ಚಿತ್ರ ಮಂಜರಿ

ಕುತೂಹಲ ಮೂಡಿಸಿದ ನಟಿ ರಮ್ಯಾ  ಟ್ವೀಟ್‌ : ಅಭಿಮಾನಿಗಳಿಗೆ ನಾಳೆ ನೀಡಲಿರುವ ಸಿಹಿ ಸುದ್ದಿಯಾದರೂ ಏನು ?

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಅವರು ಗೌರಿ ಗಣೇಶ ಹಬ್ಬದಲ್ಲಿ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳಲಿದ್ದಾರಂತೆ. ಹೌದು ನಟಿ ರಮ್ಯಾ ಅವರು ನಾಳೆ ನಾಡಿನ ಜನತೆಗೆ ಹಾಗೂ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ಹಂಚಿಕೊಳ್ಳಲಿದ್ದಾರಂತೆ. ಈ ಬಗ್ಗೆ ಸ್ವತಃ ರಮ್ಯಾ ಅವರೇ ಟ್ವೀಟ್‌ ಮಾಡಿದ್ದು,

ನಾಳೆ ಅಂದರೆ ಗಣೇʻಶ ಹಬ್ಬದಂದು ಬೆಳಿಗ್ಗೆ 11.15 ಕ್ಕೆ ದೊಡ್ಡ ಅನೌನ್ಸ್‌ಮೆಂಟ್‌ ಇದೆಯೆಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಜೊತೆಗೆ ಹಲವು  ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನಟಿ ರಮ್ಯಾ ಅವರು ಮತ್ತೆ ಚಿತ್ರರಂಗದತ್ತ ಮುಖ ಮಾಡಲಿದ್ದಾರಾ ?  ಅವರ ಹೊಸಸಿನಿಮಾ ಯಾವುದು ? ಮದುವೆ ಬಗ್ಗೆ ಸಿಹಿ ಸುದ್ದಿ ನೀಡಲಿದ್ದಾರಾ ? ಎಂಬಿತ್ಯಾದಿ ಪ್ರಶ್ನೆಗಳನ್ನು ಅಭಿಮಾನಿಗಳಲ್ಲಿ ಹುಟ್ಟುಹಾಕಿದೆ.

ಈ ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ನಟಿ ರಮ್ಯಾ ಅವರು ನಾಳೆ ಉತ್ತರಿಸಲಿದ್ದಾರೆ. ಅಭಿಮಾನಿಕೆಲವು ದಿನಗಳ ಹಿಂದೆ ನಟ ಕಮ್ ನಿರ್ದೇಶಕ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೋಹಕ ತಾರೆ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅಂತಾ ಹೇಳಲಾಗಿತ್ತು. ಇದೀಗ ರಾಜ್ ಬಿ ಶೆಟ್ಟಿ ರಮ್ಯಾ ಅವರ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ.

ಮತ್ತೊಂದು ಖುಷಿ ವಿಚಾರ ಅಂದ್ರೆ ರಮ್ಯಾ ನಟಿಸುವುದರ ಜೊತೆಗೆ ಸ್ವತಃ ನಿರ್ಮಾಣ ಮಾಡುತ್ತಿರೋದು. ಈ ಮೂಲಕ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವ ಕಾಲ ಕೂಡಿ ಬಂದಿದ್ದು, ಅಭಿಮಾನಿಗಳು ಸಂತಸದಿಂದಿದ್ದಾರೆ.

andolanait

Recent Posts

ಸಚಿನ್‌ ಆತ್ಯಹತ್ಯೆ| ಪೊಲೀಸ್‌ ತನಿಖೆಗೂ ಮೊದಲೇ ಸಿಎಂ ಕ್ಲೀನ್‌ ಚೀಟ್‌: ಜೆಡಿಎಸ್‌ ವಾಗ್ದಾಳಿ

ಬೆಂಗಳೂರು: ಸಚಿವ ಪ್ರಿಯಾಂಕ್‌ ಖರ್ಗೆಗೆ ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣದಲ್ಲಿ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ತನಿಖೆಗೂ ಮೊದಲೇ ಕ್ಲೀನ್‌…

49 mins ago

ಡಾ.ಬಿ.ಆರ್.ಅಂಬೇಡ್ಕರ್‌ ಅವರ ಬಗ್ಗೆ ಅಮಿತ್‌ ಶಾ ಅವಹೇಳನಕಾರಿ ಹೇಳಿಕೆ: ಜ.7ಕ್ಕೆ ಮೈಸೂರು ಬಂದ್‌ಗೆ ಬೆಂಬಲಿಸುವಂತೆ ಪುರುಷೋತ್ತಮ್‌ ಮನವಿ

ಮೈಸೂರು: ಅಂಬೇಡ್ಕರ್‌ ಬಗ್ಗೆ ಅಮಿತ್‌ ಶಾ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಜನವರಿ.7 ರಂದು ಡಾ.ಬಿ.ಆರ್.ಅಂಬೇಡ್ಕರ್‌ ಅಭಿಮಾನಿಗಳ ಹೋರಾಟ ಸಮಿತಿಯು…

2 hours ago

ಪ್ರಿನ್ಸೆಸ್‌ ರಸ್ತೆ ಎಂಬುದಕ್ಕೆ ದಾಖಲೆಗಳಿಲ್ಲ ಎಂದ ಆಯುಕ್ತರು: ದಾಖಲೆಗಳನ್ಮೊಮ್ಮೆ ಸರಿಯಾಗಿ ಪರಿಶೀಲಿಸಬೇಕೆಂದು ಸಂಸದ ಯದುವೀರ್‌ ಟಾಂಗ್‌

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು, ‘ಕೆಆರ್‌ಎಸ್ ರಸ್ತೆಗೆ ಯಾವುದೇ ಅಧಿಕೃತ ಹೆಸರಿನ ಉಲ್ಲೇಖವಿಲ್ಲ’ ಎಂದು ಹೇಳಿದ್ದಾರೆ. ಆದರೆ ಅಧಿಕೃತವಾಗಿ…

2 hours ago

ರಾಜ್ಯ ಸರ್ಕಾರಕ್ಕೆ ಸರಿಯಾದ ಆರ್ಥಿಕ ಹಿಡಿತವಿಲ್ಲ: ಎಚ್‌.ವಿಶ್ವನಾಥ್‌

ಮೈಸೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಅನಗತ್ಯ ಖರ್ಚುಗಳಿಂದ ಕರ್ನಾಟಕದ ಇಂದಿನ  ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಬಂದು ತಲುಪಿದೆ ಎಂದು ಸರ್ಕಾರದ…

3 hours ago

ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ವಿವಾದ: ಪ್ರಿನ್ಸೆಸ್‌ ರಸ್ತೆಯ ಸ್ಟೀಕರ್‌ ರಾತ್ರೋರಾತ್ರಿ ತೆರವು

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿ ರಸ್ತೆಯ ಅಲ್ಲಲ್ಲಿ ನಿನ್ನೆ ಸಂಜೆ…

4 hours ago

ಭಾರತ vs ಆಸ್ಟ್ರೇಲಿಯಾ ಕೊನೆಯ ಟೆಸ್ಟ್:‌ ಆಡುವ ಬಳಗ ಪ್ರಕಟಿಸಿದ ಆಸ್ಟ್ರೇಲಿಯಾ

ಸಿಡ್ನಿ: ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಬಾರ್ಡರ್-ಗವಸ್ಕಾರ್‌ ಟ್ರೋಫಿಯ 5ನೇ ಹಾಗೂ ಕೊನೆಯ ಪಂದ್ಯವು ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಾಳೆಯಿಂದ…

4 hours ago