ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರದಿಂದ ನಟನೆಗೆ ಎಂಟ್ರಿ ಕೊಟ್ಟಿದ್ದರು ಕೂಡ. ಸೌತ್ ಸಿನಿಮಾಗಳ ಮೂಲಕ ಹೆಚ್ಚು ಜನಪ್ರಿಯತೆ ಪಡೆದುಕೊಂಡವರು. ರಶ್ಮಿಕಾ ನಟಿಸಬೇಕಿದ್ದ ಸಿನಿಮಾಗಳು ಒಂದೊಂದೇ ಪ್ರಾಜೆಕ್ಟ್‌ಗಳು ಶ್ರೀಲೀಲಾ ಕೈ ಸೇರುತ್ತಿದೆ. ನಿತಿನ್ ಸಿನಿಮಾಶದಿಂದ ರಶ್ಮಿಕಾ ಹೊರಬಂದಿದ್ದರು. ಈ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಈ ಬೆನ್ನಲ್ಲೇ ರಶ್ಮಿಕಾ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ.
ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಮಂದಣ್ಣ ಅವರ ಮೇಲಿರುವ ಕ್ರೇಜ್ ಎಲ್ಲೂ ಕಮ್ಮಿ ಆಗಿಲ್ಲ. ಪುಷ್ಪ 2, ಅನಿಮಲ್, ರೈನ್ ಬೋ ಸಿನಿಮಾ ಅಂತಾ ನಟಿ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಶ್ರೀಲೀಲಾ ಎಂಟ್ರಿಯಿಂದ ರಶ್ಮಿಕಾ ಮಂದಣ್ಣಗೆ ಕೊಂಚ ಎಫೆಕ್ಟ್ ಆದಂತಿದೆ. ರಶ್ಮಿಕಾ ಕೈಯಲ್ಲಿ 4-5 ಪ್ರಾಜೆಕ್ಟ್ ಇದ್ರೆ, ಶ್ರೀಲೀಲಾ ಕೈಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿವೆ.
ಈ ಹಿಂದೆ ತೆಲುಗು ನಟ ನಿತಿನ್ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಫೈನಲ್ ಆಗಿದ್ದರು. ಆದರೆ ಏಕಾಏಕಿ ಏನಾಯ್ತೋ ಏನೋ ಸಿನಿಮಾ ತಂಡಕ್ಕೆ ನಟಿ ಗುಡ್ ಬೈ ಹೇಳಿದ್ದರು. ಹೀಗೆ ರಶ್ಮಿಕಾ ಕೈಬಿಟ್ಟ ಸಿನಿಮಾಗಳೆಲ್ಲ ಶ್ರೀಲೀಲಾ ಪಾಲಾಗುತ್ತಿದೆ. ಇದೆಲ್ಲದರನಡುವೆ ತೆಲುಗಿನಲ್ಲಿ ಡಿಮ್ಯಾಂಡ್ ಕಮ್ಮಿಯಾಗುತ್ತಿದ್ದಂತೆ ಕೊಡಗಿನ ಕುವರಿ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ರಶ್ಮಿಕಾ ನಟನೆಯ ಹೊಸ ಹಿಂದಿ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಅನೀಸ್ ಬಾಜ್ಮೀ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ.
ಗುಡ್ ಬೈ, ಮಿಷನ್ ಮಜ್ನು, ಅನಿಮಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಶಾಹಿದ್ ಕಪೂರ್ ಜೊತೆ ನಟಿಸಲು ರಶ್ಮಿಕಾ ಸಜ್ಜಾಗಿದ್ದಾರೆ. ಹೊಸ ಪ್ರೇಮಕಥೆಯನ್ನ ಹೇಳಲು ಈ ಜೋಡಿ ಸಜ್ಜಾಗಿದೆ. `ಏಕ್ ಸಾಥ್ ದೋ ದೋ’ ಎಂದು ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ಚಿತ್ರೀಕರಣ ಶುರುವಾಗಿದೆ.
ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಯಿಂದ ಮನೆಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿದ್ದು…
ರಾಜ್ಯದಲ್ಲಿ, ಸುಮಾರು ಮೂರು ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು, ಈ ಶಾಲೆಗಳು ಕುಸಿಯುವ ಹಂತ ತಲುಪಿವೆ ಎಂದು,…
ಎಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಕೆಂಡಗಣ್ಣಸ್ವಾಮಿ ಗದ್ದಿಗೆ ಮಾರ್ಗವಾಗಿ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಎರಡೂ ಬದಿಗಳಲ್ಲಿರುವ ಬಹುತೇಕ…
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣಗೊಂಡ ಕಟ್ಟಡಗಳು ಇಂದಿಗೂ ಸದೃಢವಾಗಿ ಕಂಗೊಳಿಸುತ್ತಿರುವುದು ಮೈಸೂರಿನ ಭವ್ಯ ಪರಂಪರೆಗೆ ಸಾಕ್ಷಿಯಾಗಿವೆ. ಇಂತಹ ಪಾರಂಪರಿಕ ಕಟ್ಟಡಗಳ…
ಮಡಿಕೇರಿ: ಓದುವ ಛಲ, ಆತ್ಮವಿಶ್ವಾಸ, ಪ್ರೋತ್ಸಾಹ, ಮಾರ್ಗದರ್ಶನವಿದ್ದರೆ ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ ಓದಿದರೂ ಉತ್ತಮ ಅಂಕ ಗಳಿಸಲು ಸಾಧ್ಯವಿದೆ. ಇದಕ್ಕೆ…
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪಿರಿಯಾಪಟ್ಟಣ: ತಂಗಿಗೆ ಆಸ್ತಿಯನ್ನು ನೀಡಲೇಬಾರದು ಎಂದು ತೀರ್ಮಾನಿಸಿ ತನ್ನ ಸೋದರ ಅಳಿಯನನ್ನು ಕೊಲ್ಲಲು…