ಕನ್ನಡದ ನಟಿ ಶ್ರೀಲೀಲಾಗೆ ತೆಲುಗಿನಲ್ಲಿ ಆಫರ್ ಮೇಲೆ ಆಫರ್ ಬರುತ್ತಿವೆ. ರಶ್ಮಿಕಾ ಮಂದಣ್ಣ – ಪೂಜಾ ಹೆಗ್ಡೆಗೆ ಸೆಡ್ಡು ಹೊಡೆದು ಶ್ರೀಲೀಲಾ ಈಗ ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ- ತ್ರಿಷಾ ನಟನೆಯ ಸಿನಿಮಾದಲ್ಲಿ ಭರಾಟೆ ನಟಿ ನಟಿಸುವ ಬಂಪರ್ ಆಫರ್ ಬಾಚಿಕೊಂಡಿದ್ದಾರೆ.
ಕನ್ನಡದ 3 ಸಿನಿಮಾ, ತೆಲುಗಿನಲ್ಲಿ 8ಕ್ಕೂ ಹೆಚ್ಚು ಚಿತ್ರಗಳಿಗೆ ಲೀಲಾ ನಾಯಕಿಯಾಗಿದ್ದಾರೆ. ತೆಲುಗಿನಲ್ಲಿ ಬಿಗ್ ಬ್ಯಾನರ್ ಚಿತ್ರಗಳಿಗೆ ರಶ್ಮಿಕಾ, ಪೂಜಾ, ಕೃತಿ ಶೆಟ್ಟಿ ಅವರೇ ಬೇಕು ಎಂದು ಭಜನೆ ಮಾಡುತ್ತಿದ್ದ ನಿರ್ಮಾಪಕರ ಪಾಲಿಗೆ ಇಷ್ಟದೇವತೆಯಾಗಿ ಶ್ರೀಲೀಲಾ ಎಂಟ್ರಿ ಕೊಟ್ಟಿದ್ದಾರೆ.
ತೆಲುಗಿನ ಬಿಗ್ ಬಜೆಟ್ ಸಿನಿಮಾವೊಂದಕ್ಕೆ ಮೆಗಾಸ್ಟಾರ್ ಚಿರಂಜೀವಿ- ನಟಿ ತ್ರಿಷಾ ಕೃಷನ್ ಜೋಡಿಯಾಗಿ ಬರುತ್ತಿದ್ದಾರೆ. ಮಲಯಾಳಂ ಬ್ರೋ ಡ್ಯಾಡಿ ಸಿನಿಮಾವನ್ನ ತೆಲುಗಿಗೆ ರಿಮೇಕ್ ಮಾಡಲಾಗುತ್ತಿದೆ. ಹಾಗಾಗಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮೆಗಾಸ್ಟಾರ್, ತ್ರಿಷಾ ಇರಲಿದ್ದಾರೆ. ಇವರ ಜೊತೆ ತೆಲುಗಿನ ಹೀರೋ ಶರ್ವಾನಂದ್ ಕೂಡ ಆಕ್ಟ್ ಮಾಡ್ತಿದ್ದಾರೆ.
ಬ್ರೋ ಡ್ಯಾಡಿ ತಂದೆ-ಮಗನ ಕುರಿತ ಸಿನಿಮಾವಾಗಿದ್ದು ಚಿರಂಜೀವಿ- ತ್ರಿಷಾ, ಪತಿ ಮತ್ತು ಪತ್ನಿ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿರಂಜೀವಿ ಮಗನ ಪಾತ್ರಕ್ಕೆ ಶರ್ವಾನಂದ್ ಫೈನಲ್ ಆಗಿದ್ದಾರೆ. ಶರ್ವಾನಂದ್‌ಗೆ ನಾಯಕಿಯಾಗಿ ಶ್ರೀಲೀಲಾ ಫಿಕ್ಸ್ ಆಗಿದ್ದಾರೆ. ಈ ಚಿತ್ರಕ್ಕೆ ಮೆಗಾಸ್ಟಾರ್ ಪುತ್ರಿ ಸುಶ್ಮಿತಾ ಕೊನಿಡೆಲಾ ಅವರು ನಿರ್ಮಾಣ ಮಾಡ್ತಿದ್ದಾರೆ.
ಮಲಯಾಳಂನಲ್ಲಿ 2022ರಲ್ಲಿ ಬ್ರೋ ಡ್ಯಾಡಿ ಸಿನಿಮಾ ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು. ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಮೀನಾ, ಕಲ್ಯಾಣಿ ಪ್ರಿಯಾದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಮಾಲಿವುಡ್‌ನಲ್ಲಿ ಹಿಟ್ ಆಗಿತ್ತು.ಈಗ ಇದೇ ಚಿತ್ರವನ್ನು ತೆಲುಗಿನಲ್ಲಿ ತರಲು ಪ್ಲ್ಯಾನ್ ಮಾಡಿದ್ದಾರೆ. ಇದು ಸದ್ಯ ಟಾಲಿವುಡ್‌ನ ಹಾಟ್ ಟಾಪಿಕ್ ಆಗಿದ್ದು, ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.
ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…
ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…
ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್…
ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…
ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…
ಚೆನ್ನೈ : ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…