ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ ಎಂಬ ನಿರ್ಮಾಪಕರ ಆರೋಪಕ್ಕೆ ಟ್ವೀಟ್ ಮೂಲಕ ಕಿಚ್ಚ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಡಿಸೆಂಬರ್ 2022 ರಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂಲಕ ಸುದೀಪ್ ಅವರಿಗೆ ಆರು ಪತ್ರಗಳನ್ನು ಬರೆದಿದ್ದೇನೆ, ಆದರೆ ಅವುಗಳಲ್ಲಿ ಒಂದಕ್ಕೆ ಮಾತ್ರ ಉತ್ತರಿಸಲಾಗಿದೆ ಎಂದು ಎಂಎನ್ ಕುಮಾರ್ ಆರೋಪ ಮಾಡಿದ್ದಾರೆ.
ಆಂಗ್ಲ ಭಾಷೆಯ ವಾಕ್ಯವನ್ನು ಉಲ್ಲೇಖಿಸಿರುವ ಸುದೀಪ್, ‘ಇದು ನಿಮಗೆ ತಿಳಿದಿರಲಿ. ಒಳ್ಳೆಯತನವು ಕುಶಲತೆ ಮತ್ತು ದುರುಪಯೋಗದ ಸಾಧನವಲ್ಲ. ಅದು ನಿಜವಾಗಿ ಪ್ರಕಾಶಿಸುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ವಿನಮ್ರರಾಗಿರಿ ಮತ್ತು ಸತ್ಯವಂತರಾಗಿರಿ’ ಎಂದು ಅರ್ಥ ಬರುವ ಮಾತೊಂದನ್ನು ಪೋಸ್ಟ್ ಮಾಡಿರುವ ಸುದೀಪ್ ಈ ಕೋಟ್ ನನಗೆ ಇಷ್ಟವಾಯಿತು. ನೀವೂ ಓದಿ ಎಂದಿದ್ದಾರೆ.
ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಸುದೀಪ್ ಈ ಟ್ವೀಟ್ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ, ಆದರೆ ಅವರ ಹಿತೈಷಿಗಳು ಹಾಗೂ ಹತ್ತಿರದವರು ಹೇಳುವ ಪ್ರಕಾರ, ಸುದೀಪ್ ಯಾರಿಗೂ ಹಿಂಜರಿಯುವುದಿಲ್ಲ, ತಮ್ಮ ವಿರುದ್ಧದ ಆರೋಪಗಳಿಗೆ ಅವರು ನೇರವಾಗಿಯೇ ಉತ್ತರ ತಿಳಿಸಲು ಬಯಸುತ್ತಾರೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.
ಸದ್ದು ಮಾಡದ ಕನ್ನಡ ಶಾಲೆಗಳ ಉಳಿವಿನ ಯೋಜನೆ ವಿಷಯ • ಚಿರಂಜೀವಿ ಸಿ. ಹುಲ್ಲಹಳ್ಳಿ ಮಂಡ್ಯ: ಕನ್ನಡ ನಾಡು ನುಡಿಗೆ…
'ಪುನಶ್ಚತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು' ಕುರಿತ ವಿಚಾರಗೋಷ್ಠಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕೈ ಪದ್ಮಶಾಲಿ ಆಗ್ರಹ ಜಿ.ತಂಗಂ ಗೋಪಿನಾಥಂ ಮಂಡ್ಯ:…
ಜಾಗತಿಕ ನೆಲೆಯಲ್ಲಿ ಕನ್ನಡ ಕಟ್ಟುವ ಬಗೆ ಕುರಿತ ಗೋಷ್ಠಿಯಲ್ಲಿ ಅಮೆರಿಕ ಕನ್ನಡ ಕೂಟ (ಅಕ್ಕ)ದ ಅಧ್ಯಕ್ಷ ಅಮರ್‌ನಾಥ್‌ಗೌಡ ಹೇಮಂತ್ ಕುಮಾರ್…
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…