕಾಣುವುದು ನಿಮ್ಮೆಲ್ಲರ ಸತತ ಪ್ರೀತಿ, ಬೆಂಬಲ ಮತ್ತು ಆಶೀರ್ವಾದ. ದರ್ಶನ್ ಸರ್, ರಾಕ್‌ಲೈನ್ ಸರ್ ಮತ್ತು ನನ್ನ ತಂಡಕ್ಕೆ ನಾನು ಎಂದೆಂದೂ ಆಭಾರಿ, ನನ್ನ ಮೇಲಿನ ನಿಮ್ಮ ಬಲವಾದ ನಂಬಿಕೆಯಿಂದ ಕಾಟೇರ ಸಾಧ್ಯವಾಯಿತು.
ಸೆಲೆಬ್ರಿಟಿಗಳು. ನೀವು ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಪ್ರೇರಣೆಯಾಗಿ ನಿಂತಿದ್ದೀರ. ನೀವು ಕಾಟೇರ ಚಿತ್ರವನ್ನು ಪ್ರೀತಿಯಿಂದ ಸ್ವಾಗತಿಸಿದ ರೀತಿ ನಮ್ಮನ್ನು ತುಂಬಾ ಭಾವುಕರನ್ನಾಗಿಸುತ್ತದೆ! ಇದಕ್ಕಿಂತ ಹೆಚ್ಚು ಇನ್ನೇನು ಕೇಳಲು ಸಾಧ್ಯ!! ಮತ್ತೊಮ್ಮೆ ಎಲ್ಲರಿಗೂ ಮನದಾಳದ ಧನ್ಯವಾದಗಳು!
ಚಿತ್ರದ ಪ್ರತಿ ಹಂತದಲ್ಲೂ ಬೆಂಬಲ ನೀಡಿದ ಮಾಧ್ಯಮ ಮಿತ್ರರಿಗೆ ವಿಶೇಷ ಧನ್ಯವಾದಗಳು ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
ಅಭಿಮಾನಿಯ ಕಾಟೇರ, ಅಭಿಮಾನಿಗಳಿಗಾಗಿ,
ನಿಮ್ಮ,
ತರುಣ್ ಕಿಶೋರ್ ಸುಧೀರ್
ಬೆಂಗಳೂರು: ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೇ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ…
ಹನೂರು: ತಾಲೂಕಿನ ಮಿಣ್ಯಂ ಗ್ರಾಮದಿಂದ ಹನೂರಿಗೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಅರಣ್ಯ ವ್ಯಾಪ್ತಿಯಲ್ಲಿ ಹುಲಿರಾಯ ದರ್ಶನ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ…
ಬೆಳಗಾವಿ: ಆದಷ್ಟು ಬೇಗ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ರಹೀಂ ಖಾನ್ ತಿಳಿಸಿದರು. ವಿಧಾನಪರಿಷತ್ ಕಲಾಪದಲ್ಲಿ…
ಮಂಡ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬವನ್ನು ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅದ್ಧೂರಿಯಾಗಿ ಆಚರಣೆ ಮಾಡಿದರು. ಮದ್ದೂರಿನಲ್ಲಿ ಮಾಜಿ…
ಬೆಳಗಾವಿ: ಕೋಳಿ ಮೊಟ್ಟೆ ಸೇವಿಸಿದರೆ ಕ್ಯಾನ್ಸರ್ ಬರುವ ವದಂತಿ ಎಲ್ಲೆಡೆ ಹಬ್ಬಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ…
ಮಳವಳ್ಳಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಳವಳ್ಳಿಯಲ್ಲಿ ನಡೆಯಲಿರುವ ಸುತ್ತೂರಿನ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವ ಯೋಗಿಗಳರವರ 1066ನೇ ಜಯಂತಿ…