ಚಿತ್ರ ಮಂಜರಿ

ತಮಿಳು ಸ್ಟಾರ್ ನಟ ಧನುಶ್​ಗೆ ನಿರ್ಮಾಪಕರ ಸಂಘದಿಂದ ನೊಟೀಸ್ : ಬ್ಯಾನ್ ಮಾಡುವ ಎಚ್ಚರಿಕೆ

ನಟ ಧನುಶ್, ದಕ್ಷಿಣ ಭಾರತದ ಪ್ರತಿಭಾವಂತ ನಟ. ಯಾವುದೇ ರೀತಿಯ ಪಾತ್ರವಾದರೂ ಲೀಲಾಜಾಲವಾಗಿ ನಿರ್ವಹಿಸಬಲ್ಲ ನಟ ಧನುಶ್. ಬಾಲಿವುಡ್​ನಲ್ಲೂ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ಧನುಶ್​ ಹಾಲಿವುಡ್​ನಲ್ಲ ದೊಡ್ಡ ನಿರ್ಮಾಣ ಸಂಸ್ಥೆಯ ಸಿನಿಮಾನಲ್ಲಿ ಹಾಲಿವುಡ್ ಸ್ಟಾರ್ ನಟರೊಡನೆ ನಟಿಸಿ ಬಂದಿದ್ದಾರೆ. ಆದರೆ ಇದೀಗ ಹಠಾತ್ತನೆ ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ಧನುಶ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ನೊಟೀಸ್ ಜಾರಿ ಮಾಡಿದೆ. ತಮಿಳು ಚಿತ್ರರಂಗದಿಂದ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಸ್ಟಾರ್ ನಟ ಧನುಶ್ ಅವರಿಗೆ ತಮಿಳು ಚಿತ್ರರಂಗದ ನಿರ್ಮಾಪಕ ಸಂಘವು ನೊಟೀಸ್ ನೀಡಿದ್ದು ಧನುಶ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ನಟ ಧನುಶ್ ಮಾತ್ರವೇ ಅಲ್ಲದೆ ಇತರೆ ಕೆಲವು ಜನಪ್ರಿಯ ತಮಿಳು ನಟರಿಗೂ ನೊಟೀಸ್ ನೀಡಲಾಗಿದೆ ಎನ್ನಲಾಗುತ್ತಿದೆ. ನಟ ಧನುಶ್ ನಿರ್ಮಾಪಕರೊಬ್ಬರಿಗೆ ಮುಂಗಡ ಹಣ ಪಡೆದು ಈಗ ಸಿನಿಮಾದಲ್ಲಿ ನಟಿಸಲು ಸೂಕ್ತ ಡೇಟ್ಸ್ ನೀಡುತ್ತಿಲ್ಲವಂತೆ ಮಾತ್ರವಲ್ಲದೆ ಸಬೂಬುಗಳನ್ನು ಹೇಳುತ್ತಿದ್ದಾರಂತೆ. ಇದೇ ಕಾರಣಕ್ಕೆ ಧನುಶ್​ಗೆ ನೊಟೀಸ್ ನೀಡಿದೆ ನಿರ್ಮಾಪಕ ಸಂಘ.

ನಟ ಧನುಶ್, ತಮಿಳಿನ ಶ್ರೀ ತೆನಂದಾಲ್ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಒಂದಕ್ಕಾಗಿ ಮುಂಗಡ ಪಡೆದಿದ್ದರು. ಆದರೆ ಆ ಸಿನಿಮಾದಲ್ಲಿ ಈ ವರೆಗೆ ನಟಿಸಿಲ್ಲ. ಹಾಗಾಗಿ ತೆನಂದಾಲ್ ನಿರ್ಮಾಣ ಸಂಸ್ಥೆಯು ತಮಿಳು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್​ಗೆ (ಟಿಎಫ್​ಪಿಸಿ) ದೂರು ನೀಡಿತ್ತು. ಹಾಗಾಗಿ ಈಗ ಟಿಎಫ್​ಪಿಸಿಯು ಧನುಶ್​ಗೆ ನೊಟೀಸ್ ಜಾರಿ ಮಾಡಿದ್ದು, ನಿರ್ಮಾಪಕರ ಸಂಘದಿಂದ ನಿಷೇಧ ಹೇರುವ ಎಚ್ಚರಿಕೆಯನ್ನು ಸಹ ನೀಡಿದೆ.
ಧನುಶ್ ಮಾತ್ರವೇ ಅಲ್ಲದೆ ತಮಿಳಿನ ಇತರೆ ನಟರಾದ ಸಿಲಂಬರಸನ್ ಅಲಿಯಾಸ್ ಸಿಂಭು. ಎಸ್​ಜೆ ಸೂರ್ಯ, ವಿಶಾಲ್ ಹಾಸ್ಯನಟ ಯೋಗಿಬಾಬು ಅವರುಗಳಿಗೂ ನಿರ್ಮಾಪಕರ ಸಂಘ ನೊಟೀಸ್ ನೀಡಿದ್ದು ಅಶಿಸ್ತಿನ ಕಾರಣದಿಂದ ನಿಷೇಧ ಹೇರುವ ಎಚ್ಚರಿಕೆಯನ್ನು ನೀಡಿದೆ. ಪಡೆದ ಮುಂಗಡಕ್ಕೆ ಸಿನಿಮಾ ಮಾಡಿ ಕೊಡಿ ಇಲ್ಲವಾ ಬಡ್ಡಿ ಸಮೇತ ಮುಂಗಡ ಹಣ ವಾಪಸ್ ಮಾಡಿ ಎಂದು ನಿರ್ಮಾಪಕರ ಸಂಘ ನಟರಿಗೆ ಷರತ್ತು ಹಾಕಿದೆ.

ಕೆಲವು ದಿನಗಳ ಹಿಂದಷ್ಟೆ ಮಲಯಾಳಂ ಚಿತ್ರರಂಗದಲ್ಲಿ ನಿರ್ಮಾಪಕರ ಸಂಘವು ಇಬ್ಬರು ಜನಪ್ರಿಯ ನಟರ ಮೇಲೆ ನಿಷೇಧ ಹೇರಿತ್ತು. ಒಬ್ಬ ನಟ ಕ್ಷಮೆ ಕೇಳಿದ ಬಳಿಕ ಆತನ ಮೇಲಿದ್ದ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಇನ್ನೊಬ್ಬ ನಟನ ಮೇಲಿನ ನಿಷೇಧ ಜಾರಿಯಲ್ಲಿದೆ. ಈಗ ಅದೇ ಮಾದರಿಯನ್ನು ತಮಿಳು ಚಿತ್ರರಂಗದ ನಿರ್ಮಾಪಕರ ಸಂಘವೂ ಮಾಡ ಹೊರಟಿದೆ.

ನಟ ಧನುಶ್, ತಮಿಳಿನ ಅತ್ಯಂತ ವೃತ್ತಿಪರ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆದರೆ ಮುಂಗಡ ಪಡೆದು ಸಿನಿಮಾದಲ್ಲಿ ಏಕೆ ನಟಿಸಿಲ್ಲ ಎಂಬುದು ತಿಳಿದು ಬಂದಿಲ್ಲ. ಧನುಶ್ ನಟಿಸಿರುವ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅದಾದ ಬಳಿಕ ಬಾಲಿವುಡ್ ಸಿನಿಮಾದಲ್ಲಿ ಧನುಶ್ ನಟಿಸುತ್ತಿದ್ದಾರೆ. ಆ ಬಳಿಕ ಆಯರತ್ತಿಲ್ ಒರುವನ್ ಸಿನಿಮಾದಲ್ಲಿ ಧನುಶ್ ನಟಿಸಲಿದ್ದಾರೆ.

lokesh

Recent Posts

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

5 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

5 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

5 hours ago

ಸಿಎಂ ಕುಟುಂಬ ನಿವೇಶನ ಪಡೆದ ಪ್ರಕರಣ : ಡಿ.23ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ಸದಸ್ಯರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಈಗ ಎಂಡಿಎ)ದಿಂದ ಕಾನೂನು ಬಾಹಿರವಾಗಿ…

5 hours ago

ಭಾರತ-ಒಮಾನ್‌ ಮುಕ್ತ ವ್ಯಾಪಾರ ಒಪ್ಪಂದ : ಉಭಯ ದೇಶಗಳಿಗೂ ಶಕ್ತಿ ; ಮೋದಿ ಬಣ್ಣನೆ

ಒಮಾನ್ : ಭಾರತ ಮತ್ತು ಒಮಾನ್ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ವಿಶ್ವಾಸ…

6 hours ago

ನೇಮಕಾತಿ ವಿಳಂಬ | ಪ್ರತಿಧ್ವನಿಸಿದ ಪ್ರತಿಭಟನೆಗಳು

ಬೆಳಗಾವಿ : ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿ ವಿಳಂಬ ಮತ್ತು ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗಳು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದವು. ಪ್ರತಿಪಕ್ಷದ ನಾಯಕ ಆರ್.ಅಶೋಕ್…

6 hours ago