ಚಿತ್ರ ಮಂಜರಿ

ಸನ್ನಿ ಡಿಯೋಲ್‌ ಬಂಗಲೆ ಹರಾಜು: ಒಂದೇ ದಿನದಲ್ಲಿ ನೋಟಿಸ್‌ ವಾಪಸ್‌ ಪಡೆದ ಬ್ಯಾಂಕ್‌ ಆಫ್‌ ಬರೋಡಾ

ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿರುವ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್‌ ಅವರ ಬಂಗಲೆಯ ಹರಾಜು ನೋಟಿಸ್‌ ವಾಪಸ್‌ ಪಡೆದುಕೊಳ್ಳಲಾಗಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾ ಇಂದು ಹೇಳಿದೆ.

ಭಾನುವಾರ ಬ್ಯಾಂಕ್‌ ಇ-ಹರಾಜು ಮೂಲಕ ಸನ್ನಿ ಅವರ ಆಸ್ತಿಯನ್ನು ಆಗಸ್ಟ್‌ 25 ರಂದು ಹರಾಜು ಹಾಕಿ ಬಾಕಿಯಿರುವ ರೂ. 56 ಕೋಟಿ ಮೊತ್ತವನ್ನು ಈ ಮೂಲಕ ವಸೂಲು ಮಾಡಲಾಗುವುದು ಎಂದು ಹೇಳಿತ್ತು. ಗುರುದಾಸ್ಪುರ್‌ ಕ್ಷೇತ್ರದ ಸಂಸದರಾಗಿರುವ ಸನ್ನಿ ಡಿಯೋಲ್‌ ಡಿಸೆಂಬರ್‌ 2022ರಿಂದ ಬ್ಯಾಂಕ್‌ ಆಫ್‌ ಬರೋಡಾಗೆ ಅವರು ವಾಪಸ್‌ ನೀಡಬೇಕಿರುವ ರೂ 55.99 ಕೋಟಿ ನೀಡಿಲ್ಲ.

ಸನ್ನಿಯ ಬಂಗಲೆ- ಸನ್ನಿ ವಿಲ್ಲಾ ಹೊರತಾಗಿ ಅದರ ಸುತ್ತ ಇರುವ 599.44 ಚದರ ಮೀಟರ್‌ ಪ್ರದೇಶ ಹಾಗೂ ನಟನ ಕುಟುಂಬದ ಒಡೆತನದ ಸನ್ನಿ ಸೌಂಡ್ಸ್‌ ಕಂಪೆನಿಯನ್ನೂ ಹರಾಜು ಹಾಕಲಾಗುವುದು ಎಂದು ಬ್ಯಾಂಕ್‌ ಭಾನುವಾರ ಹೇಳಿತ್ತು. ಈ ಸಂಸ್ಥೆ ಸಾಲಕ್ಕೆ ಗ್ಯಾರೆಂಟರ್‌ ಆಗಿದ್ದರೆ ಸನ್ನಿ ಡಿಯೋಲ್‌ ತಂದೆ ಧರ್ಮೇಂದ್ರ ವೈಯಕ್ತಿಕ ಗ್ಯಾರಂಟರ್‌ ಆಗಿದ್ದರು.

ಆದರೆ ಇಂದು ಏಕಾಏಕಿ ಬ್ಯಾಂಕ್‌ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಹರಾಜು ನೋಟಿಸ್‌ ವಾಪಸ್‌ ಪಡೆದಿದೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನೋಟಿಸ್‌ ವಾಪಸಾತಿಗೆ ಕಾರಣವಾದ ತಾಂತ್ರಿಕ ಸಮಸ್ಯೆಯನ್ನು ಯಾರು ಉಂಟು ಮಾಡಿದರು ಎಂದು ಪ್ರಶ್ನಿಸಿದೆ.

“ಬ್ಯಾಂಕ್‌ 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ತನ್ನ ನೋಟಿಸ್‌ ವಾಪಸ್‌ ಪಡೆದಿರುವುದಕ್ಕೆ ಕಾರಣವೇನು” ಎಂದು ಪ್ರಶ್ನಿಸಿ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಟ್ವೀಟ್‌ ಮಾಡಿದ್ದಾರೆ.

andolanait

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

6 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

8 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

9 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

9 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

9 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

10 hours ago